ಮೈಸೂರು: ರಾಜ್ಯಾದ್ಯಂತ ನಿರಂತರ ಮಳೆಯಿಂದ (Heavy Rain) ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆ ಕೃಷಿ ಅಧಿಕಾರಿಗಳು ಹೊಲಗಳಿಗೆ ಹೋಗಿ ಪರಿಶೀಲಿಸಬೇಕು ಅಂತ ಮೈಸೂರಿನಲ್ಲಿ ಟಿವಿ9 ಮೂಲಕ ಕೃಷಿ ಸಚಿವ ಬಿಸಿ ಪಾಟೀಲ್ ಸೂಚನೆ (BC Nagesh) ನೀಡಿದ್ದಾರೆ. ಕೃಷಿ ಅಧಿಕಾರಿಗಳು ಜಮೀನಿಗೆ ತೆರಳದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮಳೆ ಹಾನಿ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು. ಮಾಹಿತಿ ಸಂಗ್ರಹದ ನಂತರ ಸೂಕ್ತ ಪರಿಹಾರ ನೀಡಲಾಗುತ್ತದೆ. ರೈತರು ಯಾವುದೇ ಆತಂಕ ಪಡಬಾರದು. ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರಕ್ಕೆ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಮುಂದುವರಿದು ಮಾತನಾಡಿದ ಸಚಿವರು, ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಬ್ಸಿಡಿ ದರದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದೇವೆ. ಕಾಳ ಸಂತೆಕೋರರ ಪತ್ತೆಗೆ ನಾವು ತಂಡವನ್ನು ರಚಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಪತಿ ಸಾವಿನ ಬಗ್ಗೆ ಮತ್ತೊಬ್ಬ ಮಹಿಳೆಯ ಜೊತೆ ಹೆಂಡತಿ ಮಾತುಕತೆ ವೈರಲ್
ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲಿ ಬಿಸಿ ಪಾಟೀಲ್ ವ್ಯಂಗ್ಯ:
ತಾನು ಸಿಎಂ ಆದರೆ ದಲಿತರ ಸಾಲ ಮಾಡುತ್ತೇನೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿ ಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದರೆ ತಾನೇ ಅವರು ಕೊಡುವ ಭರವಸೆ ಈಡೇರುವುದು? ಕಾಂಗ್ರೆಸ್ನಲ್ಲಿ ಕೂಸು ಹುಟ್ಟುವ ಮುಂಚೆ ಕುಲವಿ ಹೊಲಿಸಲಾಗುತ್ತಿದೆ. ಬಿಜೆಪಿ ಮುಂದಿನ ಭಾರಿಯೂ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಿದ್ದರಾಮಯ್ಯಗೆ ಬಿಜೆಪಿ ಬಗ್ಗೆ ಹೇಳಲು ಏನು ಇಲ್ಲ. ನಮ್ಮ ಸರ್ಕಾರದಿಂದ ಸಿದ್ದರಾಮಯ್ಯಗೆ ಪ್ರಯೋಜನ ಆಗುತ್ತಿಲ್ಲ. ಜನರಿಗೆ ಪ್ರಯೋಜನ ಆಗುತ್ತಿದೆ ಎಂದರು.
ಜಿ ಟಿ ದೇವೇಗೌಡರ ಮನೆಗೆ ಬಿ ಸಿ ಪಾಟೀಲ್ ಭೇಟಿ:
ಶಾಸಕ ಜಿ ಟಿ ದೇವೇಗೌಡರ ಮೊಮ್ಮಗಳು ಮೃತಪಟ್ಟಿರುವ ಹಿನ್ನೆಲೆ ದೇವೇಗೌಡರ ನಿವಾಸಕ್ಕೆ ಕೃಷಿ ಸಚಿವ ಬಿ ಸಿ ಪಾಟೀಲ್ ಭೇಟಿ ನೀಡಿದರು. ಈ ವೇಳೆ ದೇವೇಗೌಡರಿಗೆ ಸಾಂತ್ವಾನ ಹೇಳಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Thu, 19 May 22