ಎಸ್​ಸಿ, ಎಸ್​​ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ಮತವಾಗಿ ಪರಿವರ್ತನೆಯಾಗುವುದಿಲ್ಲ: ಬಿಜೆಪಿಗೆ ಹೆಚ್​ಡಿಕೆ ಟಾಂಗ್

| Updated By: ವಿವೇಕ ಬಿರಾದಾರ

Updated on: Oct 08, 2022 | 3:44 PM

ಎಸ್​ಸಿ, ಎಸ್​​ಟಿ ಸಮುದಾಯಕ್ಕೆ ಮೀಸಲಾತಿ ನೀಡುವುದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಾಸ್ವಾಮಿ ವಾಗ್ದಾಳಿ

ಎಸ್​ಸಿ, ಎಸ್​​ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ಮತವಾಗಿ ಪರಿವರ್ತನೆಯಾಗುವುದಿಲ್ಲ: ಬಿಜೆಪಿಗೆ  ಹೆಚ್​ಡಿಕೆ ಟಾಂಗ್
ಹೆಚ್ ಡಿ ಕುಮಾರಸ್ವಾಮಿ
Follow us on

ಮೈಸೂರು: ಎಸ್​ಸಿ, (SC) ಎಸ್​​ಟಿ (ST) ಸಮುದಾಯಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಸಿದ ಕುರಿತು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಾಸ್ವಾಮಿ ಮಾತನಾಡಿ ಮೀಸಲಾತಿ ನೀಡುವುದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನ್ಯಾ. ನಾಗಮೋಹನದಾಸ್ ಅವರು ಎರಡು ವರ್ಷದ ಹಿಂದೆಯೇ ಮೀಸಲಾತಿ ಹೆಚ್ಚಳ ಕುರಿತಾದ ವರದಿ ಕೊಟ್ಟಿದ್ದರು. ಈಗ ಅದನ್ನು ಅನುಷ್ಟಾನ ಮಾಡುತ್ತಿದ್ದಾರೆ. ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತು ಎಂದು ಹೇಳಿದರು.

ರಾಜಕೀಯ ಮುಖಂಡರುಗಳೇ ತಮಗಾಗಿ ತಮ್ಮ ಅನುಕೂಲಕ್ಕಾಗಿ ಮೀಸಲಾತಿ ಹೋರಾಟವನ್ನು ಹುಟ್ಟು ಹಾಕಿದ್ದಾರೆ. ಮುಂದೊಂದು ದಿನ ಅದು ಅವರಿಗೆ ತಿರುಗು ಬಾಣ ಆಗುತ್ತದೆ. ಸರ್ಕಾರ ಜೇನುಗೂಡಿಗೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದೆ ಎಂದರು.

ಕೇಂದ್ರೀಯ ಪರೀಕ್ಷೆಗಳಲ್ಲಿ ಹಿಂದಿ, ಇಂಗ್ಲೆಷ್​ಗೆ ಮಾತ್ರ ಆದ್ಯತೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಕೇಂದ್ರದ ಆಧೀನದ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇದು ವ್ಯವಸ್ಥಿತವಾಗಿ ಹಿಂದಿಯನ್ನು ಹೇರುವ ಪ್ರಕ್ರಿಯೆಯಾಗಿದೆ. ಈಗ ಡಿಟಿಹೆಚ್​​ಗಳಲ್ಲೂ ಇಂಗ್ಲಿಷ್​ ಜೊತೆ ಹಿಂದಿ ಬರುತ್ತಿದೆ. ಇದರಿಂದ ಪ್ರಾದೇಶಿಕ ಭಾಷೆಗಳಿಗೆ ಅಪಾಯ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಈ ನಿಲುವು ಖಂಡನೀಯ ಎಂದು ಖಂಡಿಸಿದರು.

ಟಿಪ್ಪು ಎಕ್ಸ್​​ಪ್ರೆಸ್​ಗೆ ಒಡೆಯರ್ ಎಕ್ಸ್​​ಪ್ರೆಸ್​​ ಎಂದು ಮರುನಾಮಕರಣ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ಇದು ಕೂಡ ವೋಟ್​​ ಬ್ಯಾಂಕ್​ನ ಒಂದು ಭಾಗ. ಭಾವನಾತ್ಮಕವಾಗಿ ಜನರನ್ನು ಸೆಳೆಯುವ ತಂತ್ರ ಇದು. ಹೆಸರು ಬದಲಾದ ಮಾತ್ರಕ್ಕೆ ಜನರ ಜೀವನ ಬದಲಾಗಲ್ಲ. ಆಯಾ ಕಾಲಕ್ಕೆ ಈ ತರದ ಬದಲಾವಣೆ ನಡೆಯುತ್ತಿರುತ್ತವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ