ಮೈಸೂರು: ನಗರದಲ್ಲಿ ಎಲ್ಲೆಂದರಲ್ಲೇ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಸ್ವಪಕ್ಷೀಯ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಮೈಸೂರು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಫ್ಲೆಕ್ಸ್ ಅಳವಡಿಸುವ ಪಕ್ಷಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಚಿವ ನಿರಾಣಿ ಫ್ಲೆಕ್ಸ್ ಹಾಕಿದವರಿಗೂ ನೋಟಿಸ್ ನೀಡಲು ಆಗ್ರಹಿಸಿದ್ದಾರೆ. ನಗರದ ಅಂದಗೆಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಟ್ವೀಟ್ ಮೂಲಕ ಬಿಜೆಪಿ ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಕಳೆದ ಹಲವು ದಿನಗಳಿಂದ ರಾಜಕಾರಣಿಗಳು ಫ್ಲೆಕ್ಸ್ ಅಳವಡಿಸಿ ನಗರವನ್ನ ಹಾಳು ಮಾಡುತ್ತಿದ್ದಾರೆ. ರಾಜಕೀಯ ಮುಖಂಡರು ಹುಟ್ಟುಹಬ್ಬ, ರಾಜಕೀಯ ಸಮಾರಂಭಕ್ಕೆ ಫ್ಲೆಕ್ಸ್ ಹಾಕುತ್ತಾರೆ. ಇದರಿಂದ ಮೈಸೂರು ನಗರ ಗಬ್ಬೆದ್ದು ಹೋಗುತ್ತಿದೆ. ಬೆಂಗಳೂರು ನಗರದಲ್ಲೇ ಫ್ಲೆಕ್ಸ್ ಗಳನ್ನು ತೆಗದು ಹಾಕುತ್ತಿದ್ದಾರೆ. ಆದರೆ ಮೈಸೂರಿನಲ್ಲಿ ಯಾಕೆ ಅದಕ್ಕೆ ಅವಕಾಶ ಕೊಟ್ಟಿದ್ದಾರೆ? ಯಾವುದೇ ರಾಜಕೀಯ ಪಕ್ಷಗಳು ಫ್ಲೆಕ್ಸ್ ಹಾಕಿದ್ರೂ ದಂಡ ಹಾಕಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿಯವ್ರೂ ಫ್ಲೆಕ್ಸ್ ಹಾಕಿದರೂ ಕೂಡಾ ದಂಡ ಹಾಕಬೇಕು. ರಾಜಕಾರಣಿಗಳೇ ನಿಮ್ಮ ಹುಟ್ಟುಹಬ್ಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳಿ. ನಿಮ್ಮ ಬೆಂಬಲಿಗರೂ ಅಲ್ಲೇ ಸೆಲಬ್ರೇಟ್ ಮಾಡಲಿ ಎಂದರು. ಇನ್ನು ಮತ್ತೊಂದು ಕಡೆ ಮೈಸೂರು ನಗರದಲ್ಲಿ ಪುಟ್‌ಪಾತ್ ಒತ್ತುವರಿ ವಿಚಾರಕ್ಕೆ ಸಂಬಂಧಿಸಿ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವನ್ನೂ ಒಂದು ವಾರದಲ್ಲಿ ತೆರವು ಮಾಡಿಸುತ್ತೇನೆ ಎಂದು ಒತ್ತುವರಿ ತೆರವಿಗೆ ಒಂದು ವಾರದ ಭರವಸೆ ನೀಡಿದ್ದಾರೆ. ಖುದ್ದು ನಾನೇ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಕ್ರಮಕ್ಕೆ ಒತ್ತಾಯಿಸುವೆ. ಪುಟ್ ಪಾತ್ ವ್ಯಾಪಾರಿಗಳು ನಿಗದಿತ ಸ್ಥಳಗಳಲ್ಲಿ ವ್ಯಾಪಾರ ಮಾಡಬೇಕು. 2 ಸಾವಿರ ವ್ಯಾಪಾರಿಗಳಿಗಾಗಿ ಇಡೀ ಮೈಸೂರು ನಗರವನ್ನು ಗಬ್ಬೆಬ್ಬಿಸಲು ಆಗಲ್ಲ. ನಿಗದಿತ ಸ್ಥಳ ಬಿಟ್ಟು ಬಿಡಾಡಿ ದನಗಳಿಂದ ಮೈಸೂರಿನಲ್ಲಿ ಎಲ್ಲಾ ಕಡೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೆ ಕೆಲಸ ನಡೆದ ಅಧಿಕಾರಿಗಳೇ ಜವಾಬ್ದಾರಿ: ಸಚಿವ ಗೋವಿಂದ ಕಾರಜೋಳ