ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ; ಬೈಕ್ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ

ವಿವಾಹಿತ ಮಹಿಳೆ ಜೊತೆ ಹಲ್ಲೆಗೊಳಗಾದ ಶರತ್ಗೆ ಅಕ್ರಮ ಸಂಬಂಧವಿದೆ ಎಂದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಶರತ್ಗೆ ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧವಿರುವ ಆರೋಪ ಕೇಳಿ ಬಂದಿದೆ.

ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ; ಬೈಕ್ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ
ಹಲ್ಲೆಗೆ ಒಳಗಾದ ತಂಡೆ-ಮಗ
Follow us
TV9 Web
| Updated By: ಆಯೇಷಾ ಬಾನು

Updated on: Jan 31, 2022 | 8:56 AM

ಮೈಸೂರು: ವಿವಾಹಿತ ಮಹಿಳೆಯ ಜತೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಬೈಕ್‌ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ತಂದೆ, ಮಗನಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಮಹಿಳೆ ಪಾರಾಗಿದ್ದಾರೆ. ಹಲ್ಲೆಯಲ್ಲಿ ಶಿವಪ್ಪ(45), ಮಗ ಶರತ್(20)ಗೆ ಗಾಯಗಳಾಗಿವೆ. ಲೋಹಿತ್‌ ಕುಮಾರ್, ಪರಶಿವಮೂರ್ತಿ ಎಂಬುವವರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ವಿವಾಹಿತ ಮಹಿಳೆ ಜೊತೆ ಹಲ್ಲೆಗೊಳಗಾದ ಶರತ್ಗೆ ಅಕ್ರಮ ಸಂಬಂಧವಿದೆ ಎಂದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಶರತ್ಗೆ ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧವಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಲವು ಬಾರಿ ರಾಜಿ ಪಂಚಾಯಿತಿ ಆಗಿತ್ತು. ಆದ್ರೆ ತಂದೆ, ಮಗ, ಮಹಿಳೆ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದಾಗ ಲೋಹಿತ್‌ ಕುಮಾರ್, ಪರಶಿವಮೂರ್ತಿ ಎಂಬುವವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಚ್ಚಿನಿಂದ ಆರೋಪಿಗಳು ಹಲ್ಲೆ ಮಾಡಿರುವುದರಿಂದ ತಂದೆ, ಮಗನಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಿಂದ ಹೊರಗೆ ಕರೆ ತಂದ ಬಳಿಕ ನೆತ್ತರ ಓಕುಳಿ ಹರಿಸಿದ ಸ್ನೇಹಿತರು ದಾವಣಗೆರೆ ನಗರದ ದುರ್ಗಾಂಭಿಕಾ ದೇವಸ್ಥಾನದ ಬಳಿಯ ಕಳದಪ್ಪನರಕಣದ ನಿವಾಸಿ ಪುನೀತ್ ಟೈಲ್ಸ್ ಕೆಲಸ ಮಾಡ್ತಿದ್ದ. ಪುನೀತ್ ಮೇಲೆ ಮನೆಯ ನೊಗ ಬಿದ್ದಿತ್ತು. ಆದ್ರೆ, ಇವನು ಇಲ್ಲಸಲ್ಲದವರ ಸಹವಾಸಕ್ಕೆ ಬಿದ್ದು, ವ್ಯಕ್ತಿಯೊಬ್ಬನ ಮೇಲಿನ ಹಲ್ಲೆ ಕೇಸ್ನಲ್ಲಿ ಜೈಲು ಸೇರಿದ್ದ. ಈ ವೇಳೆ ಸ್ನೇಹಿತರಾದ ರಾಕೇಶ್ ಮತ್ತು ವಿನೋದ್ ಜಾಮೀನಿನ ಮೇಲೆ ಹೊರ ಬರಲು ಸಹಾಯ ಮಾಡಿದ್ರು. ಆದ್ರೆ, ಜೈಲಿಂದ ಬಂದ ಮೂರೇ ದಿನಕ್ಕೆ, ಇದೇ ಸ್ನೇಹಿತರೇ ಅವನ ಜೀವ ತೆಗೆದಿದ್ದಾರೆ.

ಜಾಮೀನು ಕೊಡಿಸಲು ಹಣ ಖರ್ಚು ಮಾಡಿದ್ರು ಸ್ನೇಹಿತರು ವಿಷ್ಯ ಏನಂದ್ರೆ, ಪುನೀತ್ ಜೈಲಿನಿಂದ ರಿಲೀಸ್ ಆಗ್ತಿದ್ದಂತೆ, ಖರ್ಚು ಮಾಡಿದ್ದ ಹಣಕ್ಕಾಗಿ ಸ್ನೇಹಿತರು ಬೆನ್ನು ಬಿದ್ದಿದ್ರು. ಇದ್ರಿಂದ ಸ್ನೇಹಿತರಿಂದ ತಪ್ಪಿಸಿಕೊಂಡು ಪುನೀತ್ ತಿರುಗಾಡ್ತಿದ್ದ. ಆದ್ರೆ, ಇದೇ 27ರ ಸಂಜೆ ಕೂಡ ಯಾರೇ ಬಂದ್ರೂ ನಾನು ಮನೆಯಲ್ಲಿ ಇಲ್ಲ ಅಂತೇಳಿ ಎಂದು ಒಳಗೆ ಸೇರಿದ್ದ. ಐದೇ ನಿಮಿಷಕ್ಕೆ ರಾಕೇಶ್ ಮತ್ತು ವಿನೋದ್ ಮನೆ ಬಳಿ ಬಂದಿದ್ರು. ಈ ವೇಳೆ, ಕುಟುಂಬಸ್ಥರು ತಡೆದಿದ್ದು, ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಕೈಗೆ ಸಿಕ್ಕ ಪುನೀತ್ ಮೇಲೆ ಹಲ್ಲೆ ಮಾಡಿದ್ದು ಕೆಳಗೆ ಬಿಸಾಕಿದ್ದಾರೆ. ಈ ವೇಳೆ ತಲೆಗೆ ಕಟ್ಟೆಗೆ ಬಡಿದಿದ್ದು ಪುನೀತ್ಗೆ, ತೀವ್ರ ರಕ್ತ ಶ್ರಾವ ಆಗಿದೆ.

ತಲೆಗೆ ಪೆಟ್ಟಾಗಿ ನರಳ್ತಿದ್ದ ಪುನೀತ್ನನ್ನ, ಆರೋಪಿಗಳೇ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಮೆದುಳಿಗೆ ಪೆಟ್ಟಾಗಿದ್ದು ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಬೇಕು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿರಿ ಅಂದಿದ್ದಾರೆ. ಆದ್ರೆ, ವಿನೋದ್, ರಾಕೇಶ್ ಮಾಯವಾಗಿದ್ದಾರೆ. ಬಳಿಕ ಸಂಬಂಧಿಕರು ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ, ಶಸ್ತ್ರ ಚಿಕಿತ್ಸೆಗೆ ದುಡ್ಡು ಕಟ್ಟಿ ಅಂತ ಹೇಳಿದ್ದಾರೆ.. ಆದ್ರೆ, ದುಡ್ಡಿಲ್ಲದೆ ಮತ್ತೆ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಈ ಓಡಾಟದಲ್ಲಿ ಪುನೀತ್ ಮೊನ್ನೆ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಸದ್ಯ, ಸಾವಿನ ಸುದ್ದಿ ತಿಳಿದು ಗಾಂಧಿನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಮರ್ಡರ್ ಕೇಸ್ ದಾಖಲಿಸಿದ್ದು, ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದ್ರೆ, ಕೊಲ್ಲೋದಕ್ಕಾಗಿಯೇ ಜೈಲಿನಿಂದ ಕರೆತಂದಿದ್ರು ಎಂಬ ಸಂಶಯವೂ ಶುರುವಾಗಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಸ್ತಿದ್ದಾರೆ. ಇತ್ತ, ಇದ್ದ ಮಗನನ್ನ ಕಳ್ಕೊಂಡು, ಎರಡು ಹೆಣ್ಣು ಮಕ್ಕಳನ್ನ ಇಟ್ಟುಕೊಂಡು ಅಮಾಯಕ ತಾಯಿ ಕಣ್ಣೀರು ಹಾಕುತ್ತಿದ್ದಾಳೆ.

ಇದನ್ನೂ ಓದಿ: ಬಾಲಕಿಗೆ ಲವ್ ಲೆಟರ್ ಕೊಟ್ಟ ಆರನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ