ರಮೇಶ್ ಜಾರಿಕಿಹೊಳಿ ಅಬಕಾರಿ ಇನ್ಸ್​​​ಪೆಕ್ಟರ್​ನನ್ನು ಶೂಟ್​​ ಮಾಡಿ ಕೊಲೆ ಮಾಡಿದ್ದರು: ಎಂ.ಲಕ್ಷ್ಮಣ ಗಂಭೀರ ಆರೋಪ

| Updated By: ವಿವೇಕ ಬಿರಾದಾರ

Updated on: Jan 31, 2023 | 12:38 PM

1994ರಲ್ಲಿ ಗೋಕಾಕ್‌ ಸರ್ಕಾರಿ ಮಿಲ್‌ನಲ್ಲಿ ಹತ್ಯಾಕಾಂಡ ನಡೆದಿತ್ತು. ಶಾಸಕ ರಮೇಶ್ ಜಾರಕಿಹೊಳಿ ಹತ್ಯಾಕಾಂಡದ ನೇತೃತ್ವ ವಹಿಸಿದ್ದರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ರಮೇಶ್ ಜಾರಿಕಿಹೊಳಿ ಅಬಕಾರಿ ಇನ್ಸ್​​​ಪೆಕ್ಟರ್​ನನ್ನು ಶೂಟ್​​ ಮಾಡಿ ಕೊಲೆ ಮಾಡಿದ್ದರು: ಎಂ.ಲಕ್ಷ್ಮಣ ಗಂಭೀರ ಆರೋಪ
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
Follow us on

ಮೈಸೂರು: 1988ರಲ್ಲಿ ರಮೇಶ್ ಜಾರಿಕಿಹೊಳಿ (Ramesh jarkiholi) ಹಾಗೂ ಸಂಗಡಿಗರು ಅಬಕಾರಿ ಇನ್ಸಪೆಕ್ಟರ್ ಇಂಗಳೆ‌ಗೆಯವರನ್ನು ಎಕೆ 47ನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು ಎಂದು ರಮೇಶ್​ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ (M Laxman) ಗಂಭೀರ ಆರೋಪ ಮಾಡಿದ್ದಾರೆ. 1985ರಲ್ಲಿ ಡಿಕೆ ಶಿವಕುಮಾರ್​ ಹರಿದ ಚಪ್ಪಲಿ ಹಾಕಿದ್ದರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು 1994ರಲ್ಲಿ ಗೋಕಾಕ್‌ ಸರ್ಕಾರಿ ಮಿಲ್‌ನಲ್ಲಿ ಹತ್ಯಾಕಾಂಡ ನಡೆದಿತ್ತು. ಶಾಸಕ ರಮೇಶ್ ಜಾರಕಿಹೊಳಿ ಹತ್ಯಾಕಾಂಡದ ನೇತೃತ್ವ ವಹಿಸಿದ್ದರು ಎಂದು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ, ಮಾರಾಟಕ್ಕೆ ಜಾರಕಿಹೊಳಿ ಕುಟುಂಬದ ಅನುಮತಿ ಪಡೆಯಬೇಕಿತ್ತು. ಅನುಮತಿ ಪಡೆಯದಿದ್ದರೇ ಅಟ್ರಾಸಿಟಿ ರೇಪ್ ಪ್ರಕರಣ ದಾಖಲಿಸುತ್ತಾರೆ. ಹೀಗೆ ಸುಮಾರು 300 ಸಾಮಾನ್ಯ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಗೋಕಾಕ್​ ಶಾಸಕ ರಮೇಶ್ ಜಾರಕಿಹೊಳಿ ಕಳ್ಳ ಭಟ್ಟಿ ಸರಾಯಿ ಮಾರುತ್ತಿದ್ದರು. 1985ರಲ್ಲಿ ಜಾರಕಿಹೊಳಿ ಎರಡು ಕಾಲಿಗೆ ಬೇರೆ ಬೇರೆ ಚಪ್ಪಲಿ ಹಾಕಿಕೊಂಡಿದ್ದರು ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಗೆ 5 ಪ್ರಶ್ನೆ

1. ಸದಾಶಿವನಗರದಲ್ಲಿ ಬೇನಾಮಿ‌ ಮನೆ ಯಾರದ್ದು ?

2. ನೀರಾವರಿ ಸಚಿವರಾಗಿದ್ದಾಗ ಗುತ್ತಿಗೆದಾರ 100 ಕೋಟಿ ನಿವೇಶನ ಕೊಟ್ಟಿದ್ದು ಯಾರು ? ಯಾಕೆ ?

3. ಖಾನಾಪುರದಲ್ಲಿ 500 ಎಕರೆ ಬೇನಾಮಿ‌ ಹೆಸರಿನಲ್ಲಿದೆ.  ಆ ಜಮೀನನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆದಿದ್ದೀರಾ ?

4. 20 ದಿನದ ಹಿಂದೆ ಮರ್ಸಿಡಿಸ್ ಕಾರು 4 ಕೋಟಿ ಕೊಟ್ಟು ಖರೀದಿ ಮಾಡಿದ್ದೀರಿ. ಬ್ಯಾಂಕ್ ಕರಪ್ಟ್ ಈ ರೀತಿ ಕಾರು ಖರೀದಿ ಹೇಗೆ ?

5. 30 ಕೋಟಿಯಲ್ಲಿ ಗೋಕಾಕ್‌ನಲ್ಲಿ ಮನೆ ಕಟ್ಟುತ್ತಿದ್ದೀರಾ ಅದರ ಲೆಕ್ಕ ಏನು ?

ಡಿ ಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೋಳಿ ಆಸ್ತಿ ಜಂಟಿ ತನಿಖೆಯಾಗಲಿ. ದೇಶದ ರಾಜ್ಯದ ಯಾವುದೇ ಸಂಸ್ಥೆಯಿಂದಲಾದರೂ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ವೀರಶೈವ ಹೆಣ್ಣು ಮಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದೀರಿ

ವೀರಶೈವ ಹೆಣ್ಣು ಮಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದೀರಿ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದೀರಾ ? ಇದು ರಮೇಶ್ ಜಾರಕಿಹೊಳಿ ಮಾತಲ್ಲ. ಬಿಜೆಪಿ ನಾಯಕರು ಸ್ಕ್ರಿಪ್ಟ್ ಮಾಡಿಕೊಟ್ಟಿದ್ದಾರೆ. ಅಮಿತ್ ಶಾ ಬಂದು ಹೋದ ನಂತರ ಈ ರೀತಿ ಅಟ್ಯಾಕ್ ಮಾಡಿದ್ದಾರೆ. ನಿಮಗೆ ಗನ್ ಪಾಯಿಂಟ್ ಮೇಲೆ ಇಟ್ಟು ಸೂಚನೆ ಕೊಟ್ಟಿದ್ದಾರಾ ? ನೀವೊಬ್ಬ ಫ್ರಾಡ್ ಚೀಟರ್ ರೈತರ ಹಣ ಮೋಸ ಮಾಡಿದ್ದೀರಾ ? ಎಂದು ಪ್ರಶ್ನೆ ಮಾಡಿದರು.

ಮಾನ ಮರ್ಯಾದೆ ಇದ್ದರೇ ಯಾವುದೇ ಸಿಡಿ ಇದ್ದರೆ ಬಿಡುಗಡೆ ಮಾಡಿ. ನೀವು ಇಂಟರ್ ನ್ಯಾಷನಲ್ ಫ್ರಾಡ್. ಡಿ ಕೆ ಶಿವಕುಮಾರ್ ಒಬ್ಬ ಯಶಸ್ವಿ ಉದ್ಯಮಿ. ನಿಮ್ಮ ಯೋಗ್ಯತೆಯನ್ನು ಎಪಿಸೋಡ್‌ನಂತೆ ಬಿಡುಗಡೆ ಮಾಡಬೇಕು ಎಂದರು.

ನಾಳೆ ಕಾಂಗ್ರೆಸ್ ಕಚೇರಿಯಲ್ಲಿ ಮೋದಿ ಸಾಕ್ಷ್ಯಚಿತ್ರ

ನಾಳೆ (ಫೆ.1) ರಂದು ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಬ್ಯಾನ್ ಆಗಿರುವ ಬಿಬಿಸಿ ಮೋದಿ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡುತ್ತೇವೆ. ಬಿಬಿಸಿ ಸತ್ಯದ ಮೇಲೆ ಬೆಳಕು ಚಲ್ಲಿದೆ. ಬಿಜೆಪಿಯವರೇ ಎದೆ ತಟ್ಟಿಕೊಂಡು ಹೇಳಿರುವ ಸಾಕ್ಷ್ಯಚಿತ್ರ ಅದು. ಮುಸ್ಲಿಂರನ್ನು ಕೊಲ್ಲಲು ಮೋದಿ ಸೂಚನೆ ನೀಡಿದ್ದರು ಅನ್ನೋದನ್ನು ಹೇಳಿದ್ದಾರೆ. ಕಾಶ್ಮೀರ ಫೈಲ್‌ನಂತೆ ಈ ಸಾಕ್ಷ್ಯಚಿತ್ರವನ್ನು ದೇಶದಾದ್ಯಂತ ತೋರಿಸಿ. ದೇಶದ ಪ್ರತಿಯೊಬ್ಬ ಜನರಿಗೂ ಮನವಿ ಮಾಡುತ್ತೇನೆ, ಸಾಕ್ಷ್ಯಚಿತ್ರವನ್ನು ನೋಡಿ. ಮೋದಿಯ ಕರಾಳ ಮುಖ ಏನು ಅನ್ನೋದನ್ನು ನೋಡಬೇಕು. ಬಿಬಿಸಿ ಬ್ರಿಟಿಷರ ತುಂಬಾ ಮಹತ್ವವಾದ ಸಂಸ್ಥೆ. ಯಾರ ಅಧೀನಕ್ಕೂ ಒಳಪಡದೆ ಕೆಲಸ ಮಾಡುವ ಸಂಸ್ಥೆ ಎಂದು ಮಾತನಾಡಿದರು.

ಮೋದಿ ಭಜನೆ ಮೋದಿ ಗುಣಗಾನ ಮಾಡಿದಕ್ಕೆ ಎಸ್ ಎಲ್ ಭೈರಪ್ಪಗೆ ಪ್ರಶಸ್ತಿ

ಮೋದಿ ಭಜನೆ ಮೋದಿ ಗುಣಗಾನ ಮಾಡಿದಕ್ಕೆ ಎಸ್​ಎಲ್ ಭೈರಪ್ಪಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ. ನೀವು ಮೈಸೂರಿನಲ್ಲಿ ಇರುವುದೇ ದುರಂತ. ಇಷ್ಟರ ಮಟ್ಟಿಗೆ ಏಕೆ ಬಕೆಟ್ ಹಿಡಿಯುತ್ತಿದ್ದೀರಾ ? ನಿಮಗೆ ಜ್ಞಾನ ಪರಿಜ್ಞಾನವಿದ್ದರೆ ಬಿಜೆಪಿ ಕಾನೂನು ತಿಳಿದುಕೊಳ್ಳಿ. 75 ವರ್ಷದ ನಂತರ ಯಾವುದೇ ಅಧಿಕಾರ ಅಲ್ಲಿ ಇಲ್ಲ. ಮೋದಿಗೆ ಮಾತ್ರ ಏಕೆ ಇದು ಅನ್ವಯವಾಗುವುದಿಲ್ಲ. ಅವರೇನು ದೇವರ? ಬಿಜೆಪಿಯವರಿಗೆ ದೇವರಿರಬೇಕು ಎಂದು ಕುಹಕವಾಡಿದರು.

ಸಿದ್ದರಾಮಯ್ಯ ಹೆಣವನ್ನು ನಾಯಿ ಕೂಡಾ ಮುಟ್ಟುವುದಿಲ್ಲ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಕೆ ಎಸ್ ಈಶ್ವರಪ್ಪ ಸಿ ಟಿ ರವಿ ಜೋಕರ್‌ಗಳು. ಇವರು ಇಬ್ಬರು ಹತಾಶರಾಗಿದ್ದಾರೆ. ಮಾನ ಮರ್ಯಾದೆ ಇದ್ದರೆ ಮಂತ್ರಿ ಸ್ಥಾನ ಏಕೆ ಹೋಯ್ತು ಹೇಳಿ. ನಿಮ್ಮನ್ನು ಯಾವ ಕಾರ್ಯಕ್ರಮಕ್ಕೂ ಏಕೆ ಸೇರಿಸುತ್ತಿಲ್ಲಾ? ಶಿವಮೊಗ್ಗದಲ್ಲಿ ಕುಳಿತು ಟೈಂ ಪಾಸ್ ಮಾಡುತ್ತಿದ್ದಾರೆ. ಅವರು ಮುಗಿದ ನಾಣ್ಯ ಚಲಾವಣೆಯಲ್ಲಿ ಇಲ್ಲದ ನಾಣ್ಯ. ಈಶ್ವರಪ್ಪ ಅವರ ಪದ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Tue, 31 January 23