ಮೈಸೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಸೋಂಕಿನ ತೀವ್ರತೆ ಕಡಿಮೆ ಇದೆ. ಹೀಗಾಗಿ ಕರ್ನಾಟಕ ಸರ್ಕಾರ (Karnataka Government) ಕಠಿಣ ನಿಯಮಗಳನ್ನ ಜಾರಿಗೆ ತಂದಿಲ್ಲ. ಆದರೆ ಮೆರವಣಿಗೆ, ಜಾತ್ರಾ ಮಹೋತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಜಾತ್ರೆಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವ ಸರಳವಾಗಿ ಜರುಗಿದೆ. ಪ್ರತಿ ವರ್ಷ 6 ದಿನಗಳು ನಡೆಯುತ್ತಿದ್ದ ಶಿವರಾತ್ರೀಶ್ವರ ಜಾತ್ರೆ ಈ ಬಾರಿ ಸರಳವಾಗಿ ನಡೆಯುತ್ತಿದೆ.
ಕೊರೊನಾ ಭೀತಿಯಿಂದ ಕಳೆದ ವರ್ಷವೂ ಸುತ್ತೂರು ಜಾತ್ರೆ ರದ್ದಾಗಿತ್ತು. ಈ ಬಾರಿಯೂ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಅದ್ದೂರಿ ಆಚರಣೆ ಸಾಧ್ಯವಾಗಿಲ್ಲ. ಸರಳವಾಗಿ ನಡೆದ ಸುತ್ತೂರು ಜಾತ್ರೆಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸುತ್ತೂರುಶ್ರೀ ಚಾಲನೆ ನೀಡಿದರು. ಉತ್ಸವ ಮೂರ್ತಿ ಮೆರವಣಿಗೆ, ಬೆಳ್ಳಿ ರಥೋತ್ಸವ ಆಚರಣೆ ಮಾಡಿದರು.
ಒಂದೇ ದಿನ 37 ಮಕ್ಕಳಿಗೆ ಕೊರೊನಾ ಪಾಸಿಟಿವ್:
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಎರಡು ಶಾಲೆಗಳ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಒಂದೇ ದಿನ 37 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ವಿನಾಯಕ ಮತ್ತು ಶರಣಬಸವೇಶ್ವರ ಪ್ರಾಥಮಿಕ ಶಾಲೆಗಳು ಸೀಲ್ ಡೌನ್ ಆಗಿವೆ. ಕೊವಿಡ್ ಪತ್ತೆಯಾದ ಹಿನ್ನೆಲೆ ಶಾಲೆಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ
‘ಗೀತಾ ಅವರು ತಾಯಿ ಸ್ಥಾನದಲ್ಲಿ ಇದ್ದಾರೆ’; ಮೈಸೂರಿನ ಶಕ್ತಿಧಾಮದ ಬಗ್ಗೆ ಶಿವರಾಜ್ಕುಮಾರ್ ಮಾತು
Published On - 3:10 pm, Sun, 30 January 22