ಚಾಮುಂಡೇಶ್ವರಿ ದೇವಿಯ ಆಷಾಢ ಮಾಸದ ವಿಶೇಷ ಪೂಜೆಗೆ ಬರುವ ಭಕ್ತರಿಗೆ ಕೊರೊನಾ 2ನೇ ಡೋಸ್​​, ನೆಗೆಟಿವ್ ವರದಿ ಕಡ್ಡಾಯ

| Updated By: ವಿವೇಕ ಬಿರಾದಾರ

Updated on: Jun 22, 2022 | 3:03 PM

ನಾಡದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ತಾಯಿಗೆ ಆಷಾಢ ಮಾಸದಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಈ ಪೂಜೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ 2ನೇ ಡೋಸ್​​ ಪಡೆದಿರುವ ಜೊತೆಗೆ ನೆಗೆಟಿವ್ ವರದಿಯ ಪ್ರತಿ ಕಡ್ಡಾಯ ತರಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ.

ಚಾಮುಂಡೇಶ್ವರಿ ದೇವಿಯ ಆಷಾಢ ಮಾಸದ ವಿಶೇಷ ಪೂಜೆಗೆ ಬರುವ ಭಕ್ತರಿಗೆ ಕೊರೊನಾ 2ನೇ ಡೋಸ್​​, ನೆಗೆಟಿವ್ ವರದಿ ಕಡ್ಡಾಯ
ಚಾಮುಂಡೇಶ್ವರಿ ದೇವಿ ದೇವಸ್ಥಾನ
Follow us on

ಮೈಸೂರು: ನಾಡದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ (Chamundeshwari) ತಾಯಿಗೆ ಆಷಾಢ ಮಾಸದಲ್ಲಿ ವಿಶೇಷ ಪೂಜೆ (Worship) ನೆರವೇರಲಿದ್ದು, ಈ ಪೂಜೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ (Covid 19) 2ನೇ ಡೋಸ್​ (2d Dose vaccine)​ ಪಡೆದಿರುವ ಜೊತೆಗೆ ನೆಗೆಟಿವ್  (negative) ವರದಿಯ ಪ್ರತಿ ಕಡ್ಡಾಯ ತರಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದ(Ashada Masa) ಶುಕ್ರವಾರ ಚಾಮುಂಡಿಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಪೂಜೆಯನ್ನು ಕಣ್ಣತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಬಂದು ತಾಯಿಯ ದರ್ಶನ ಪಡೆಯುತ್ತಾರೆ.

ಇದನ್ನು ಓದಿ: ಜಿ7 ಶೃಂಗಸಭೆಗಾಗಿ ಜೂನ್ 26-27 ರಂದು ಜರ್ಮನಿಗೆ, 28ರಂದು ಯುಎಇಗೆ ಭೇಟಿ ನೀಡಲಿದ್ದಾರೆ ಮೋದಿ

ಆದರೆ ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದ ಆಷಾಢ ಮಾಸದ ವಿಶೇಷ ಪೂಜೆಗೆ ಭಕ್ತರಿಲ್ಲದೆ ದೇವಸ್ಥಾನ ಬಣಗುಡುತ್ತಿತ್ತು. ಕೊರೊನಾ ಸಮಯದಲ್ಲಿ ಮುಂಚಾನೆ 5 ಗಂಟೆಗೆ ಪೂಜೆ ಪ್ರಾರಂಭಿಸಿ 8 ಗಂಟೆಯಷ್ಟರ ಹೊತ್ತಿಗೆ ಪೂಜಾ ಕೈಂಕರ್ಯಗಳು ಮುಕ್ತಾಯಗೊಳ್ಳುತ್ತಿದ್ದವು. 8 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿತ್ತು. ಕೊರೊನಾ ಕಾರಣದಿಂದ ಭಕ್ತಿರಿಗೆ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದ್ದರು. ಆದರೆ ಈ ವರ್ಷ ಕೆಲವು ಸಡಿಲಿಕೆಯನ್ನು ನೀಡಿದ್ದು, ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ 2ಡೋಸ್​ ಲಸಿಕೆ ಪಡೆದಿರಬೇಕು ಮತ್ತು ಕೊರೊನಾ ನೆಗಟಿವ್​​​​ ವರದಿ ತಂದಿರಬೇಕು.

ಇದನ್ನು ಓದಿ:  ಕಾಲ್​ ಕನ್ವರ್ಟ್ ಅಡ್ಡೆಗಳ ಮೇಲೆ ಸಿಸಿಬಿ ದಾಳಿ: ಕೇರಳ ಮೂಲದ ವ್ಯಕ್ತಿಯ ಬಂಧನ

ಪ್ರತಿ ವರ್ಷ ಆಷಾಢ ಶುಕ್ರವಾರಗಳಂದು ಮಾತ್ರವಲ್ಲದೆ, ಪ್ರತಿ ದಿನವೂ ಸಾವಿರಾರು ಮಂದಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ಮುಂಜಾನೆಯೇ ಅಲಂಕಾರದಿಂದ ಕಂಗೊಳಿಸುವ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ತಮ್ಮ ಹರಕೆ ಸಮರ್ಪಿಸಿ ಭಕ್ತಿಭಾವ ಮೆರೆಯುತ್ತಾರೆ. ಈ ಸಂದರ್ಭದಲ್ಲಿ ಬೆಟ್ಟದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.