ಕಲ್ಯಾಣ ಮಂಟಪದಲ್ಲಿ ವಧು-ವರರ ಚಿನ್ನಾಭರಣವೇ ಕಳ್ಳತನ, ಮುಂದೇನಾಯ್ತು?
ದೇವನಹಳ್ಳಿ: ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಮದುಮಗ ಹಾಗೂ ಸಹೋದರನ ಚಿನ್ನಾಭರಣಗಳ ಸಮೇತ ಓಮ್ನಿ ಕಾರು ಕದ್ದು ಖತರ್ನಾಕ್ ಖದೀಮರು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಮದುವೆಗೆ ಬಂದಿದ್ದ ಕಾರನ್ನ ಕಲ್ಯಾಣ ಮಂಟಪದಿಂದಲೇ ಕದ್ದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದು ಬಸವ ಭವನದಲ್ಲಿ ಪ್ರವೀಣ್ ಎಂಬುವರ ಮದುವೆ ನಿಗದಿಯಾಗಿತ್ತು. ಹೀಗಾಗಿ ನಿನ್ನೆಯೇ ಕಲ್ಯಾಣ ಮಂಟಪಕ್ಕೆ ವರನ ಕಡೆಯವರು ಆಗಮಿಸಿದ್ದಾರೆ. ನಿನ್ನೆ ಮಧ್ಯಾಹ್ನ ಲಿಂಗನಹಳ್ಳಿಯ ರವಿ ಎಂಬುವರು ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿ ಊಟ ಮಾಡಲು ತೆರಳಿದ್ದರು. ಈ ವೇಳೆ […]
ದೇವನಹಳ್ಳಿ: ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಮದುಮಗ ಹಾಗೂ ಸಹೋದರನ ಚಿನ್ನಾಭರಣಗಳ ಸಮೇತ ಓಮ್ನಿ ಕಾರು ಕದ್ದು ಖತರ್ನಾಕ್ ಖದೀಮರು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಮದುವೆಗೆ ಬಂದಿದ್ದ ಕಾರನ್ನ ಕಲ್ಯಾಣ ಮಂಟಪದಿಂದಲೇ ಕದ್ದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದು ಬಸವ ಭವನದಲ್ಲಿ ಪ್ರವೀಣ್ ಎಂಬುವರ ಮದುವೆ ನಿಗದಿಯಾಗಿತ್ತು. ಹೀಗಾಗಿ ನಿನ್ನೆಯೇ ಕಲ್ಯಾಣ ಮಂಟಪಕ್ಕೆ ವರನ ಕಡೆಯವರು ಆಗಮಿಸಿದ್ದಾರೆ. ನಿನ್ನೆ ಮಧ್ಯಾಹ್ನ ಲಿಂಗನಹಳ್ಳಿಯ ರವಿ ಎಂಬುವರು ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿ ಊಟ ಮಾಡಲು ತೆರಳಿದ್ದರು. ಈ ವೇಳೆ ಕಾರಿನಲ್ಲಿ ಉಂಗುರ, ಬ್ರಾಸ್ಲೈಟ್, ಚೈನ್, ನಕ್ಲೇಸ್ ಸೇರಿದಂತೆ 200 ಗ್ರಾಂಗೂ ಅಧಿಕ ಚಿನ್ನಾಭರಣವಿತ್ತು. ಹೊಂಚು ಹಾಕಿ ಕಾಯುತ್ತಿದ್ದ ಖದೀಮರು ಚಿನ್ನಾಭರಣ ಸಮೇತ ಕಾರನ್ನು ಚಿಕ್ಕಬಳ್ಳಾಪುರದ ಕಡೆಗೆ ಕದ್ದೊಯ್ದಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣಗಳ ಕಳ್ಳತನದ ನಡುವೆಯೂ ಪರ್ಯಾಯ ಆಭರಣಗಳನ್ನ ತಂದು ಪ್ರವೀಣ್-ನಯನ ಅವರ ಮದುವೆ ಮಾಡಿಸಿದ್ದಾರೆ. ನಿಗದಿಯಾಗಿದ್ದಂತೆ ಇಂದು ಬೆಳಗ್ಗೆ 9.30ರ ಮುಹೂರ್ತದಲ್ಲಿ ಮದುವೆ ಕಾರ್ಯಕ್ರಮ ನೆರವೇರಿದೆ. ಚಿನ್ನಾಭರಣ ಕಳ್ಳತನ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.