ಮೈಸೂರು: ಹಾಸ್ಟೆಲ್​ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 07, 2023 | 7:48 AM

ಮೈಸೂರಿನ ಮಾನಸ ಗಂಗೋತ್ರಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಹಾಸ್ಟೆಲ್​ನಲ್ಲಿ ಹೈದರಾಬಾದ್​​ ಮೂಲದ ಪ್ರಥಮ BSc ವಿದ್ಯಾರ್ಥಿಯೋರ್ವ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ ಕಚೇರಿ ಬಳಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕಂದಾಯ ನಿರೀಕ್ಷಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮೈಸೂರಿನಲ್ಲಿ ನಡೆದ ಈ ಪ್ರತ್ಯೇಕ ಘಟನೆಗಳ ವಿವರ ಈ ಕೆಳಗಿನಂತಿದೆ.

ಮೈಸೂರು: ಹಾಸ್ಟೆಲ್​ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು, (ಡಿಸೆಂಬರ್ 07): ಮೈಸೂರಿನ ಮಾನಸ ಗಂಗೋತ್ರಿ(Mysuru manasa gangothri) ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಹಾಸ್ಟೆಲ್​ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ವಿದ್ಯಾರ್ಥಿಯ(Student) ಶವ ಪತ್ತೆಯಾಗಿದೆ. ಹೈದರಾಬಾದ್​​ (hyderabad) ಮೂಲದ ಪ್ರಥಮ BSc ವಿದ್ಯಾರ್ಥಿ ಅಕ್ಷಜ್​​(18) ಮೃತದೇಹ ಪತ್ತೆಯಾಗಿದೆ. ಮೃತ ಅಕ್ಷಜ್​ ಮುಖಕ್ಕೆ ಪ್ಲಾಸ್ಟಿಕ್​ ಕವರ್​​ ಬಿಗಿಯಲಾಗಿದೆ. ಹಾಗೇ ಕೈಗಳನ್ನು ಕಟ್ಟಿಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಷಜ್​ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಆಫೀಸ್​ ಬಳಿ ಸಿಗರೇಟ್​​ ಸೇದಬೇಡ ಎಂದಿದ್ದಕ್ಕೆ ಅಧಿಕಾರಿ ಮೇಲೆ ಹಲ್ಲೆ

ಮೈಸೂರು: ಆಫೀಸ್​ ಬಳಿ ಸಿಗರೇಟ್​​ ಸೇದಬೇಡ ಎಂದಿದ್ದಕ್ಕೆ ಕಂದಾಯ ನಿರೀಕ್ಷಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಬಸವನಗುಡಿಯಲ್ಲಿರುವ ಪಾಲಿಕೆ ವಲಯ ಕಚೇರಿ 5ರಲ್ಲಿ ನಡೆದಿದೆ. ಕಂದಾಯ ನಿರೀಕ್ಷಕ ನಂದಕುಮಾರ್​​ ಮೇಲೆ ಧನುಷ್​​ ಎಂಬಾತ ಹಲ್ಲೆ ಮಾಡಿದ್ದಾನೆ. ಧನುಷ್ ಕಚೇರಿ ಮುಂಭಾಗ ಸಿಗರೇಟು ಸೇದುತ್ತಿದ್ದ. ಇದನ್ನು ಗಮನಿಸಿದ ಕಂದಾಯ ನಿರೀಕ್ಷಕ ನಂದಕುಮಾರ್, ಇಲ್ಲಿ ಸಿಗರೇಟು ಸೇದಬೇಡಿ ಹೋಗಿ ಎಂದಿದ್ದಾರೆ. ಇದರಿಂದ ಕುಪಿತಗೊಂಡ ಧನುಷ್, ನನ್ನನ್ನು ಹೋಗು ಎನ್ನಲು ನೀನು ಯಾರು ಎಂದು ಹಲ್ಲೆ ನಡೆಸಿದ್ದಾನೆ.

ಧನುಷ್​​ ಎಂಬಾತ ಮೈಸೂರು ನಗರದ ಕುಂಬಾರ ಕೊಪ್ಪಲಿನ ನಿವಾಸಿಯಾಗಿದ್ದು, ನನ್ನನ್ನು ಹೋಗು ಎನ್ನಲು ನೀನು ಯಾರು ಎಂದು ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈಸೂರು ಮೇಟಗಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ