ಮೈಸೂರು ಜಿಲ್ಲೆಗೆ ಹಸಿರು ಹೊದಿಸಲು 9 ಲಕ್ಷ ಸಸಿ ನಾಟಿ!

|

Updated on: May 22, 2020 | 1:21 PM

ಮೈಸೂರು: ಜಿಲ್ಲೆಯನ್ನು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಸಜ್ಜಾಗಿದೆ. ಹೀಗಾಗಿ ಈ ವರ್ಷ 9 ಲಕ್ಷ ಸಸಿ ನೆಡಲು ಇಲಾಖೆ ಮುಂದಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ 2020ನೇ ಸಾಲಿನ ಮಳೆಗಾಲದ ವರ್ಷದಲ್ಲಿ ಸಾರ್ವಜನಿಕರು, ರೈತರು ಹಾಗೂ ಸಂಘ ಸಂಸ್ಥೆಗಳಿಗೆ ಸಸಿಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ. ವಿವಿಧ ಯೋಜನೆಗಳಡಿ ತೇಗ, ಶ್ರೀಗಂಧ, ಹೆಬ್ಬೇವು, ಮಹಾಗನಿ, ಹೊಂಗೆ, ಬೇವು, ಬಿದಿರು ಸೇರಿ ವಿವಿಧ ಜಾತಿಯ ಸಸಿಗಳನ್ನು ಈಗಾಗಲೇ ನರ್ಸರಿಯಲ್ಲಿ ಬೆಳೆಯಲಾಗಿದೆ. ಈ ಸಸಿಗಳನ್ನು […]

ಮೈಸೂರು ಜಿಲ್ಲೆಗೆ ಹಸಿರು ಹೊದಿಸಲು 9 ಲಕ್ಷ ಸಸಿ ನಾಟಿ!
Follow us on

ಮೈಸೂರು: ಜಿಲ್ಲೆಯನ್ನು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಸಜ್ಜಾಗಿದೆ. ಹೀಗಾಗಿ ಈ ವರ್ಷ 9 ಲಕ್ಷ ಸಸಿ ನೆಡಲು ಇಲಾಖೆ ಮುಂದಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ 2020ನೇ ಸಾಲಿನ ಮಳೆಗಾಲದ ವರ್ಷದಲ್ಲಿ ಸಾರ್ವಜನಿಕರು, ರೈತರು ಹಾಗೂ ಸಂಘ ಸಂಸ್ಥೆಗಳಿಗೆ ಸಸಿಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ.

ವಿವಿಧ ಯೋಜನೆಗಳಡಿ ತೇಗ, ಶ್ರೀಗಂಧ, ಹೆಬ್ಬೇವು, ಮಹಾಗನಿ, ಹೊಂಗೆ, ಬೇವು, ಬಿದಿರು ಸೇರಿ ವಿವಿಧ ಜಾತಿಯ ಸಸಿಗಳನ್ನು ಈಗಾಗಲೇ ನರ್ಸರಿಯಲ್ಲಿ ಬೆಳೆಯಲಾಗಿದೆ. ಈ ಸಸಿಗಳನ್ನು ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಬೇಕಾದ ಸಸಿಗಳನ್ನ ಜಿಲ್ಲೆಯ ಆಯಾ ತಾಲೂಕಿನ ಸ್ಥಳಿಯ ಅರಣ್ಯ ಇಲಾಖೆಯ ವಲಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ  ವಿತರಣೆ:
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯು ರೈತರ ಆಧಾಯವನ್ನು ವೃದ್ದಿಸುವ ಜೊತೆ ಜೊತೆಗೆ ಅರಣ್ಯೇತರ ಭೂ ಪ್ರದೇಶ, ರೈತರ ಜಮೀನಿನಲ್ಲಿ ಹಸಿರನ್ನು ಹೆಚ್ಚಿಸುವ ಉದ್ದೇಶ ಹೊಂದಿದ ವಿಶಿಷ್ಠವಾದ ಯೋಜನೆಯಾಗಿದೆ. ರೈತರು ಕೃಷಿ ಪ್ರೋತ್ಸಹ ಯೋಜನೆಯಡಿಯಲ್ಲಿ ಗಿಡಗಳನ್ನು ಪಡೆದು, ತಮ್ಮ ಜಮೀನಿನಲ್ಲಿ ಈ ವರ್ಷ ಗಿಡಗಳನ್ನು ನೆಡಬಹುದು. ಮುಂದಿನ ವರ್ಷ ಆ ಗಿಡಗಳ ಮೇಲೆ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ.

ಪ್ರತಿ ಹೆಕ್ಟೇರ್​ಗೆ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತೆ. ಮೊದಲ ವರ್ಷದ ಅಂತ್ಯ ಹಾಗೂ ಎರಡನೇ ವರ್ಷದ ಅಂತ್ಯದ ವರೆಗೆ ಸಸಿಗಳು ಬದುಕುಳಿದರೆ ಪ್ರತಿ ಗಿಡಕ್ಕೆ 30 ರೂ ಹಾಗೂ ನಾಲಕ್ಕನೆ ವರ್ಷ ಬದುಕಿದ್ದರೆ ಗಿಡಕ್ಕೆ 40 ರೂ ಪ್ರೋತ್ಸಾಹ ಧನವನ್ನು ಚೆಕ್ ಮೂಲಕ ಇಲಾಖೆ ನೀಡುತ್ತೆ. ಇದರ ಜೊತೆಗೆ ಮೈಸೂರು ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿ ಈ ಬಾರಿ 500 ಹೆಕ್ಟೇರ್ ಕ್ಷೇತ್ರ ನಡುತೋಪು, 50 ಕಿ.ಮೀ ನಗರ ಪ್ರದೇಶದ ರಸ್ತೆಬದಿ ನಡುತೋಪು ನಿರ್ಮಿಸುವ ಕಾರ್ಯವನ್ನು ಅರಣ್ಯ ಇಲಾಖೆ ಈಗಾಗಲೇ ಪ್ರಾರಂಭಿಸಿದೆ.

Published On - 11:17 am, Fri, 22 May 20