ಮೈಸೂರಿನಲ್ಲಿ ಮಂಡ್ಯ ರಮೇಶ್​ರ ರಜಾ ಮಜಾ ಬೇಸಿಗೆ ಶಿಬಿರ ಶುರು

| Updated By: ಆಯೇಷಾ ಬಾನು

Updated on: Apr 16, 2022 | 3:21 PM

ಮಂಡ್ಯ ರಮೇಶ್ ಅವರ ನಟನ ಸಂಸ್ಥೆ ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ನಾಟಕ, ಹಾಡು, ಮಲ್ಲಕಂಬ, ಕಂಸಾಳೆ, ಡೋಲು ಕುಣಿತ ಸೇರಿದಂತೆ ನಮ್ಮ ಸಂಸ್ಕೃತಿ ಪರಿಚಯ ಮಾಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಈ ವರ್ಷವೂ ಅದು ಮುಂದುವರಿದಿದೆ.

ಮೈಸೂರಿನಲ್ಲಿ ಮಂಡ್ಯ ರಮೇಶ್​ರ ರಜಾ ಮಜಾ ಬೇಸಿಗೆ ಶಿಬಿರ ಶುರು
ಮೈಸೂರಿನಲ್ಲಿ ಮಂಡ್ಯ ರಮೇಶ್ರ ಬೇಸಿಗೆ ಶಿಬಿರ ಶುರು
Follow us on

ಮೈಸೂರು: ಬೇಸಿಗೆ ರಜೆ ಬಂತೆಂದ್ರೆ ಮಕ್ಕಳನ್ನು ಹಿಡಿಯೋದು ಕಷ್ಟ ಸಾಧ್ಯ. ಅದರಲ್ಲೂ ಇಂದಿನ ಮಕ್ಕಳು ಸದಾ ಮೊಬೈಲ್, ಟ್ಯಾಬ್, ಕಂಪ್ಯೂಟರ್, ಗೇಮ್ ಅಂತಾ ಕಳೆದು ಹೋಗ್ತಾರೆ. ಆದ್ರೆ ನಮ್ಮ ಮೈಸೂರಿನ ಮಕ್ಕಳು ಕೊಂಚ ಡಿಫರೆಂಟ್. ಮೈಸೂರಿನಲ್ಲಿ ರಂಗಭೂಮಿ ಶಿಬಿರ ಆರಂಭವಾಗಿದ್ದು ಮಕ್ಕಳು ಮಲ್ಲಗಂಬ ಹತ್ತಿ ಸಾಹಸ ಮಾಡ್ತಾ, ಡೋಲು ಹೊತ್ತು ಬಾರಿಸ್ತಾ, ನಾಟಕದ ಹಾಡು ಹಾಡ್ತಾ ನಲಿಯುತ್ತ ಕಲಿಯುತ್ತಿದ್ದಾರೆ.

ಮೊಬೈಲ್ ಬಿಟ್ಟು ಆಧುನಿಕ ಸಮ್ಮರ್ ಕ್ಯಾಂಪ್‌ಗಳನ್ನು ಬಿಟ್ಟು ವಿದ್ಯಾರ್ಥಿಗಳು ಮೈಸೂರಿನ ರಂಗಭೂಮಿ ಕಲಾವಿದ ನಟ ಮಂಡ್ಯ ರಮೇಶ್ ಅವರ ರಜಾ ಮಜಾಗೆ ಬಂದಿದ್ದಾರೆ. ಮಂಡ್ಯ ರಮೇಶ್ ಅವರ ನಟನ ಸಂಸ್ಥೆ ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ನಾಟಕ, ಹಾಡು, ಮಲ್ಲಕಂಬ, ಕಂಸಾಳೆ, ಡೋಲು ಕುಣಿತ ಸೇರಿದಂತೆ ನಮ್ಮ ಸಂಸ್ಕೃತಿ ಪರಿಚಯ ಮಾಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಈ ವರ್ಷವೂ ಅದು ಮುಂದುವರಿದಿದೆ. ಬರೋಬ್ಬರಿ 25 ದಿನ ಮಂಡ್ಯ ರಮೇಶ್ ಮತ್ತು ಅವರು ತಂಡದವರು ಅತ್ಯಂತ ಆಸಕ್ತಿಯಿಂದ ಈ ಶಿಬಿರವನ್ನು ನಡೆಸುತ್ತಾರೆ. ಸದ್ಯ ಶಿಬಿರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಬರೋಬ್ಬರಿ 230 ಮಕ್ಕಳು ಶಿಬಿರದಲ್ಲಿದ್ದಾರೆ. ಅದರಲ್ಲಿ 25 ಜನ ಬಡವರು ಅನಾಥ ಮಕ್ಕಳನ್ನು ಮಂಡ್ಯ ರಮೇಶ್ ಸೇರಿಸಿಕೊಂಡಿದ್ದಾರೆ.

ಮಂಡ್ಯ ರಮೇಶ್ ಮಜಾ ಟಾಕೀಸ್, ನಾಟಕ ,ಸಿನಿಮಾ ರಂಗಭೂಮಿ ಅಂತಾ ಎಷ್ಟೇ ಬ್ಯುಸಿಯಾಗಿದ್ರು ಪ್ರತಿವರ್ಷ ಈ 25 ದಿನವನ್ನು ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ. ತಾವು ಕಲಿತಿರುವ ಎಲ್ಲವನ್ನೂ ಮಕ್ಕಳಿಗೆ ಧಾರೆಯೆರೆಯಬೇಕು ಅನ್ನೋದು ಅವರ ಕನಸು. ಮಂಡ್ಯ ರಮೇಶ್ ಅವರ ಈ ಕೆಲಸ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳು ನಮ್ಮ ಸಂಸ್ಕೃತಿ ಬಗ್ಗೆ ಕಲಿಯೋದಕ್ಕೆ ಆಸಕ್ತಿ ತೋರಿಸಿರುವುದು ಅವರಿಗೂ ಖುಷಿ ಕೊಟ್ಟಿದೆ. ಒಟ್ಟಾರೆ ನಮ್ಮ ಮಕ್ಕಳಲ್ಲಿ ಕಲೆ ಸಾಹಿತ್ಯ ನಾಟಕ ಸೇರಿದಂತೆ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಇಂತಹ ಶಿಬಿರ ರಾಜ್ಯ ಮಟ್ಟದ ಮಕ್ಕಳಿಗೂ ಸಿಗುವಂತಾಗಲಿ ಅನ್ನೋದೇ ನಮ್ಮ ಆಶಯ.

ವರದಿ: ರಾಮ್, ಟಿವಿ9 ಮೈಸೂರು

ಇದನ್ನೂ ಓದಿ: ಲಂಚ ತೆಗೆದುಕೊಂಡಿಲ್ಲ ಎಂದು ಈಶ್ವರಪ್ಪ ಸೇರಿ ಸಚಿವರೆಲ್ಲಾ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಹಿಂದೂ ಮಹಾಸಭಾ

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಪಕ್ಕಾ?-ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ಮಾಡಿದ ಚುನಾವಣಾ ತಂತ್ರಜ್ಞ