ಉಪಚುನಾವಣೆ ಗೆಲುವಿಗಾಗಿ ದೇವರ ಮೊರೆ ಹೋದ ‘ಹಳ್ಳಿಹಕ್ಕಿ’

|

Updated on: Dec 07, 2019 | 12:55 PM

ಮೈಸೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಯಿದೆ. ಚುನಾವಣೆಯಲ್ಲಿ ಗೆಲುವಿಗಾಗಿ ಹಲವು ಅಭ್ಯರ್ಥಿಗಳು ಟೆಂಪಲ್ ರನ್ ಶುರುಮಾಡಿದ್ದಾರೆ. ಇನ್ನು ಹುಣಸೂರು ಕ್ಷೇತ್ರದ ಹಳ್ಳಿಹಕ್ಕಿ ಹೆಚ್​.ವಿಶ್ವನಾಥ್ ಸಾಯಿಬಾಬಾ ಮೊರೆ ಹೋಗಿದ್ದಾರೆ. ಮಹಾರಾಷ್ಟ್ರದ ಶಿರಡಿಗೆ ತೆರಳಿರುವ ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ ಸಾಯಿಬಾಬಾ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ವಿಶ್ವನಾಥ್ ಮಂತ್ರಾಲಯಕ್ಕೆ ತೆರಳಲಿದ್ದಾರೆ. ಡಿ.9ರಂದು ಫಲಿತಾಂಶವಿರುವ ಕಾರಣ ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ. ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿಗಳಿಂದಲೂ ಟೆಂಪಲ್ ರನ್: ಮತ್ತೊಂದ ಕಡೆ ಕಾಂಗ್ರೆಸ್ […]

ಉಪಚುನಾವಣೆ ಗೆಲುವಿಗಾಗಿ ದೇವರ ಮೊರೆ ಹೋದ ‘ಹಳ್ಳಿಹಕ್ಕಿ’
Follow us on

ಮೈಸೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಯಿದೆ. ಚುನಾವಣೆಯಲ್ಲಿ ಗೆಲುವಿಗಾಗಿ ಹಲವು ಅಭ್ಯರ್ಥಿಗಳು ಟೆಂಪಲ್ ರನ್ ಶುರುಮಾಡಿದ್ದಾರೆ. ಇನ್ನು ಹುಣಸೂರು ಕ್ಷೇತ್ರದ ಹಳ್ಳಿಹಕ್ಕಿ ಹೆಚ್​.ವಿಶ್ವನಾಥ್ ಸಾಯಿಬಾಬಾ ಮೊರೆ ಹೋಗಿದ್ದಾರೆ.

ಮಹಾರಾಷ್ಟ್ರದ ಶಿರಡಿಗೆ ತೆರಳಿರುವ ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ ಸಾಯಿಬಾಬಾ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ವಿಶ್ವನಾಥ್ ಮಂತ್ರಾಲಯಕ್ಕೆ ತೆರಳಲಿದ್ದಾರೆ. ಡಿ.9ರಂದು ಫಲಿತಾಂಶವಿರುವ ಕಾರಣ ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.

ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿಗಳಿಂದಲೂ ಟೆಂಪಲ್ ರನ್:
ಮತ್ತೊಂದ ಕಡೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಸಹ ಟೆಂಪಲ್ ರನ್ ಶುರುಮಾಡಿದ್ದಾರೆ. ಉಪಚುನಾವಣೆಯಲ್ಲಿ ಗೆಲುವಿಗಾಗಿ ಧರ್ಮಸ್ಥಳದ ಮಂಜುನಾಥೇಶ್ವರನ ಮೊರೆ ಹೋಗಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್‌ ಸಹ ತುರುವೇಕೆರೆಯ ಮನೆ ದೇವರು ಲಕ್ಷ್ಮೀ ದೇವಿ ಮೊರೆ ಹೋಗಿದ್ದಾರೆ. ಹುಣಸೂರು ಕ್ಷೇತ್ರದ ಮೂರೂ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಟೆಂಪಲ್ ರನ್ ಶುರುಮಾಡಿದ್ದಾರೆ.

Published On - 12:54 pm, Sat, 7 December 19