ಶ್ರೀಹರ್ಷ ಹಾಡಿದ ಶ್ರೀರಾಮ ಹಾಡಿಗೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಗಲಾಟೆ, ಪ್ರತಾಪ್ ಸಿಂಹ ಆಕ್ರೋಶ!

|

Updated on: May 09, 2024 | 9:46 PM

ತಣ್ಣಗಾಗಿದ್ದ ಧರ್ಮ ದಂಗಲ್ ಮತ್ತೆ ಶುರುವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಕಾಲೇಜಿನಲ್ಲಿ ಧರ್ಮ ದಂಗಲ್ ಕಿಡಿ ಹೊತ್ತಿಕೊಂಡಿದೆ. ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡು ಕೋಲಾಹಲ ಸೃಷ್ಟಿಸಿದೆ.

ಶ್ರೀಹರ್ಷ ಹಾಡಿದ ಶ್ರೀರಾಮ ಹಾಡಿಗೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಗಲಾಟೆ, ಪ್ರತಾಪ್ ಸಿಂಹ ಆಕ್ರೋಶ!
Follow us on

ಮೈಸೂರು(ಮೇ.09): ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ(mysuru st philomenas college day) ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡು ಕೋಲಾಹಲ ಸೃಷ್ಟಿಸಿದೆ. ಮೈಸೂರಿನ ಖ್ಯಾತ ಗಾಯಕ, ದೇಶ ವಿದೇಶದಲ್ಲಿ ಕಾರ್ಯಕ್ರಮ ನಡೆಸಿಕೊಡುವ ಶ್ರೀಹರ್ಷ (shree harsha) ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡಿನಿಂದ ಕಾರ್ಯಕ್ರಮದಲ್ಲಿ ಗಲಾಟೆ ಶುರುವಾಗಿದ್ದು, ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಹಿಂದೂ ವಿದ್ಯಾರ್ಥಿಗೆ ಥಳಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ(mp pratap simha)  ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಹಲ್ಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ನಿನ್ನೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕ ಶ್ರೀಹರ್ಷ ಅವರು “ಜಯತು ಜಯತು ಜೈ ಶ್ರೀರಾಮ್” ಎಂದು ಹಾಡಿದಾಗ ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.


ಶ್ರೀಹರ್ಷ ಹಾಡಿನ ಸಣ್ಣ ತುಣುಕನ್ನು ಟ್ವೀಟ್ ಮೂಲಕ ಹಂಚಿಕೊಳ್ಳಲಾಗಿದೆ. ಬಳಿಕ ಇನ್ನೆರಡು ವಿಡಿಯೋ ಕಾರ್ಯಕ್ರಮದಲ್ಲಿ ನಡೆದ ಗಟಾಲೆ ವಿಡಿಯೋವನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ. ಪ್ರತಾಪ್ ಸಿಂಹ ಹಂಚಿಕೊಂಡಿರುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಬೇಡಿ ಎಂಬ ಬರಹದಡಿ ಶ್ರೀಹರ್ಷ ಹಾಡನ್ನು ಪೋಸ್ಟ್ ಮಾಡಲಾಗಿದೆ. ಇನ್ನು ಹಾಡಿನ ಬಳಿಕ ಕಾಲೇಜಿನಲ್ಲಿ ಶುರುವಾದ ಗಲಾಟೆ, ಹಿಂದೂ ವಿದ್ಯಾರ್ಥಿಗೆ ಥಳಿಸಿದ ವಿಡಿಯೋವನ್ನು ಮುಸ್ಲಮರ ಶಕ್ತಿ ಎಂಬ ಬರಹಡದಿ ಪೋಸ್ಟ್ ಮಾಡಲಾಗಿದೆ.

ಘಟನೆ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಮೈಸೂರಿನ ಗಾಯಕನ ಕಾರ್ಯಕ್ರಮದಲ್ಲಿ ಈ ರೀತಿ ಗಲಾಟೆ, ಅದು ಕೂಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಆಘಾತ ಎಂದು ಹಲವರು ಪ್ರತಿಕ್ರೆಯ ನೀಡಿದ್ದಾರೆ. ಇದೇ ವೇಳೆ ಕಲವರು ಕಾಲೇಜಿನಲ್ಲಿ ಜೈ ಶ್ರೀರಾಮ ಹಾಡು ಹಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ