ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಇಂದೂ ಪತ್ತೆಯಾಗದ ಚಿರತೆ; 12 ತಂಡಗಳಿಂದ ಕಾರ್ಯಾಚರಣೆ

| Updated By: ಸುಷ್ಮಾ ಚಕ್ರೆ

Updated on: Jan 11, 2025 | 10:12 PM

ಮೈಸೂರಿನ ಇನ್ಫೋಸಿಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇಂದು ಸಹ ಚಿರತೆ ಪತ್ತೆಯಾಗಿಲ್ಲ. ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ, 70 ಇನ್ಫೋಸಿಸ್ ಸಿಬ್ಬಂದಿ ಸೇರಿ 12 ಜಂಟಿ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 4 ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ ಗಳಲ್ಲಿಯಾಗಲೀ ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ಸಿಸಿ ಕ್ಯಾಮೆರಾಗಳಲ್ಲಾಗಲೀ ಚಿರತೆ ಕಾಣಿಸಿಲ್ಲ.

ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಇಂದೂ ಪತ್ತೆಯಾಗದ ಚಿರತೆ; 12 ತಂಡಗಳಿಂದ ಕಾರ್ಯಾಚರಣೆ
Mysuru Infosys
Follow us on

ಮೈಸೂರು: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಚಿರತೆ ಪ್ರತ್ಯಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಇಂದು ಸಹ ಚಿರತೆ ಪತ್ತೆಯಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ಕ್ಯಾಮೆರಾಗಳಲ್ಲಿ ಚಿರತೆ ಕಾಣಿಸಿಲ್ಲ. ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ಸಿಸಿ ಟಿವಿಗಳಲ್ಲಿ ಚಿರತೆ ಕಾಣಿಸಿಲ್ಲ. ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆದಿದೆ. 70 ಇನ್ಫೋಸಿಸ್ ಸಿಬ್ಬಂದಿ ಸೇರಿ 12 ತಂಡಗಳಿಂದ ಕಾರ್ಯಾಚರಣೆ ನಡೆದಿದೆ ಎಂದು ಮೈಸೂರಿನಲ್ಲಿ ಟಿವಿ9ಗೆ ಡಿಸಿಎಫ್ ಡಾ. ಬಸವರಾಜ್ ಮಾಹಿತಿ ನೀಡಿದ್ದಾರೆ.

ಮೈಸೂರಿನ ಇನ್ಫೋಸಿಸ್‌ನಲ್ಲಿ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ, 70 ಇನ್ಫೋಸಿಸ್ ಸಿಬ್ಬಂದಿ ಸೇರಿ 12 ಜಂಟಿ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 4 ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ ಗಳಲ್ಲಿಯಾಗಲೀ ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ಸಿಸಿ ಕ್ಯಾಮೆರಾಗಳಲ್ಲಾಗಲೀ ಚಿರತೆ ಕಾಣಿಸಿಲ್ಲ. ಚಿರತೆ ಚಲನವಲನ ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹುಗಳು ಕಂಡು ಬಂದಿಲ್ಲ. ಕ್ಯಾಂಪಸ್‌ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಚಿರತೆ ಪತ್ತೆಯಾಗಿಲ್ಲ.

ಇದನ್ನೂ ಓದಿ: Viral: ಮೈಸೂರಿನ ಇನ್ಫೋಸಿಸ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಲು ಚಿರತೆಯಿಂದ ಮಾತ್ರ ಸಾಧ್ಯ; ವೈರಲ್ ಆಗ್ತಿದೆ ಮೀಮ್ಸ್‌

ಈಗಾಗಲೇ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಕಾಣಿಸಿಕೊಂಡ ಚಿರತೆ ಇನ್ನೂ ಸೆರೆಯಾಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಟ್ರೈನಿ ಉದ್ಯೋಗಿಗಳಿಗೆ ಜನವರಿ 26ರವರೆಗೆ ರಜೆ ನೀಡಲಾಗಿದೆ. 2 ವಾರಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ, ಬೋನಿಗೆ ಬೀಳದೆ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಆದರೆ, ಕಾರ್ಯಾಚರಣೆ ವೇಳೆ ಇನ್ನೂ ಪತ್ತೆಯಾಗದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.

ಡಿಸೆಂಬರ್ 31ರಂದು ಮುಂಜಾನೆ ಇನ್ಫೋಸಿಸ್ ಭದ್ರತಾ ಸಿಬ್ಬಂದಿಯ ಜೀಪ್​ ಎದುರು ಚಿರತೆಯೊಂದು ಹಾದು ಹೋಗಿತ್ತು. ಆ ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಆ ಚಿರತೆಯ ಸೆರೆಗಾಗಿ ಇನ್ಫೋಸಿಸ್ ಆವರಣದಲ್ಲಿ 12ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಎರಡು ಬೋನ್ ಇಡಲಾಗಿದೆ. ಚಿರತೆ ತನ್ನ ಸ್ಥಾನವನ್ನು ಬೇರೆ ಕಡೆ ಬದಲಾಯಿಸುತ್ತಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:12 pm, Sat, 11 January 25