ಮೈಸೂರು: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ. ಕಾಂಗ್ರೆಸ್ ಪಕ್ಷ ಮುಗಿಸಿಯೇ ಅವರು ಹೋಗುವುದು ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರವರನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕರೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಯಾಕೆ ಆ ಕ್ಷೇತ್ರಗಳಲ್ಲಿ ಯಾರೂ ಗಂಡಸರು ಇಲ್ಲವಾ? ನೀವು ಪ್ರಮುಖ ನಾಯಕರೆಂದು ಯಾರು ಕರೆಯುತ್ತಿದ್ದಾರೆ? ಯಾರೋ ಕೆಲವು ಚಮಚಗಳು ಕರೆಯುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ. ಕಾಂಗ್ರೆಸ್ ಮುಗಿಸಿಯೇ ಅವರು ಹೋಗುವುದು ಎಂದು ಮೈಸೂರಿನಲ್ಲಿ ಎಂ.ಎಲ್.ಸಿ ಹೆಚ್ ವಿಶ್ವನಾಥ್ ಹೇಳಿದ್ರು.
ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ ನಮ್ಮ ಜೊತೆ ಮಲಗಿದರೊಡನೆ ಅನೈತಿಕತೆನಾ?
ಇನ್ನು ನನ್ನ ಸಂಪರ್ಕದಲ್ಲಿ ಬೇರೆ ಪಕ್ಷದ ಶಾಸಕರು ಸಚಿವರಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಚ್ ವಿಶ್ವನಾಥ್ ಮತ್ತೆ ತಿರುಗೇಟು ಕೊಟ್ಟಿದ್ದಾರೆ. ಮಿಸ್ಟರ್ ಸಿದ್ದರಾಮಯ್ಯ 15 ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ ? ನಾವು 17 ಜನ ಹೋದಾಗ ಏನೆಲ್ಲಾ ಮಾತನಾಡಿದಿರಿ? ರಮೇಶ್ ಕುಮಾರ್ ಕೈಲಿ ಏನೆಲ್ಲಾ ಮಾಡಿಸಿದಿರಿ. ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ ನಮ್ಮ ಜೊತೆ ಮಲಗಿದರೊಡನೆ ಅನೈತಿಕತೆನಾ? ಎಂದು ಹೆಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ. ಜನರನ್ನು ದಡ್ಡರು ಅಂದುಕೊಂಡಿದ್ದೀರಾ. ಅವರಿಗೆ ಎಲ್ಲಾ ಗೊತ್ತಿದೆ ನಿಮಗೆ ಪಾಠ ಕಲಿಸುತ್ತಾರೆ. ನನ್ನನ್ನು ಸಿ.ಎಂ ಇಬ್ರಾಹಿಂರನ್ನು ಸಿದ್ದರಾಮಯ್ಯ ಜೀವ ಇರುವವರೆಗೂ ನೆನಪಿಸಿಕೊಳ್ಳಬೇಕು. ಎಸ್ ಆರ್ ಪಾಟೀಲ್ ಅವರನ್ನು ಮುಗಿಸಿದ್ದು ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಡಲಿಲ್ಲ. ಚಿಮ್ಮನಕಟ್ಟಿ ಮನೆ ಹಾಳಾಗಿದ್ದು ಸಿದ್ದರಾಮಯ್ಯರಿಂದ. ಯಾರ ಮನೆ ಹಾಳಾದರೂ ನೀವು ಚೆನ್ನಾಗಿದ್ದೀರಾ. ನಿನಗೆ ದೆಹಲಿಯಲ್ಲಿ ಯಾರು ಗೊತ್ತಿದ್ದರು? ಖರ್ಗೆ, ಎಸ್ಎಂ ಕೃಷ್ಣ ಸಹಾಯ ಮಾಡಿದಕ್ಕೆ ಕಾಂಗ್ರೆಸ್ ಪಕ್ಷ ಸೇರಿದ್ದು. ಕೃತಜ್ಞತೆಯೇ ಇಲ್ಲದ ಜನ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೆದ್ದು ತೋರಿಸಲಿ. ಸಿಎಂ ಇಬ್ರಾಹಿಂ ಸರಿಯಾಗಿಯೇ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಈಗ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು
ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು ಎಂದು ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಕುರುಬರನ್ನು ಬೆಳೆಸಲಿಲ್ಲ, ಎಲ್ಲರನ್ನ ಮುಗಿಸಿದ್ರು. ಈಗ ಕುರುಬರ ಕ್ಷೇತ್ರಗಳಿಗೆ ಬೇರೆಯವರನ್ನ ಕರೆತರುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಯಾರನ್ನೂ ಬೆಳೆಯಲು ಬಿಡಲಿಲ್ಲ. ಅವರಿಗಿಂತ ಬಿಳಿ ಬಟ್ಟೆ ಬೇರೆ ಯಾರೂ ಹಾಕುವಂತಿಲ್ಲ. ನನ್ನನ್ನು ಮುಗಿಸಿದರು, ಹೆಚ್.ಎಂ.ರೇವಣ್ಣನನ್ನು ಮುಗಿಸಿದರ.. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ರೋಷನ್ ಬೇಗ್ ಎಲ್ಲಿ? ಇವರೆಲ್ಲರನ್ನೂ ಮುಗಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ತತ್ವ ಸಿದ್ಧಾಂತ ಬೇರೆ, ಸಿದ್ದರಾಮಯ್ಯ ಸಿದ್ಧಾಂತ ಬೇರೆ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು U.T.ಖಾದರ್‌ಗೆ ಪರಿಷತ್ ಉಪನಾಯಕ ಸ್ಥಾನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಹೆಚ್.ವಿಶ್ವನಾಥ್, ಪರಿಷತ್ ಉಪನಾಯಕ ಸ್ಥಾನದಿಂದ ಏನೂ ಪ್ರಯೋಜನವಿಲ್ಲ. ಅವರದ್ದು ಏನೂ ಕೆಲಸ ಇಲ್ಲ, ಯಾವ ಸೌಲಭ್ಯವೂ ಇಲ್ಲ. ಹುಲಿ ಶಿಕಾರಿಗೆ ಹುಲಿಯನ್ನೇ ಕಟ್ಟಬೇಕು ಕುರಿಯನ್ನು ಅಲ್ಲ. ಕಾಂಗ್ರೆಸ್ ಹಳ್ಳಹಿಡಿಸುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ ಎಂದರು.
ಶಾಸಕರು ಕ್ಷೇತ್ರದ ಮಾಲೀಕರಲ್ಲ, ಸೇವಕರು
ಇನ್ನು ಮತ್ತೊಂದೆಡೆ ರಸ್ತೆ ಹಾಳಾಗಲು ಬಿಡಲ್ಲವೆಂದು ಶಾಸಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶಾಸಕರು ಕ್ಷೇತ್ರದ ಮಾಲೀಕರಲ್ಲ, ಸೇವಕರು. ಚುನಾವಣೆಗೆ ಹೋದಾಗ ಸೇವೆಗೆ ಅವಕಾಶವನ್ನು ಕೇಳುತ್ತೇವೆ. ಕೆಲವರು ತಾವು ಸೇವಕರು ಅನ್ನೋದನ್ನು ಮರೆಯುತ್ತಿದ್ದಾರೆ. ಬಹುತೇಕ ಶಾಸಕರು, ಮಂತ್ರಿಗಳು ರಿಯಲ್ ಎಸ್ಟೇಟ್‌ನವರು. ಅವರಿಗೆ ಹೆಚ್ಚಿಗೆ ಹೇಳುವುದು ಬೇಡ ಎಂದು ಶಾಸಕ H.ವಿಶ್ವನಾಥ್ ಹೇಳಿದ್ರು.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕಾರ ಮಾಡಿದ್ದಾರೆ
Published On - 12:12 pm, Mon, 31 January 22