Accident-free Driving!ಈ ಡ್ರೈವರ್​ಗಳು 33 ವರ್ಷ ದೀರ್ಘ ಕಾಲದಿಂದ, ದೀರ್ಘ ರೂಟ್​​ಗಳಲ್ಲಿ ಒಂದು ಚಿಕ್ಕ ಅಪಘಾತವೂ ಆಗದಂತೆ ಬಸ್​​​ಗಳನ್ನು ಓಡಿಸುತ್ತಿದ್ದಾರೆ!

Bus Accident: ಇಂದಿನ ರೋಡ್​ ರೇಗಣ್ಣಗಳ ಮಧ್ಯೆ, ಹದಗೆಟ್ಟ ರಸ್ತೆಗಳಲ್ಲಿ 33 ವರ್ಷಗಳ ಕಾಲ ಒಂದು ಚಿಕ್ಕ ಅಪಘಾತವನ್ನೂ ಮಾಡದೆ ಲಾಂಗ್​​ ರೂಟ್​​ಗಳಲ್ಲಿ ಬಸ್​​​ಗಳನ್ನು ಓಡಿಸುವುದಕ್ಕೆ ಸಾಧ್ಯವಾ? ಅಬ್ಬಾ! ಆ ಇಬ್ಬರು ಡ್ರೈವರ್​ಗಳು ಈ ಸಾಧನೆ ಮಾಡಿದ್ದಾರೆ! ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ.

Accident-free Driving!ಈ ಡ್ರೈವರ್​ಗಳು 33 ವರ್ಷ ದೀರ್ಘ ಕಾಲದಿಂದ, ದೀರ್ಘ ರೂಟ್​​ಗಳಲ್ಲಿ ಒಂದು ಚಿಕ್ಕ ಅಪಘಾತವೂ ಆಗದಂತೆ ಬಸ್​​​ಗಳನ್ನು ಓಡಿಸುತ್ತಿದ್ದಾರೆ!
ಇಜಾಜ್ ಅಹ್ಮದ್, ಇಶಾಕ್ ಷರೀಫ್
Follow us
ಸಾಧು ಶ್ರೀನಾಥ್​
|

Updated on:Apr 22, 2023 | 12:06 PM

ಮೈಸೂರು: ವರ್ಷಾನುಗಟ್ಟಲೆ ಸುರಕ್ಷಿತವಾಗಿ ಭಾರೀ ವಾಹನಗಳನ್ನು ಚಲಾಯಿಸಲು ಅಗತ್ಯವಿರುವ, ಕಾರಣವಾಗುವ ಮಹತ್ವದ ಅಂಶಗಳು ಯಾವುವು? 33 ವರ್ಷಗಳ ಕಾಲ ಒಂದು ಚಿಕ್ಕ ಅಪಘಾತವನ್ನೂ ಮಾಡದೆ (accident-free driving) ಚಾಲನೆ ಮಾಡಿರುವ ನಮ್ಮ ಹೆಮ್ಮೆಯ ಡ್ರೈವರ್​ಗಳು (Drivers) ರಾಜ್ಯ ರಸ್ತೆ ಸಾರಿಗೆ (Karnataka State Road Transport Corporation -KSRTC) ಸಂಸ್ಥೆಯಲ್ಲಿದ್ದಾರೆ! ಸಾರಿಗೆ ಸಂಸ್ಥೆಯ ಸಂಘದ (ಎಎಸ್‌ಆರ್‌ಟಿಯು) ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಕೆಎಸ್‌ಆರ್‌ಟಿಸಿ) ಕೆಲ ಮಾಡುತ್ತಿರುವ ಮೈಸೂರು ಜಿಲ್ಲೆಯ ಇಬ್ಬರು ಚಾಲಕರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇದಕ್ಕೆ ಒತ್ತಡ ಮುಕ್ತ ತಮ್ಮ ಸಂತೋಷದ ಕುಟುಂಬ ಜೀವನವೇ ಕಾರಣ ಎಂದು ಪ್ರಶಸ್ತಿ ಪುರಸ್ಕೃತರು ಹೇಳಿದ್ದಾರೆ.

ಹುಣಸೂರು ಡಿಪೋದ ಚಾಲಕ ಇಜಾಜ್ ಅಹಮದ್ ಷರೀಫ್ ಮತ್ತು ಸಾತಗಳ್ಳಿ ಡಿಪೋದ ಚಾಲಕ ಇಶಾಕ್ ಷರೀಫ್ ಅವರ ಪ್ರಕಾರ ಅವರದು ಸಂತೋಷದ ಕೌಟುಂಬಿಕ ಜೀವನವಂತೆ. ತಮ್ಮದು ಸದಾ ಒತ್ತಡ ಮುಕ್ತ ಮನಸ್ಸು. ಜೊತೆಗೆ ದಿನದ ಕರ್ತವ್ಯವನ್ನು ಪ್ರಾರಂಭಿಸುವ ಮುನ್ನ ವಾಹನದ ಸ್ಥಿತಿಯನ್ನು ಪರೀಕ್ಷಿಸುವುದು, ಪ್ರಯಾಣಿಕರನ್ನು ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸುವುದು ಮತ್ತು ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ದೀರ್ಘ ಮಾರ್ಗಗಳಲ್ಲಿ ಚಾಲನೆ ಮಾಡಿದರೂ ಅಪಘಾತ-ಮುಕ್ತ ಚಾಲನೆ ನಡೆಸುವುದಕ್ಕೆ ಸಹಾಯ ಮಾಡುತ್ತಾರೆ ಎಂದು ಮುಕ್ತ ಮನಸ್ಸಿಂದ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಜುಲೈನಲ್ಲಿ ನಿವೃತ್ತಿ ಹೊಂದಲಿರುವ 59 ವರ್ಷದ ಇಜಾಜ್ ಅಹ್ಮದ್, ಕೆಎಸ್‌ಆರ್‌ಟಿಸಿಯಿಂದ ಅಪಘಾತ ರಹಿತ ಚಾಲನೆಗಾಗಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ತರಬೇತಿ ಅವಧಿಯಲ್ಲಿನ ಎರಡು ವರ್ಷ ಸೇರಿದಂತೆ 35 ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸಿರುವ ಇಶಾಕ್ ಷರೀಫ್, ಬೆಂಗಳೂರಿನಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಬಿಟಿಎಸ್ ಸಂಸ್ಥೆಯ ಬಸ್ಸುಗಳು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಹುಣಸೂರು ಬಸ್ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲಿ ಮತ್ತು ಕೆಲಸದಲ್ಲಿ ಸಂತೋಷವಾಗಿರುವುದರಿಂದ ಶ್ರೇಷ್ಠತೆ ಸಾಧಿಸಲು ಸಹಾಯ ಮಾಡಿತು ಎಂದು ಇಜಾಜ್ ಅಹ್ಮದ್ ಹೇಳುತ್ತಾರೆ. ಅವರು ತಮ್ಮ ಎಲ್ಲಾ ನಾಲ್ಕು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಒದಗಿಸಿದ್ದಾರೆ. ಇಜಾಜ್ ಅವರ ಮಕ್ಕಳು ಯುಕೆ, ಪಶ್ಚಿಮ ಆಫ್ರಿಕಾ ಮತ್ತು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರಂತೆ.

ಇಶಾಕ್ ಷರೀಫ್ ಅವರು ಊಟಿ, ಸೊಲ್ಲಾಪುರ, ಬೆಳಗಾವಿ ಮುಂತಾದ ದೀರ್ಘ ಮಾರ್ಗಗಳಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ ಓಡಿಸಿದ್ದಾರೆ. ಅವರು ಕುಟುಂಬ ಸದಸ್ಯರ ಪ್ರಾರ್ಥನೆಗಳು, ಸುಖೀ ಸಂತೋಷದ ಕುಟುಂಬ ಮತ್ತು ವೃತ್ತಿಪರ ಜೀವನವು ಅವರ ವೃತ್ತಿಜೀವನದಲ್ಲಿ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ. ನಾನು ಟ್ರಕ್ ಡ್ರೈವರ್ ಆಗಿ ನನ್ನ ಡ್ರೈವಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಂತರ ಕೆಎಸ್ಆರ್ಟಿಸಿಗೆ ಸೇರಿಕೊಂಡೆ. ಮೈಸೂರು ನಗರ ವ್ಯಾಪ್ತಿಯಲ್ಲಿ ನಾನು ಮಾರ್ಗ ಸಂಖ್ಯೆ 223 ರಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಕುಟುಂಬ ಸೌಖ್ಯದ ಜೊತೆಗೆ ನಿಗಮದ ಅಧಿಕಾರಿಗಳ ಬೆಂಬಲ ಇತ್ಯಾದಿಯೂ ಕೈಹಿಡಿದು ಎಚ್ಚರಿಸುತ್ತದೆ. ಹಾಗಾಗಿ ನಾನು ಸುರಕ್ಷಿತವಾಗಿ ಚಾಲನೆ ಮಾಡುತ್ತೇನೆ ಎಂದು ಇಶಾಕ್ ಹೇಳುತ್ತಾರೆ. ಅಪಘಾತ ರಹಿತ ಚಾಲನೆಗಾಗಿ ಅವರು ಕೆಎಸ್‌ಆರ್‌ಟಿಸಿಯ ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:04 pm, Sat, 22 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್