Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀರ್ ಸಹವಾಸ ನನ್ನ ಜೀವನದ ಅತ್ಯಂತ ಕರಾಳ ದಿನಗಳು ಎಂದ ಕುಮಾರಸ್ವಾಮಿ!

ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಮೌನಕ್ಕೆ ಶರಣಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಈಗ ಜಮೀರ್‌ ಅಹ್ಮದ್‌ (Zameer Ahmed) ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಜಮೀರ್ ಸಹವಾಸ ನನ್ನ ಜೀವನದ ಅತ್ಯಂತ ಕರಾಳ ದಿನಗಳು ಎಂದ ಕುಮಾರಸ್ವಾಮಿ!
ಕುಮಾರಸ್ವಾಮಿ-ಜಮೀರ್ ಅಹಮ್ಮದ್ ಖಾನ್
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Nov 15, 2024 | 4:10 PM

ಮೈಸೂರು, (ನವೆಂಬರ್ 15): ತಮ್ಮನ್ನು ಕರಿಯ ಎಂದು ವ್ಯಂಗವಾಡಿದ್ದು ಅಲ್ಲದೇ ದೇವೇಗೌಡರ (Devegowda) ಕುಟುಂಬವನ್ನು ಮುಸ್ಲಿಮರು ಖರೀದಿಸುತ್ತಾರೆ ಎಂದಿದ್ದ ಜಮೀರ್‌ ಅಹ್ಮದ್‌ ಅವರ ಕಥೆಯನ್ನು ಮುಂದೆ ಬಿಚ್ಚಿಡುತ್ತೇನೆ ಎಂದು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಯ ಎಂದು ಕರೆದಿದ್ದಕ್ಕೆ ಜಾಸ್ತಿ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ತಂದೆಯ ಬಗ್ಗೆ ಜಮೀರ್‌ ಮಾತನಾಡಿದ್ದಕ್ಕೆ ಗರಂ ಆಗಿದ್ದು, ಮುಸ್ಲಿಮರು ಟಯರ್‌ ಅಂಗಡಿ ಇಟ್ಟುಕೊಂಡಿರುತ್ತಾರೆ. ಅವರ ಬಳಿಕ ಚಂದಾ ಎತ್ತಿ ದೇವೇಗೌಡರನ್ನು ಕೊಂಡುಕೊಳ್ಳುತ್ತಾರಾ? ಜಮೀರ್‌ಗೆ ದುಡ್ಡಿನ ಮದ ಬಂದಿದೆ. ನಿಯತ್ತಾಗಿ ಬಸ್ ಓಡಿಸಿ ಬಂದ ದುಡ್ಡಾ ಅದು? ಇದೆನ್ನೆಲ್ಲಾ ಮುಂದಿನ ದಿನದಲ್ಲಿ ಮಾತನಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕುಮಾರಸ್ವಾಮಿಯದ್ದು ಜೆಡಿಎಸ್‌ನ ಕಥೆ ಮುಗಿಯಿತು ಅಂತ ಅಂದುಕೊಂಡಿದ್ದರು. ಈಗ ಮತ್ತೆ ನಮಗೆ ಶಕ್ತಿ ಬಂದಿದೆ ಅದನ್ನು ತಡೆದುಕೊಳ್ಳಲು ಆಗದೇ ಈ ರೀತಿ ಮಾತನಾಡುತ್ತಿದ್ದಾರೆ. ಜಮೀರ್ ಮತ್ತು ಆ ನಾಲ್ಕು ಜನರ ಜೊತೆ ಇದ್ದದ್ದು ನನ್ನ ಜೀವನದ ಅತ್ಯಂತ ಕರಳ ದಿನಗಳು. ಅವರನ್ನು ಈಗ ಕೊಚ್ಚೆ ಎಂದು ಈಗ ದೂರ ಇಟ್ಟಿದ್ದೇನೆ.

ಇದನ್ನೂ ಓದಿ: ಕಾಂಗ್ರೆಸ್ಸಿಗರ ನೆಮ್ಮದಿ ಕೆಡಿಸಿ ಯೋಗೇಶ್ವರ್‌ ನಿದ್ದೆಗೆಡಿಸಿದೆ ಜಮೀರ್!

ಕೊಚ್ಚೆಗಳ ಬಗ್ಗೆ ಪದೇ ಪದೇ ಯಾಕೆ ನನ್ನನ್ನು ಮಾತನಾಡಿಸುತ್ತೀರಿ. ನಿಮಗೆ ಮೋಸ ಮಾಡಿದ ದಿನ ನಾನು ಏನಾಗ್ತೀನಿ ಎಂದು ನೂರು ಬಾರಿ ಜಮೀರ್ ನನಗೆ ಹೇಳಿದ್ದಾನೆ. ಆ ಪದ ಯಾವುದು ಎಂಬುದನ್ನು ನನ್ನ ಬಾಯಿಯಿಂದ ಹೇಳಿಸಬೇಡಿ. ಅದು ಅತ್ಯಂತ ಕೆಟ್ಟ ಪದ. ನನಗೆ ಅದನ್ನು ಸಾರ್ವಜನಿಕವಾಗಿ ಬಳಸಲು ಆಗುತ್ತಿಲ್ಲ. ಮೆಕ್ಕಾಗೆ ಹೋಗುತ್ತಾರಲ್ಲ ಅಲ್ಲಿ ಆ ಪದವನ್ನು ಅವರು ಜ್ಞಾಪಿಸಿಕೊಳ್ಳಲಿ. ಅಂತಹ ಪದ ಅದು. ಈಗ ದುಡ್ಡಿನ ಮದದಲ್ಲಿ ಅವರು ಮಾತನಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ