Mysuru Dasara: ಪಂಜಿನ ಕವಾಯತು ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್
ಮೈಸೂರು ದಸರಾ ಹಿನ್ನಲೆ ನಗರದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನ ಕರ್ನಾಟಕ ಗವರ್ನರ್ ವೀಕ್ಷಿಸಿದ್ದಾರೆ. ಕಾರ್ಯಕ್ರಮ ನೋಡಲು ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಗಿದೆ. ಆಕರ್ಷಕ ಪಂಜಿನ ಕವಾಯತು ನೆರೆದಿದ್ದ ಸಹಸ್ರಾರು ಜನರ ಮನಸೂರೆಗೊಂಡಿದೆ.
ಮೈಸೂರು, ಅಕ್ಟೋಬರ್ 02: ವಿಶ್ವ ವಿಖ್ಯಾತ ಮೈಸೂರು ದಸರಾ (Dasara) ಹಿನ್ನಲೆ ನಗರದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವೀಕ್ಷಿಸಿದ್ದಾರೆ. ಕಾರ್ಯಕ್ರಮ ನೋಡಲು ಬಂದ ಗವರ್ನರ್ ಗೆ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಗಿದೆ. ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲರು ಲೇಸರ್ ಶೋ, ಡ್ರೋನ್ ಶೋ, ಟಾರ್ಚ್ ಲೈಟ್ ಪರೇಡ್ ವೀಕ್ಷಿಸಿದ್ದಾರೆ. ಇನ್ನು ಆಕರ್ಷಕ ಪಂಜಿನ ಕವಾಯತು ಕಂಡು ನೆರೆದಿದ್ದ ಸಹಸ್ರಾರು ಜನರು ಖುಷಿ ಪಟ್ಟರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
