2017ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕರಣ; ಹಾರೋಹಳ್ಳಿ ರವೀಂದ್ರ ಬಂಧನ

| Updated By: sandhya thejappa

Updated on: Apr 30, 2022 | 11:20 AM

ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದಾರೆಂದು ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರಕರಣ ದಾಖಲಾಗಿತ್ತು. ಚಿಕ್ಕೋಡಿ ನ್ಯಾಯಾಲಯದಿಂದ ನಾನ್ ಬೇಲೆಬಲ್ ವಾರಂಟ್ ಜಾರಿಯಾದ ಹಿನ್ನೆಲೆ ನಿನ್ನೆ ರವೀಂದ್ರ ಹಾರೋಹಳ್ಳಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

2017ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕರಣ; ಹಾರೋಹಳ್ಳಿ ರವೀಂದ್ರ ಬಂಧನ
ಬಂಧನಕ್ಕೊಳಗಾದ ಹಾರೋಹಳ್ಳಿ ರವೀಂದ್ರ
Follow us on

ಮೈಸೂರು: 2017ರಲ್ಲಿ ಫೇಸ್​​ಬುಕ್​ನಲ್ಲಿ (Facebook) ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಮೈಸೂರಿನ ವರುಣ ಗ್ರಾಮದ ಬರಹಗಾರ ಹಾರೋಹಳ್ಳಿ ರವೀಂದ್ರ ಅರೆಸ್ಟ್ ಆಗಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ರವೀಂದ್ರನನ್ನು ಬಂಧಿಸಿದ್ದಾರೆ. ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ರವೀಂದ್ರ 2019ರಿಂದ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಅರೆಸ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡುತ್ತು. ಜಾತ್ಯತೀತರಿಗೆ ಅಪ್ಪ-ಅಮ್ಮ ಇಲ್ಲ ಎಂದು 2017ರಲ್ಲಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಪೋಸ್ಟ್ ಮಾಡಿದ್ದರು. ಈ ಹೇಳಿಕೆ ವಿರುದ್ಧ ಹಾರೋಹಳ್ಳಿ ರವೀಂದ್ರ ಪೋಸ್ಟ್ ಹಾಕಿದ್ದರು.

ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದಾರೆಂದು ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರಕರಣ ದಾಖಲಾಗಿತ್ತು. ಚಿಕ್ಕೋಡಿ ನ್ಯಾಯಾಲಯದಿಂದ ನಾನ್ ಬೇಲೆಬಲ್ ವಾರಂಟ್ ಜಾರಿಯಾದ ಹಿನ್ನೆಲೆ ನಿನ್ನೆ ರವೀಂದ್ರ ಹಾರೋಹಳ್ಳಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ರವೀಂದ್ರನನ್ನು ಬಂಧಿಸಿ ಚಿಕ್ಕೋಡಿಗೆ ಕರೆ ತಂದಿದ್ದಾರೆ. ಇಂದು ಚಿಕ್ಕೋಡಿ ನ್ಯಾಯಾಲಯಕ್ಕೆ ರವೀಂದ್ರನನ್ನ ಹಾಜರು ಪಡಿಸಲಿದ್ದಾರೆ. ಅವಹೇಳನಕಾರಿ ಪೋಸ್ಟ್ ಬಗ್ಗೆ ಇಂದು ಚಿಕ್ಕೋಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ.

2017 ಡಿಸೆಂಬರ್​ನಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ರವೀಂದ್ರ ಹಾರೋಹಳ್ಳಿ ಹಾಗೂ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಚೇತನ ಹೊನ್ನಗೋಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಚಂದ್ರಶೇಖರ ಮುಂಡೆ ಎಂಬುವವರು ರವೀಂದ್ರ ಹಾಗೂ ಚೇತನ ವಿರುದ್ಧ ದೂರು ದಾಖಲಿಸಿದ್ದರು. ಚೇತನ ಹೊನ್ನಗೋಳ ಕೋರ್ಟ್​ಗೆ ಹಾಜರಾದರು. ಆದರೆ 2019 ರಿಂದ ಇದುವರೆಗೂ ರವೀಂದ್ರ ಕೋರ್ಟ್​ಗೆ ಹಾಜರಾಗಿಲ್ಲ. 2019 ರಿಂದಲೂ ಚಿಕ್ಕೋಡಿ ಪೊಲೀಸರ ಕೈಗೆ ಸಿಗದೆ ರವೀಂದ್ರ ಹಾರೋಹಳ್ಳಿ ತಲೆ ಮರೆಸಿಕೊಂಡಿದ್ದರು.

ಟ್ವೀಟ್ ಮಾಡಿ ಖಂಡಿಸಿದ ಬಿಕೆ ಹರಿಪ್ರಸಾದ್:
ಕಾಂಗ್ರೆಸ್​ನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್​ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಕಾರಣಕ್ಕಾಗಿ ದಲಿತ ಪರ ಹೋರಾಟಗಾರರ ಬಂಧನ ಆಗಿದೆ. ಹೋರಾಟಗಾರರು, ಬರಹಗಾರರನ್ನ ಗುರಿಯಾಗಿಸಿಕೊಂಡು ಬಂಧಿಸುತ್ತಿರುವ ಬಿಜೆಪಿ ಸರ್ಕಾರದ ಪ್ಯಾಶಿಷ್ಟ ನಡೆಯನ್ನು ಖಂಡಿಸುತ್ತೇನೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿ. ಕೂಡಲೆ ರವೀಂದ್ರನನ್ನು ಬಿಡುಗಡೆ ಮಾಡಬೇಕು ಎಂದರು.

ಇದನ್ನೂ ಓದಿ

ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ; ಮತ್ತೆ ಶುರುವಾಯ್ತು ಸಚಿವ ಸಂಪುಟ ವಿಸ್ತರಣೆ ಕುತೂಹಲ, ಚರ್ಚೆ

Jeff Bezos: ಗಂಟೆಗಳಲ್ಲಿ ಕಾಣದಂತೆ ಮಾಯವಾಯಿತು ಜೆಫ್​ ಬೆಜೋಸ್​ರ 1,56,872 ಕೋಟಿ ಸಂಪತ್ತು

Published On - 11:13 am, Sat, 30 April 22