ಮೈಸೂರು: 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 19 ನಿವೇಶನ ನೀಡಿದ್ದ ಮುಡಾ, ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ

| Updated By: Ganapathi Sharma

Updated on: Nov 16, 2024 | 9:51 AM

ಮುಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿವೆ. ವ್ಯಕ್ತಿಯೊಬ್ಬರಿಂದ ಭೂಸ್ವಾಧೀನ ಮಾಡಿಕೊಂಡಿದ್ದಕ್ಕೆ ಪರಿಹಾರವಾಗಿ 2 ಸೈಟ್ ನೀಡಬೇಕಿದ್ದ ಮುಡಾ, 50-50ರ ಅನುಪಾತದಲ್ಲಿ ಪರಿಹಾರವಾಗಿ 19 ಸೈಟ್​​ಗಳನ್ನು ಹಂಚಿದ್ದ ಪ್ರಕರಣ ಬೆಳಕಿಗೆ ಬಂದಿದೆ. ವಿವರ ಇಲ್ಲಿದೆ.

ಮೈಸೂರು: 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 19 ನಿವೇಶನ ನೀಡಿದ್ದ ಮುಡಾ, ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ
ಮಹೇಂದ್ರ ಎಂಬವರ ಹೆಸರಿಗೆ ಮಾಡಿರುವ ಕ್ರಯಪತ್ರ ಮತ್ತು ನಿವೇಶನ ಹಂಚಿಕೆ ವಿವರದ ದಾಖಲೆಗಳ ಪ್ರತಿ
Follow us on

ಮೈಸೂರು, ನವೆಂಬರ್ 16: ಒಂದೆಡೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಅಧಿಕಾರಿಗಳ ವಿರುದ್ಧದ ತನಿಖೆಯನ್ನು ಲೋಕಾಯುಕ್ತ, ನ್ಯಾಯಾಂಗ ಆಯೋಗ ಹಾಗೂ ಜಾರಿ ನಿರ್ದೇಶನಾಲಯಗಳು ಚುರುಕುಗೊಳಿಸಿದ್ದರೆ ಮತ್ತೊಂದೆಡೆ, ಸಂಸ್ಥೆಯಲ್ಲಿ ನಡೆದಿದ್ದ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದೀಗ, ವ್ಯಕ್ತಿಯೊಬ್ಬರಿಂದ ಯಾವಾಗ ಭೂಸ್ವಾಧೀನ ಮಾಡಿಕೊಂಡಿದ್ದು ಎಂಬ ಮಾಹಿತಿಯೇ ಇಲ್ಲದೆ, ಅವರಿಗೆ 19 ನಿವೇಶನಗಳನ್ನು ಹಂಚಿರುವುದು ತಿಳಿದುಬಂದಿದೆ.

ಮಹೇಂದ್ರ ಎಂಬುವವರಿಗೆ ಸೇರಿದ 2.22 ಎಕರೆ ಭೂಮಿ ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ, ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಎಂಬ ಮಾಹಿತಿ ಮುಡಾ ಬಳಿ ಇಲ್ಲವಂತೆ! ಆದಾಗ್ಯೂ ಅವರಿಗೆ 50-50 ಅನುಮಪಾತದಲ್ಲಿ ಸೈಟ್​​​ಗಳನ್ನು ಹಂಚಿಕೆ ಮಾಡಲಾಗಿದೆ.

ದೇವನೂರು ಭೂಮಿಗೆ ವಿಜಯನಗರ 3 ನೇ ಹಂತದಲ್ಲಿ ಸೈಟ್!

ದೇವನೂರು ಗ್ರಾಮದ ಸರ್ವೆ ನಂ. 81/2 ರಲ್ಲಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದರೆ ಯಾವಾಗ ಆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಮುಡಾ ಬಳಿ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3 ನೇ ಹಂತದಲ್ಲಿ ನಿವೇಶನಗಳನ್ನು ನೀಡಲಾಗಿದೆ.

2 ಸೈಟ್​ಗಳ ಬದಲಿಗೆ 19 ಸೈಟ್ ಪರಿಹಾರ

ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆ. ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್​ಗಳು ಮಾತ್ರ. 40*60 ಮತ್ತು 40*30 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರಮುಖ ಪ್ರದೇಶದಲ್ಲೇ 19 ನಿವೇಶನ ನೀಡಲಾಗಿದೆ.

ಇದನ್ನೂ ಓದಿ: ಮುಸ್ಲಿಂ ಓಲೈಕೆ ಆರೋಪದಿಂದ ಹಿನ್ನಡೆ: ಎಚ್ಚರಿಕೆ ಹೆಜ್ಜೆ ಇಟ್ಟ ಕಾಂಗ್ರೆಸ್ ಸರ್ಕಾರ, ಕೆಲ ನಿರ್ಧಾರಗಳಿಗೆ ತಡೆ

ಏತನ್ಮಧ್ಯೆ, ಮುಡಾ ಹಗರಣದ ಸುಳಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಿಗೂ ಸುತ್ತಿಕೊಂಡಿದೆ. ಒಂದು ಕಡೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ತನಿಖೆಯ ಕೊನೆಯ ಹಂತಕ್ಕೆ ಬಂದು ನಿಂತಿದ್ದರೆ, ಮತ್ತೊಂದು ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತಷ್ಟು ಜನರ ವಿಚಾರಣೆ ಮಾಡಿದ್ದಾರೆ. ಸಿದ್ದರಾಮಯ್ಯ ಆಪ್ತರಾಗಿರುವ ಮರೀಗೌಡ ಸೇರಿದಂತೆ ಇನ್ನೂ ಮೂವರನ್ನು ಕಚೇರಿಗೆ ಕರೆಸಿ ಹಗರಣ ಸಂಬಂದ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಬೆಂಗಳೂರಿನ ಇಡಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡ, ಮರಿಗೌಡ ಆಪ್ತ ಶಿವಣ್ಣ, ಮಾಜಿ ಆಯುಕ್ತ ನಟೇಶ್, ಮಾಜಿ ತಹಶೀಲ್ದಾರ್ ಮಾಳಿಗೆ ಶಂಕರ್​​ರನ್ನ ವಿಚಾರಣೆ ನಡೆಸಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ