JDS: ಜೆಡಿಎಸ್ ಜನತಾ ಜಲಧಾರೆಗೆ ಚಾಲನೆ; ನೀರಾವರಿ ವಿಚಾರದಲ್ಲಿ ನಮ್ಮ ಪರವಾಗಿ ಯಾರೂ ಇಲ್ಲ ಎಂದ ಹೆಚ್​ಡಿ ದೇವೇಗೌಡ

ಜೆಡಿಎಸ್ ಕಾರ್ಯಕ್ರಮಗಳನ್ನ ನೋಡಿ ಬಣ್ಣ ಕಟ್ಟುತ್ತಾರೆ. ನಮ್ಮ ಜತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರಾ? ಸುಮ್ಮನೆ ಯಾರೊ ಏನೋ ಹೇಳುತ್ತಾರೆ, ಹೇಳಲಿ ಬಿಡಿ ಎಂದು ದೇವೇಗೌಡ ಹೇಳಿದ್ದಾರೆ.

JDS: ಜೆಡಿಎಸ್ ಜನತಾ ಜಲಧಾರೆಗೆ ಚಾಲನೆ; ನೀರಾವರಿ ವಿಚಾರದಲ್ಲಿ ನಮ್ಮ ಪರವಾಗಿ ಯಾರೂ ಇಲ್ಲ ಎಂದ ಹೆಚ್​ಡಿ ದೇವೇಗೌಡ
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ
Edited By:

Updated on: Apr 16, 2022 | 1:13 PM

ಮೈಸೂರು: ನೀರಿನ ವಿಚಾರದಲ್ಲಿ ತಮಿಳುನಾಡಿನ ಪಕ್ಷಗಳು ಒಂದಾಗುತ್ತೆ. ಆದರೆ ಕರ್ನಾಟಕದಲ್ಲಿರುವ ಎಲ್ಲ ಪಕ್ಷಗಳು ಒಂದಾಗುವುದಿಲ್ಲ. ಮಹದಾಯಿ ಯೋಜನೆ ವಿಚಾರದಲ್ಲಿ ಸಾಕಷ್ಟು ನೋವಿದೆ. ಜಲಸಂಪನ್ಮೂಲ ಸಚಿವರು 3 ಬಾರಿ ಸಮಯ ಕೊಟ್ಟಿದ್ದರು. ಸಚಿವರನ್ನ ಭೇಟಿ ಮಾಡಲು ಮನೆಗೆ ಹೋದಾಗ ಚಕ್ಕರ್ ಆಗಿದ್ದರು ಎಂದು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ‌ ಬೀಚನಹಳ್ಳಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ. ಬಿಜೆಪಿ- ಜೆಡಿಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರವಾಗಿ ಅವರು ಮಾತನಾಡಿದ್ದಾರೆ. ಜೆಡಿಎಸ್ ಕಾರ್ಯಕ್ರಮಗಳನ್ನ ನೋಡಿ ಬಣ್ಣ ಕಟ್ಟುತ್ತಾರೆ. ನಮ್ಮ ಜತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರಾ? ಸುಮ್ಮನೆ ಯಾರೊ ಏನೋ ಹೇಳುತ್ತಾರೆ, ಹೇಳಲಿ ಬಿಡಿ ಎಂದು ದೇವೇಗೌಡ ಹೇಳಿದ್ದಾರೆ.

BJP ಸರ್ಕಾರದ ವಿರುದ್ಧ ಶೇಕಡಾ 40 ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿ ಅವರು ಇದು ನನಗೆ ಸಂಬಂಧವಿಲ್ಲ, ನನ್ನ ಮಗ PWD ಸಚಿವನಾಗಿದ್ದಾನಾ? ನನ್ನ ಮಗ ನೀರಾವರಿ ಸಚಿವ ಆಗಿದ್ದಾನಾ? ನನ್ನ ಮಗ ಸಚಿವನಾಗಿದ್ದಿದ್ರೆ ಕಮಿಷನ್ ಬಗ್ಗೆ ಮಾತನಾಡುತ್ತಿದ್ದೆ. ಸರ್ಕಾರದ ವಿರುದ್ಧ ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು? ಎಂದು ಮೈಸೂರಿನ ಬೀಚನಹಳ್ಳಿಯಲ್ಲಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಟ್ರಿಬ್ಯುನಲ್ ಆ್ಯಕ್ಟ್ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಿಲ್ಲ. ಕಬಿನಿ ಡ್ಯಾಂ ಬಳಿ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮ ನಡೆಸಲಾಗುತ್ತಿದೆ. ನೀರಾವರಿ ವಿಚಾರದಲ್ಲಿ ನಮ್ಮ ಪರವಾಗಿ ಯಾರೂ ಇಲ್ಲ. ಕರ್ನಾಟಕದಲ್ಲಿ ನೀರಾವರಿ ವಿಚಾರದಲ್ಲಿ ವಂಚನೆಯಾಗಿದೆ. ಇದು ಒಂದು ಜಾತಿಯ ಪ್ರಶ್ನೆ ಅಲ್ಲ, ವ್ಯಕ್ತಿಯ ಪ್ರಶ್ನೆಯಲ್ಲ. ಇದು ಈ‌ ನಾಡಿನ ಜನರ ಪ್ರಶ್ನೆ ಆಗಿದೆ. ಕಬಿನಿ ಡ್ಯಾಂ ಕೆಲಸ ನಿಂತಿತ್ತು ಅನೇಕ ವಿಚಾರವಾಗಿ ಅಕ್ಷೇಪ ಇತ್ತು. ಆದರೆ ನಾನು ಅಂದು ಕಬಿನಿಗಾಗಿ ಹೋರಾಟ ಮಾಡಿದ್ದೆ. ನಾನೊಬ್ಬ ರೈತನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನನ್ನ ಕಾಲಿನಲ್ಲಿ ಶಕ್ತಿ ಇಲ್ಲದಿದ್ದರೂ ನನ್ನ ತಲೆಯಲ್ಲಿ ಶಕ್ತಿ ಇದೆ. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ಕಬಿನಿ ಡ್ಯಾಂ ಬಳಿ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮ ನಡೆಸಲಾಗುತ್ತಿದ್ದು ಕಾರ್ಯಕ್ರಮವನ್ನು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಉದ್ಘಾಟಿಸಿದ್ದಾರೆ. ಕಬಿನಿ ಜಲಾಶಯದಿಂದಲೇ ಜನತಾ ಜಲಧಾರೆ ಯಾತ್ರೆ ಆರಂಭವಾಗಿದೆ. ರಾಜ್ಯದಲ್ಲಿರುವ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ನನ್ನ ಶಕ್ತಿ ಮೀರಿ ನೀರಿಗಾಗಿ ಹೋರಾಟ ಮಾಡಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.

YouTube video player

ಭ್ರಷ್ಟಾಚಾರ ತುಂಬಿದೆ, ರಾಜಕಾರಣ ಹೇಳಲಾಗದಷ್ಟು ಕೆಟ್ಟಿದೆ

ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಚರ್ಚೆ ವಿಚಾರವಾಗಿ ಅವರು ರಾಜಕಾರಣದಲ್ಲಿ ಈಗ ಯಾರು ಸತ್ಯವಂತರಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪಿಸ್ತಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ 10% ಸರ್ಕಾರ ಎಂದಿದ್ದ ಪ್ರಧಾನಿ, ಆಗಲೂ ನಾನು ಆರೋಪ ಮಾಡಲಿಲ್ಲ. ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಭ್ರಷ್ಟಾಚಾರ ತುಂಬಿದೆ, ರಾಜಕಾರಣ ಹೇಳಲಾಗದಷ್ಟು ಕೆಟ್ಟಿದೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: JDS: ಜನತಾ ಜಲಧಾರೆ -ಜಲ ಸಂಗ್ರಹಕ್ಕೆ ಹೊರಟ 15 ಗಂಗಾ ರಥಗಳನ್ನು ಬೀಳ್ಕೊಟ್ಟ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಇಳಿದ ಕಾಂಗ್ರೆಸ್; 9 ತಂಡ ರಚಿಸಿ ರಾಜ್ಯಾದ್ಯಂತ ಹೋರಾಟ, ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ತಟ್ಟಲಿದೆ ಬಿಸಿ

Published On - 1:07 pm, Sat, 16 April 22

TV9 Web

TV9 Kannada

Read More
Loading...
Unable to load recommendations.
Follow Us