ಅಕ್ರಮ ಸಂಬಂಧ ಆರೋಪ ಸ್ನೇಹಿತರಿಂದಲೇ ವ್ಯಕ್ತಿ ಬರ್ಬರ ಹತ್ಯೆ; ಕೊಣನೂರು ಪಟ್ಟಣ ಲಾಡ್ಜ್ನಲ್ಲಿ ಸಿಕ್ತು ಮೃತ ದೇಹ

ಲಾಡ್ಜ್ನಲ್ಲಿ ರೂಂ ಮಾಡಿ ಹರೀಶ್ನನ್ನು ಕರೆಸಿ ಬಾತ್ ರೂಂನಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮದ ನಿವಾಸಿ ಹರೀಶ್ನನ್ನು ಲಕ್ಷ್ಮಣ, ದಿಲೀಪ್, ಸುಶ್ಮಿತಾ ಎಂಬುವವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jan 19, 2022 | 9:39 AM

ಹಾಸನ: ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದ ಲಾಡ್ಜ್ನಲ್ಲಿ ನಡೆದಿದೆ. ಹರೀಶ್ ಕೊಲೆಯಾದ ವ್ಯಕ್ತಿ.

ಲಾಡ್ಜ್ನಲ್ಲಿ ರೂಂ ಮಾಡಿ ಹರೀಶ್ನನ್ನು ಕರೆಸಿ ಬಾತ್ ರೂಂನಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮದ ನಿವಾಸಿ ಹರೀಶ್ನನ್ನು ಲಕ್ಷ್ಮಣ, ದಿಲೀಪ್, ಸುಶ್ಮಿತಾ ಎಂಬುವವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಮೊಬೈಲ್ ಕಂಪನಿ ಉದ್ಯೋಗಿ ಎಂದು ವಿಳಾಸ ಹೇಳಿ ಸುಸ್ಮಿತಾ ರೂಂ ಪಡೆದಿದ್ದಳು. ಬಳಿಕ ಅದೇ ಲಾಡ್ಜ್ನಲ್ಲಿ ಕೊಲೆಯಾದ ಹರೀಶ್ ಹೆಸರು ಸೇರಿಸಿ ಲಕ್ಷ್ಮಣ ಮತ್ತೊಂದು ರೂಂ ಬಾಡಿಗೆ ಪಡೆದಿದ್ದ. ಮಾತುಕತೆಗೆಂದು ಕರೆದು ಸುಸ್ಮಿತಾ ಬುಕ್ ಮಾಡಿದ್ದ ರೂಂನಲ್ಲಿ ಕೊಚ್ಚಿ ಹರೀಶ್ ಕೊಲೆ ಮಾಡಲಾಗಿದೆ. ಕೊಲೆಯಾದ ಬಳಿಕ ತನ್ನ ಗಂಡ ದಿಲೀಪ್ ಜೊತೆ ಸುಸ್ಮಿತಾ ಎಸ್ಕೇಪ್ ಆಗಿದ್ದಾಳೆ. ಕೊಠಡಿಯಲ್ಲಿ ಜೋರಾದ ಶಬ್ದ ಕೇಳಿ ಬಂದ ಹಿನ್ನೆಲೆ ಮಾಲೀಕ ಹೊರಗಿನಿಂದ ಲಾಡ್ಜ್ ರೂಂ ಬಾಗಿಲು ಮುಚ್ಚಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ರೂಂ‌ಂನಲ್ಲೇ ಬಂದಿಯಾಗಿದ್ದ ಕೊಲೆ ಆರೋಪಿ ಲಕ್ಷ್ಮಣ ಸಿಕ್ಕಿ ಬಿದ್ದಿದ್ದಾನೆ. ಅಕ್ರಮ‌ ಸಂಬಂಧ ಆರೋಪದಲ್ಲಿ ಸ್ನೇಹಿತನನ್ನೇ ಕೊಚ್ಚಿ ಕೊಂದ್ರಾ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತುಮಕೂರು: ಮಾಧ್ಯಮ ವೃತ್ತಿಪರ ತರಬೇತಿಗೆ ಅರ್ಹರಿಂದ ಅರ್ಜಿ ಆಹ್ವಾನ, ರಿಂಗ್ ರಸ್ತೆ ಅಭಿವೃದ್ಧಿಗೆ ಜ. 25 ವರೆಗೆ ವಿದ್ಯುತ್ ವ್ಯತ್ಯಯ

Published On - 9:34 am, Wed, 19 January 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ