ಮೈಸೂರು: ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು 50% ರಿಯಾಯಿತಿ ನೀಡಿದ್ದ ಹಿನ್ನಲೆ, ಠಾಣೆ ಮುಂದೆ ಜನವೋ ಜನ, ಬಹಳ ದಿನಗಳಿಂದ ಹಲವು ಕೇಸ್ಗಳೊಂದಿಗೆ ಬಾಕಿ ಉಳಿಸಿಕೊಂಡಿದ್ದವರು ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ತಪ್ಪಿಸಿಕೊಂಡು ಹೋಗುತ್ತಿದ್ದ ವಾಹನ ಸವಾರರು ನಗರದಲ್ಲಿ ಒಟ್ಟು 4.98 ಲಕ್ಷ ಕೇಸ್ಗಳಿಗೆ ದಂಡ ಕಟ್ಟಿದ್ದಾರೆ. ಈ ಮೂಲಕ 9 ದಿನಗಳಲ್ಲಿ ಬರೋಬ್ಬರಿ 12.30 ಕೋಟಿ ದಂಡ ಸಂಗ್ರಹವಾಗಿದೆ ಎಂದು ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ಇನ್ನು ಹೆಲ್ಮೆಟ್ ಇಲ್ಲದೆ ಪ್ರಯಾಣ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಉಲ್ಲಂಘನೆ, ಸೀಟ್‌ಬೆಲ್ಟ್ ಅಂತಾ ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿರೋ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ರು. ಈ ದಂಡದ ಮೊತ್ತವೇ ಬರೋಬ್ಬರಿ 12.30 ಕೋಟಿಯಾಗಿತ್ತು. ಆದ್ರೆ ಸವಾರರು ಮಾತ್ರ ದಂಡ ಪಾವತಿಸದೇ ತಪ್ಪಿಸಿಕೊಂಡು ಓಡಾಡ್ತಿದ್ರು. ಇದೀಗ ಕೋರ್ಟ್ ಮೂಲಕ ಆಫರ್‌ಗೆ ಅನುಮತಿ ಪಡೆದ ಟ್ರಾಫಿಕ್ ಪೊಲೀಸರು ಭರ್ಜರಿ ವಸೂಲಿ ಮಾಡಿದ್ದಾರೆ. ಹೌದು ದಂಡ ಶುಲ್ಕದಲ್ಲಿ ಶೇಕಡಾ 50 ರ ರಿಯಾಯ್ತಿಯನ್ನ ಟ್ರಾಫಿಕ್ ಪೊಲೀಸರು ಘೋಷಣೆ ಮಾಡ್ತಿದ್ದಂತೆ ದಂಡ ಪಾವತಿಸುವುದಕ್ಕೆ ಸವಾರರು ಮುಗಿ ಬಿದ್ದಿದ್ದು, ಕ್ಯೂನಲ್ಲಿ ನಿಂತು ಸಾವಿರಾರು ಜನ ಫೈನ್ ಕಟ್ಟಿದ್ದಾರೆ. ಒಟ್ಟಿನಲ್ಲಿ ಫೈನ್ ಕಟ್ಟಬೇಕಾಗುತ್ತೆ ಎಂದು ತಪ್ಪಿಸಿಕೊಂಡು ಓಡಾಡುತ್ತಿದ್ದ ವಾಹನ ಸವಾರರು, ಕಳೆದ 9 ದಿನಗಳಿಂದ ಮಾತ್ರ ಪೊಲೀಸರನ್ನ ಹುಡುಕಿಕೊಂಡು ಹೋಗಿ ದಂಡ ಪಾವತಿಸಿದ್ದಾರೆ. ಇನ್ನು ಈ ಆಫರ್‌ಗೆ ಬಂದ ಭರ್ಜರಿ ರೆಸ್ಪಾನ್ಸ್ನಿಂದ ಇದನ್ನ ವಿಸ್ತಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Tue, 14 February 23