ಟಿವಿ9 ವರದಿ ಫಲಶ್ರುತಿ – ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಮಾಡಿದ್ರೆ ಪಡಿತರ ರದ್ದು: ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ

ಕಾರ್ಡ್‌ದಾರರಿಗೆ ಆಮಿಷವೊಡ್ಡಿ ಅನ್ನಭಾಗ್ಯ ಅಕ್ಕಿ ಖರೀದಿಸಲಾಗುತ್ತಿದೆ. ಹೀಗೆ ಮಾಡುವ ದಂಧೆಕೋರರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪ್ರಕರಣ ದಾಖಲು ಮಾಡುತ್ತೇವೆ ಎಂದು ಅನ್ನಭಾಗ್ಯ ಅಕ್ಕಿ ಖರೀದಿಸುವವರಿಗೆ ಮೈಸೂರು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟಿವಿ9 ವರದಿ ಫಲಶ್ರುತಿ - ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಮಾಡಿದ್ರೆ ಪಡಿತರ ರದ್ದು: ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Edited By:

Updated on: Nov 15, 2023 | 6:36 PM

ಮೈಸೂರು, ನವೆಂಬರ್ 15: ಅನ್ನಭಾಗ್ಯ ಯೋಜನೆಯ (Anna Bhagya Scheme) ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ರೆ ಪಡಿತರ ಚೀಟಿ (Ration Card) ರದ್ದುಪಡಿಸ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲೇ ಅಕ್ರಮ ದಂಧೆ ಸಕ್ರಿಯವಾಗಿರುವ ಬಗ್ಗೆ ‘ಟಿವಿ9’ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಮೈಸೂರು ಜಿಲ್ಲಾಡಳಿತ, ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವಂತಿಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಅಕ್ರಮವಾಗಿ ಮಾರಾಟ ಮಾರಿದ್ರೆ ಪಡಿತರ ಚೀಟಿ ರದ್ದುಪಡಿಸ್ತೇವೆ ಎಂದು ಎಚ್ಚರಿಕೆ ನೀಡಿದೆ.

ಕಾರ್ಡ್‌ದಾರರಿಗೆ ಆಮಿಷವೊಡ್ಡಿ ಅನ್ನಭಾಗ್ಯ ಅಕ್ಕಿ ಖರೀದಿಸಲಾಗುತ್ತಿದೆ. ಹೀಗೆ ಮಾಡುವ ದಂಧೆಕೋರರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪ್ರಕರಣ ದಾಖಲು ಮಾಡುತ್ತೇವೆ ಎಂದು ಅನ್ನಭಾಗ್ಯ ಅಕ್ಕಿ ಖರೀದಿಸುವವರಿಗೆ ಮೈಸೂರು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ದುರುಪಯೋಗ: ದಂಧೆಕೋರರಿಂದ ಮನೆ ಮನೆಗೆ ತೆರಳಿ ಅಕ್ಕಿ ಖರೀದಿ

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಾದ ಮೈಸೂರಿನ ಯರಗನಹಳ್ಳಿ ಸೇರಿದಂತೆ ಹಲವು ಕಡೆ ಎಗ್ಗಿಲ್ಲದೆ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸ್ತಿದೆ. ಅಪ್ರಾಪ್ತರನ್ನೇ ದಂಧೆಗೆ ಇಳಿಸಿದ್ದು, ಬಾಲಕರು ಆಟೋ, ಬೈಕ್​ಗಳಲ್ಲಿ ಬಂದು ಅನ್ನಭಾಗ್ಯ ಅಕ್ಕಿಯನ್ನ ಕೆಜಿಗೆ 15 ರೂಪಾಯಿಯಂತೆ ಖರೀದಿ ಮಾಡ್ತಿದ್ದಾರೆ. ಇದನ್ನು ದಂಧೆಕೋರರು ಕಾಳಸಂತೆಯಲ್ಲಿ 50-60 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ ಎಂದು ‘ಟಿವಿ9’ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ