Anitha Kumaraswamy: ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೊರೊನಾ ಪಾಸಿಟಿವ್

| Updated By: ಆಯೇಷಾ ಬಾನು

Updated on: Jan 15, 2022 | 1:50 PM

ಇಂದು ಬೆಳಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ವರದಿ ಬಂದಿದ್ದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Anitha Kumaraswamy: ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೊರೊನಾ ಪಾಸಿಟಿವ್
ಶಾಸಕಿ ಅನಿತಾ ಕುಮಾರಸ್ವಾಮಿ
Follow us on

ರಾಮನಗರ: ಶಾಸಕಿ ಅನಿತಾ ಕುಮಾರಸ್ವಾಮಿಗೆ(Anitha Kumaraswamy) ಕೊರೊನಾ ಪಾಸಿಟಿವ್(Coronavirus) ವರದಿ ಬಂದಿದೆ. ಇಂದು ಬೆಳಗ್ಗೆ ವರದಿ ಬಂದಿದ್ದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಚಿ ಸಚಿವ ಎಚ್.ಎಮ್. ರೇವಣ್ಣ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ, ಮಾಜಿ ಶಾಸಕಿ, ಕಾಂಗ್ರೆಸ್ ನಾಯಕಿ ಮಲ್ಲಾಜಮ್ಮ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರಿಗೆ ಕೊರೊನಾ ಸೋಂಕು ತಗುಲಿದೆ.

ಮಾಜಿ ಐಎಎಸ್ ಅಧಿಕಾರಿ ಸಿದ್ದಯ್ಯಗೆ ಕೊವಿಡ್ ದೃಢಪಟ್ಟಿದೆ. ಕಾಂಗ್ರೆಸ್ ಪಕ್ಷದ ನಾಯಕರೂ ಆಗಿರುವ ಸಿದ್ದಯ್ಯ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾಸಿಟಿವ್​ ದೃಢಪಟ್ಟ ಬಳಿಕ ಹೋಮ್ ಐಸೋಲೇಷನ್ ನಲ್ಲಿದ್ದಾರೆ.

ರಾಜ್ಯದಲ್ಲಿ ನಿನ್ನೆ ಒಂದೇ ದಿನ 28,723 ಕೇಸ್ ಪತ್ತೆಯಾಗಿದ್ರೆ 14 ಜನ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇದರಲ್ಲಿ ಬಹುಪಾಲು, ಅಂದ್ರೆ.. ಶೇ.70ಕ್ಕೂ ಹೆಚ್ಚು ಸೋಂಕುಗಳು ಕಂಡುಬರುತ್ತಿರುವುದು ರಾಜಧಾನಿ ಬೆಂಗಳೂರಿನಲ್ಲೇ.. ಈ ಮೂಲಕ ರಾಜ್ಯದಲ್ಲಿ 1 ಲಕ್ಷದ 40 ಸಾವಿರಕ್ಕೂ ಹೆಚ್ಚು ಆ್ಯಕ್ಟೀವ್ ಕೇಸ್ಗಳಿವೆ. ಪಾಸಿಟಿವಿಟಿ ರೇಟ್ ಶೇ.12.98ರಷ್ಟಿದೆ.

ಕೊರೊನಾ ಪಾಸಿಟಿವಿಟಿ ರೇಟ್
ಜಿಲ್ಲೆ -ಪಾಸಿಟಿವಿಟಿ ದರ
ಬೆಂಗಳೂರು -19.63%
ಕೋಲಾರ –13.84%
ತುಮಕೂರು- 13%
ರಾಮನಗರ-13%
ರಾಯಚೂರು -10.09%
ಧಾರವಾಡ – 10.07%
ಬೀದರ್-10.01%
ಮಂಡ್ಯ – 9.4%
ಶಿವಮೊಗ್ಗ -9.3%
ಕಲಬುರಗಿ -9%

ಇದನ್ನೂ ಓದಿ: DRS Controversy: ಭಾರತದ ಡಿಆರ್​ಎಸ್ ಡ್ರಾಮ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬ್ರಾಡ್​ಕ್ಯಾಸ್ಟ್ರ್ ಸೂಪರ್ ಸ್ಪೋರ್ಟ್ಸ್​

Published On - 12:53 pm, Sat, 15 January 22