ಮೈಸೂರಿನಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ, ನಿಟ್ಟುಸಿರುವ ಬಿಟ್ಟ ಜನ

| Updated By: Rakesh Nayak Manchi

Updated on: Dec 17, 2022 | 10:54 AM

ಮೈಸೂರು ತಾಲೂಕಿನಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದರೆ, ಪಕ್ಕದ ಜಿಲ್ಲೆ ಚಾಮರಾಜನರಗ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಮೂಡಿಸಿದೆ.

ಮೈಸೂರಿನಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ, ನಿಟ್ಟುಸಿರುವ ಬಿಟ್ಟ ಜನ
ವೆಂಕಟರಮಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಪ್ರತ್ಯಕ್ಷ ಮತ್ತು ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ
Follow us on

ಮೈಸೂರು: ತಾಲೂಕಿನ ಜನರ ನಿದ್ದೆಗೆಡಿಸಿದ್ದ ಮತ್ತೊಂದು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಮಾರಶೆಟ್ಟಹಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು (Leopard Spotted) ಜನರಲ್ಲಿ ಭೀತಿ ಉಂಟು ಮಾಡಿತ್ತು. ಅದರಂತೆ RFO ಸುರೇಂದ್ರ, DRFO ವಿಜಯ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿ ಗ್ರಾಮದಲ್ಲಿ ಒಂದು ಬೋನ್ ಅನ್ನು ಇರಿಸಲಾಗಿತ್ತು. ಸದ್ಯ ಈ ಬೋನಿಗೆ ಚಿರತೆ ಬಿದ್ದಿದ್ದು (Leopard falls into cage), ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಟಿ.ನರಸೀಪುರ: ಮೇಯುತ್ತಿದ್ದ ಮೇಕೆ ಮೇಲೆ ಚಿರತೆ ದಾಳಿ

ಗುಂಡ್ಲುಪೇಟೆ ತಾಲೂಕಿನಲ್ಲಿ ಚಿರತೆ ಹಾವಳಿ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಚಿರತೆ ಹಾವಳಿ ಕಡಿಮೆಯಾಗಿಲ್ಲ. ಕಳೆದ 4 ದಿನಗಳ ಹಿಂದೆ ಕಿಲಗೆರೆಯಲ್ಲಿ ಕುರಿ ಮೇಲೆ ಚಿರತೆಯೊಂದು ದಾಳಿ ಮಾಡಿತ್ತು. ಇದೀಗ ಚಾಮರಾಜನಗರ ತಾಲೂಕಿನಲ್ಲಿರುವ ವೆಂಕಟರಮಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸಾರ್ವಜನಿಕರ ಮೊಬೈಲ್​ನಲ್ಲಿ ಚಿರತೆ ಸಂಚಾರದ ವಿಡಿಯೋ ಸೆರೆಯಾಗಿದೆ. ಹಲವು ದಿನಗಳಿಂದ ಉಪಟಳ ನೀಡುತ್ತಿರುವ ಈ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿರುವ ಬೋನಿಗೆ ಬೀಳದೆ ಎಲ್ಲಾ ಕಡೆಗಳಲ್ಲಿ ಓಡಾಡುತ್ತಿದ್ದು, ಇದರಿಂದಾಗಿ ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಹೊಸಪಾಳ್ಯ ಗ್ರಾಮದಲ್ಲಿ ಚಿರತೆ, ಕಾಡಂದಿ ನಂತರ ಕರಡಿ ಕಾಟ

ರಾಮನಗರ: ಹೊಸಪಾಳ್ಯ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಚಿರತೆ, ಕಾಡು ಹಂದಿ ನಂತರ ಇದೀಗ ಕರಡಿ ಕಾಟ ಆರಂಭವಾಗಿದೆ. ತಡರಾತ್ರಿ ಗ್ರಾಂಕ್ಕೆ ಕರಡಿ ಎಂಟ್ರಿ ಕೊಟ್ಟಿರುವ ದೃಶ್ಯಾವಳಿ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರು ‌ದಕ್ಷಿಣ ತಾಲೂಕಿನ ಹೊಸಪಾಳ್ಯ ಗ್ರಾಮದ ರಾಮಚಂದ್ರಪ್ಪ ಎಂಬುವವರ ಮನೆ ಬಳಿ‌ ಕರಡಿ ಪ್ರತ್ಯೇಕ್ಷಗೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ವಾರದ ಹಿಂದೆ ಕೆಂಪರಾಜು ಎಂಬ ಯುವಕನ ಮೇಲೆ ಕಾಡುಹಂದಿ ದಾಳಿ ನಡೆಸಿತ್ತು. ಘಟನೆಯಲ್ಲಿ ಯುವಕನಿಗೆ ಗಂಭೀರ ಗಾಯಗಳಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 am, Sat, 17 December 22