ಎಲ್ಲಿ ನೋಡಿದ್ರೂ ಬರೀ ಧೂಳು: ಹಾಸ್ಟೆಲ್ ಅವ್ಯವಸ್ಥೆಗೆ ಕ್ರೀಡಾ ಸಚಿವರು ಗರಂ!

|

Updated on: Feb 16, 2020 | 6:26 PM

ಮೈಸೂರು: ಧೂಳು ಬರೀ ಧೂಳು.. ಯಾವುದೇ ರೂಮ್​ಗೋದ್ರು.. ಯಾವುದೇ ಜಾಗ ನೋಡಿದರೂ ಕಣ್ಣಿಗೆ ಕಾಣಿಸೋದು ಮತ್ತದೇ ಧೂಳು. ಅಷ್ಟೇ ಅಲ್ಲ, ವಿದ್ಯಾರ್ಥಿಗಳಿರೋ ಹಾಸ್ಟೆಲ್​​ನಲ್ಲಿ ಏನಂದ್ರೆ ಏನೂ ಸರಿಯಿಲ್ಲ. ಫುಡ್​ನಿಂದ ಹಿಡಿದು ಸಿಬ್ಬಂದಿ ತನಕ ವೇಸ್ಟ್.. ವೇಸ್ಟ್.. ವೇಸ್ಟ್. ಅವ್ಯವಸ್ಥೆ ಬಗ್ಗೆ ಕ್ರೀಡಾ ಸಚಿವ ಸಿ.ಟಿ.ರವಿ ತರಾಟೆ: ಮೈಸೂರಿನ ಯುವ ಜನ ಮತ್ತು ಕ್ರೀಡಾ ಇಲಾಖೆಯಲ್ಲಿನ ಅವ್ಯವಸ್ಥೆ ಬಗ್ಗೆ ಕ್ರೀಡಾ ಸಚಿವ ಸಿ.ಟಿ.ರವಿಗೆ ತಿಳಿದಿತ್ತೋ ಅಥವಾ ತಿಳಿದಿರಲಿಲ್ವೋ ಗೊತ್ತಿಲ್ಲ. ಆದ್ರೆ, ದಿಢೀರ್ ಅಂತ ಪ್ರತ್ಯಕ್ಷರಾಗಿದ್ರು. ಈ ವೇಳೆ ಕ್ರೀಡಾಂಗಣ […]

ಎಲ್ಲಿ ನೋಡಿದ್ರೂ ಬರೀ ಧೂಳು: ಹಾಸ್ಟೆಲ್ ಅವ್ಯವಸ್ಥೆಗೆ ಕ್ರೀಡಾ ಸಚಿವರು ಗರಂ!
Follow us on

ಮೈಸೂರು: ಧೂಳು ಬರೀ ಧೂಳು.. ಯಾವುದೇ ರೂಮ್​ಗೋದ್ರು.. ಯಾವುದೇ ಜಾಗ ನೋಡಿದರೂ ಕಣ್ಣಿಗೆ ಕಾಣಿಸೋದು ಮತ್ತದೇ ಧೂಳು. ಅಷ್ಟೇ ಅಲ್ಲ, ವಿದ್ಯಾರ್ಥಿಗಳಿರೋ ಹಾಸ್ಟೆಲ್​​ನಲ್ಲಿ ಏನಂದ್ರೆ ಏನೂ ಸರಿಯಿಲ್ಲ. ಫುಡ್​ನಿಂದ ಹಿಡಿದು ಸಿಬ್ಬಂದಿ ತನಕ ವೇಸ್ಟ್.. ವೇಸ್ಟ್.. ವೇಸ್ಟ್.

ಅವ್ಯವಸ್ಥೆ ಬಗ್ಗೆ ಕ್ರೀಡಾ ಸಚಿವ ಸಿ.ಟಿ.ರವಿ ತರಾಟೆ:
ಮೈಸೂರಿನ ಯುವ ಜನ ಮತ್ತು ಕ್ರೀಡಾ ಇಲಾಖೆಯಲ್ಲಿನ ಅವ್ಯವಸ್ಥೆ ಬಗ್ಗೆ ಕ್ರೀಡಾ ಸಚಿವ ಸಿ.ಟಿ.ರವಿಗೆ ತಿಳಿದಿತ್ತೋ ಅಥವಾ ತಿಳಿದಿರಲಿಲ್ವೋ ಗೊತ್ತಿಲ್ಲ. ಆದ್ರೆ, ದಿಢೀರ್ ಅಂತ ಪ್ರತ್ಯಕ್ಷರಾಗಿದ್ರು. ಈ ವೇಳೆ ಕ್ರೀಡಾಂಗಣ ವಸತಿ ನಿಲಯದಲ್ಲಿ ಅವ್ಯವಸ್ಥೆ ತಾಂಡವಾಡ್ತಿತ್ತು. ಅಷ್ಟೇ ಅಲ್ಲ, ಮಹಿಳಾ ಹಾಸ್ಟೆಲ್‌ನಲ್ಲಿರುವ 2 ಕೋಟಿ ವೆಚ್ಚದ ಜಿಮ್ ಐಟಮ್ಸ್ ಧೂಳುಮಯವಾಗಿದ್ವು. ಇಲ್ಲಿನ ದುಃಸ್ಥಿತಿ ನೋಡಿದ ಸಚಿವರು ಸ್ಥಳದಲ್ಲೇ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್‌ಗೆ ಕ್ಲಾಸ್ ಪೀಕಿದ್ರು. ಬಳಿಕ 24 ಗಂಟೆಗಳ ಕಾಲ ಡೆಡ್​​ಲೈನ್ ನೀಡಿದ್ರು.

ಉಸ್ತುವಾರಿ ಸಚಿವ ವಿ.ಸೋಮಣ್ಣ ಸಹ ಗರಂ:
ಮೈಸೂರಿನ ಯುವ ಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಎಲ್ಲವು ಸರಿಯಿಲ್ಲ ಅನ್ನೋದು ಪದೇ ಪದೆ ಸಾಬೀತಾಗ್ತಿದೆ. ಈ ಹಿಂದೆ ದಸರಾ ವೇಳೆ ಕ್ರೀಡಾಪಟುಗಳಿಗೆ ಬಹುಮಾನದ ಹಣವನ್ನ ಬಿಡುಗಡೆ ಮಾಡಿರಲಿಲ್ಲ. ಈ ವಿಚಾರ ತಿಳಿದ ಇದೇ ಇಲಾಖೆ ನಿರ್ದೇಶಕ ಸುರೇಶ್‌ ವಿರುದ್ಧ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೂಡ ಗರಂ ಆಗಿದ್ರು. ಇದೀಗ ಮತ್ತೆ ಶುಚಿತ್ವ ಕಾಪಾಡದೇ ತಗ್ಲಾಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಿಳಾ ಕ್ರೀಡಾಪಟುಗಳು ಸಚಿವರಿಗೆ ದೂರುಗಳ ಸರಮಾಲೆಯನ್ನೆ ನೀಡಿದ್ದಾರೆ.

ಸಚಿವರು ಯಾವಾಗ ತರಾಟೆ ತೆಗೆದುಕೊಂಡ್ರೋ ಸಿಬ್ಬಂದಿ ಕ್ರೀಡಾಂಗಣ ಆವರಣದ ಸ್ವಚ್ಛತೆಗಿಳಿದಿದ್ದಾರೆ. ಆದ್ರೆ, ವ್ಯರ್ಥವಾಗಿರುವ ಜಿಮ್ ಬಗ್ಗೆ ಕ್ರೀಡಾ ಇಲಾಖೆ ನಿರ್ದೇಶಕರು ಹೇಳುವುದೇ ಬೇರೆ. ಒಟ್ನಲ್ಲಿ, ಯುವ ಜನ ಮತ್ತು ಕ್ರೀಡಾ ಇಲಾಖೆಯಲ್ಲಿನ ಅವ್ಯವಸ್ಥೆ ಬಟಾಬಯಲಾಗಿದೆ. ಸಚಿವ ಸಿ.ಟಿ.ರವಿ ಕೂಡ ಸಿಬ್ಬಂದಿಗೆ ಸರಿಯಾಗೇ ಕ್ಲಾಸ್ ಪೀಕಿ, ವಾರ್ನಿಂಗ್ ಕೊಟ್ಟಿದ್ದಾರೆ. ಹೀಗಾಗಿ ಇನ್ನಾದ್ರು ಇಲ್ಲಿನ ಕರ್ಮಕಾಂಡಕ್ಕೆ ಬ್ರೇಕ್ ಬೀಳುತ್ತಾ ಕಾದು ನೋಡ್ಬೇಕು.