ಸಕ್ಕರೆ ನಾಡಿನಲ್ಲಿ ಅಮೂಲ್ಯ ನಿಕ್ಷೇಪ ಪತ್ತೆ!

|

Updated on: Feb 19, 2020 | 4:00 PM

ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಬ್ಯಾಟರಿಗೆ ಬಳಸುವ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಮತ್ತು ಮರಳಗಾಲ ವ್ಯಾಪ್ತಿಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಸುಮಾರು 150 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕರೀಘಟ್ಟ ಬೆಟ್ಟದ ಹಿಂಭಾಗದ ತಪ್ಪಲಿನ ಪ್ರದೇಶದಲ್ಲಿ ಲಿಥಿಯಂ ನಿಕ್ಷೇಪವಿದ್ದು, ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ‌ ನಿರ್ವಹಿಸುತ್ತಿರುವ ಅಟಾಮಿಕ್ ಮಿನರಲ್ಸ್ ಡೈರೆಕ್ಟರ್ಸ್ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಲಿಥಿಯಂ ಸಂಪತ್ತು ವಿದ್ಯುತ್ ಚಾಲಿತ ಕಾರು ಮತ್ತು ಬೈಕ್​ಗಳ ಬ್ಯಾಟರಿಗೆ ಅವಶ್ಯಕವಾಗಿದೆ. ದೇಶದಲ್ಲೇ […]

ಸಕ್ಕರೆ ನಾಡಿನಲ್ಲಿ ಅಮೂಲ್ಯ ನಿಕ್ಷೇಪ ಪತ್ತೆ!
Follow us on

ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಬ್ಯಾಟರಿಗೆ ಬಳಸುವ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಮತ್ತು ಮರಳಗಾಲ ವ್ಯಾಪ್ತಿಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಸುಮಾರು 150 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಕರೀಘಟ್ಟ ಬೆಟ್ಟದ ಹಿಂಭಾಗದ ತಪ್ಪಲಿನ ಪ್ರದೇಶದಲ್ಲಿ ಲಿಥಿಯಂ ನಿಕ್ಷೇಪವಿದ್ದು, ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ‌ ನಿರ್ವಹಿಸುತ್ತಿರುವ ಅಟಾಮಿಕ್ ಮಿನರಲ್ಸ್ ಡೈರೆಕ್ಟರ್ಸ್ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಲಿಥಿಯಂ ಸಂಪತ್ತು ವಿದ್ಯುತ್ ಚಾಲಿತ ಕಾರು ಮತ್ತು ಬೈಕ್​ಗಳ ಬ್ಯಾಟರಿಗೆ ಅವಶ್ಯಕವಾಗಿದೆ. ದೇಶದಲ್ಲೇ ಅಪರೂಪದ ಖನಿಜ‌ ನಿಕ್ಷೇಪ ಮಂಡ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಒಂದಿಷ್ಟೂ ಮಾಹಿತಿಯನ್ನು ವಿಜ್ಞಾನಿಗಳ ತಂಡ ಬಿಟ್ಟುಕೊಡುತ್ತಿಲ್ಲ.







 

Published On - 3:06 pm, Wed, 19 February 20