ಜಿಟಿ ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ರಣತಂತ್ರ; ಲಲಿತಾ ದೇವೇಗೌಡ ಕಣಕ್ಕಿಳಿಸಲು ಚಿಂತನೆ
ನಗರ ಪಾಲಿಕೆ ವಿರುದ್ಧ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ. ಅವೈಜ್ಞಾನಿಕವಾಗಿ ವಾಣಿಜ್ಯ ತೆರಿಗೆ ಸಂಗ್ರಹ ಆರೋಪ ಮಾಡುತ್ತಿರುವ ಸಾ.ರಾ.ಮಹೇಶ್, ಪಾಲಿಕೆಯ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಮೈಸೂರು: ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ರಣತಂತ್ರ ರೂಪಿಸಿದ್ದು, ಜಿಟಿಡಿ ಪತ್ನಿ ಲಲಿತಾ ದೇವೇಗೌಡ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಎಂಎಲ್ಸಿ ಚುನಾವಣೆಯನ್ನು ಜಿಟಿಡಿ ನೇತೃತ್ವದಲ್ಲೇ ನಡೆಸುತ್ತೇವೆ. ಅವರ ಕುಟುಂಬದಿಂದಲೇ ಅಭ್ಯರ್ಥಿಯಾಗಬೇಕು ಅನ್ನೋದು ನಮ್ಮ ಬಯಕೆ. ಅವರು ನಮ್ಮ ಪಕ್ಷದ ನಾಯಕರು. ಇಡೀ ಕುಟುಂಬ ಸಾರ್ವಜನಿಕರ ಸೇವೆ ಮಾಡುತ್ತಿದೆ. ಅಂತಹ ಕುಟುಂಬದಿಂದ ಅಭ್ಯರ್ಥಿಯಾದರೆ ತಪ್ಪೇನಿಲ್ಲ. ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ ಅಂತ ಶಾಸಕ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.
ನಗರ ಪಾಲಿಕೆ ವಿರುದ್ಧ ಕಿಡಿ ನಗರ ಪಾಲಿಕೆ ವಿರುದ್ಧ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ. ಅವೈಜ್ಞಾನಿಕವಾಗಿ ವಾಣಿಜ್ಯ ತೆರಿಗೆ ಸಂಗ್ರಹ ಆರೋಪ ಮಾಡುತ್ತಿರುವ ಸಾ.ರಾ.ಮಹೇಶ್, ಪಾಲಿಕೆಯ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ತುಘಲಕ್ ದರ್ಬಾರ್ ರೀತಿ ಇದೆ. ನೀವು ಕಾನೂನು ಪ್ರಕಾರ ತೆರಿಗೆ ವಿಧಿಸಿದರೆ ಪಾವತಿಸುತ್ತಾರೆ. ಬ್ಯಾನರ್ ಹಿಡಿದು ಹೋಗಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹಾಳಾದರೆ ಪಾಲಿಕೆ ಹೊಣೆ ಅಂತ ಮೈಸೂರಿನಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.
15 ದಿನದ ಹಿಂದೆಯಷ್ಟೇ ಬಿಟ್ ಕಾಯಿನ್ ಬಗ್ಗೆ ಗೊತ್ತಾಗಿದ್ದು ಎಂದು ಮಾತನಾಡಿದ ಅವರು, ಅದಕ್ಕೂ ಮೊದಲು ನನಗೆ ಬಿಟ್ ಕಾಯಿನ್ ಬಗ್ಗೆ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲ್ಯಾಕ್ ಮನಿ ಮಾತ್ರ ಗೊತ್ತಾಗುತ್ತಿತ್ತು. ಆದರೆ ಈ ಬಿಟ್ ಮನಿ ಗೊತ್ತಿರಲಿಲ್ಲ ಎಂದರು.
ಎಚ್ಚರಿಕೆ ನೀಡಿದ ಸಾ.ರಾ.ಮಹೇಶ್ ಕಾನೂನು ಬಾಹಿರ ತೆರಿಗೆ ಸಂಗ್ರಹಕ್ಕೆ ನಮ್ಮ ವಿರೋಧವಿದೆ. ಇದನ್ನು ಬದಲಾಯಿಸದಿದ್ದರೆ ಪಾಲಿಕೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಅಂತ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ
ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆ ಮಾಡುವಂತೆ ಆಗ್ರಹ; ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಬಿಗಿಭದ್ರತೆ
ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ
Published On - 11:39 am, Sat, 13 November 21