Siddaramaiah: ವಿಶ್ರಾಂತಿಗಾಗಿ ಹೆಚ್.ಡಿ. ಕೋಟೆಯ ರೆಸಾರ್ಟ್‌ಗೆ ಭೇಟಿ -ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ನಡೆ
ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಆಂತರ್ಯದಲ್ಲಿ ಸಾಕಷ್ಟು ತುಮುಲಗಳು, ಗೊಂದಲಗಳು ಎಡತಾಕುತ್ತಿವೆ. ಇದೇ ವೇಳೆ ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಭಾರಿ ಅಪ್ ಸೆಟ್ ಆಗಿದ್ದಾರೆ ಎಂಬಮಾತುಗಳೂ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನಡೆ ಕುತೂಹಲ ಕೆರಳಿಸಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು (Siddaramaiah) ವಿಶ್ರಾಂತಿ ಪಡೆಯುವ ಸಲುವಾಗಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಖಾಸಗಿ ರೆಸಾರ್ಟ್‌ಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ಸಿದ್ದರಾಮಯ್ಯ ಅಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ನಿನ್ನೆ ಮೈಸೂರು ನಿವಾಸಕ್ಕೆ ಆಗಮಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೆಚ್.ಡಿ.ಕೋಟೆಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ತಮ್ಮ ವಿರುದ್ಧ ಸಿಡಿದೆದ್ದಿರುವ ಆಪ್ತ ಸಿಎಂ ಇಬ್ರಾಹಿಂ ಮೇಲ್ಮನೆ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡೋದಾಗಿ ಘೋಷಿಸಿದ್ದಾರೆ. ಜೊತೆಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಆಂತರ್ಯದಲ್ಲಿ ಸಾಕಷ್ಟು ತುಮುಲಗಳು, ಗೊಂದಲಗಳು ಎಡತಾಕುತ್ತಿವೆ. ಇದೇ ವೇಳೆ ಹೈಕಮಾಂಡ್ ವಿರುದ್ಧ (congress high command) ಸಿದ್ದರಾಮಯ್ಯ ಭಾರಿ ಅಪ್ ಸೆಟ್ ಆಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ (CLP leader) ನಡೆ ಕುತೂಹಲ ಕೆರಳಿಸಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಸಿಎಂ ಇಬ್ರಾಹಿಂ ಕೋಪದಲ್ಲಿ ಮಾತನಾಡಿದ್ದಾರೆ. ಅವರೆಲ್ಲೂ ಹೋಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನುಡಿದಿದ್ದಾರೆ. ನಾನು ಇನ್ನೂ ಸಿ.ಎಂ.ಇಬ್ರಾಹಿಂ ಜೊತೆ ಮಾತುಕತೆ ನಡೆಸಿಲ್ಲ. ಇಬ್ರಾಹಿಂ ಎಲ್ಲೂ ಹೋಗುವುದಿಲ್ಲ ಕಾಂಗ್ರೆಸ್‌ನಲ್ಲಿರುತ್ತಾರೆ. ಅವರು ಏನೋ ಕೋಪದಲ್ಲಿ ಮಾತನಾಡಿದ್ದಾರೆ. ಹಲವರು ಬಾರಿ ಪಕ್ಷ ಬಿಡುವ ಮಾತುಗಳನ್ನು ಹೇಳಿದ್ದಾರೆ. ರಾಜ್ಯಸಭಾ ಸದಸ್ಯನಾಗಿ ಮಾಡದ ಹಿನ್ನೆಲೆ ಜೆಡಿಎಸ್ ಬಿಟ್ಟಿದ್ದರು. ಆದರೆ ಈಗ ಸಿ.ಎಂ.ಇಬ್ರಾಹಿಂಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಇಬ್ರಾಹಿಂ ಕೋಪದಲ್ಲಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಸ್ನೇಹದಲ್ಲಿ ಭಿನ್ನಾಭಿಪ್ರಾಯ ಬಂದಾಗ ಕುಳಿತು ಚರ್ಚಿಸುತ್ತೇವೆ ಎಂದು ಸಿದ್ದರಾಮಯ್ಯ ನುಡಿದಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯನವರು ನನ್ನನ್ನು ಯಾರೂ ತಬ್ಬಲಿ ಮಾಡುವುದಕ್ಕೆ ಆಗುವುದಿಲ್ಲ. ರಾಜ್ಯದ ಜನರು ನನ್ನ ಜೊತೆ ಇರುವವರೆಗೆ ತಬ್ಬಲಿ ಆಗಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಭಾರಿ ಅಪ್ ಸೆಟ್: ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ನಲ್ಲಿ ವಿಪಕ್ಷ ನಾಯಕನ ಸ್ಥಾನ ವಿಚಾರದಲ್ಲಿ ಲೆಕ್ಕಾಚಾರ ತಪ್ಪಿದ ಹಿನ್ನೆಲೆಯಲ್ಲಿ ಬಿ ಕೆ ಹರಿಪ್ರಸಾದ್ ನೇಮಕಾತಿಯಿಂದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರಿ ಭಾರಿ ಅಪ್ ಸೆಟ್ ಅಗಿದ್ದಾರೆ. ತಮ್ಮ ಮಾತಿಗೆ ಹೈಕಮಾಂಡ್ ಮನ್ನಣೆ ನೀಡದೇ ಇರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿಯೇ ತಮ್ಮ ಬೇಸರ ಅಸಮಾಧಾನ ತೋರ್ಪಡಿಸಿದ್ದಾರೆ. ತಮ್ಮ ಆಪ್ತ ವರ್ಗದಲ್ಲೇ ಅಸಮಾಧಾನ ಹೊರಹಾಕಿರುವ ಸಿದ್ದರಾಮಯ್ಯ, ತಮ್ಮದೇ ವರ್ಗದ ಬಿ ಕೆ ಹರಿಪ್ರಸಾದರನ್ನ ನೇಮಿಸುವ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿ ಪರ್ಯಾಯ ನಾಯಕತ್ವ ಸೃಷ್ಟಿ ನಡೆದಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಗುಮಾನಿ, ಗೊಂದಲಕ್ಕೆ ಒಳಗಾಗಿದ್ದಾರೆ. ಅಲ್ಪ ಸಂಖ್ಯಾತರಿಗೆ ಪರಿಷತ್ ವಿಪಕ್ಷ ನಾಯಕನ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಆದರೆ ಹೈಕಮಾಂಡ್ ಸಿದ್ದರಾಮಯ್ಯ ವರ್ಗದವರೇ ಆದ ಹರಿಪ್ರಸಾದರನ್ನ ನೇಮಕ ಮಾಡಿದೆ.
ಜಮೀರ್ ಅಹ್ಮದ್ಗಾದರೂ ಆಯಕಟ್ಟಿನ ಸ್ಥಾನ ನೀಡುವಂತೆ ದುಂಬಾಲು… ಈ ಮಧ್ಯೆ, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ವಿಧಾನಸಭೆಯಲ್ಲಿ ‘ಕೈ’ ಉಪನಾಯಕ ಸ್ಥಾನವನ್ನು ಮುಸ್ಲಿಂ ಸಮುದಾಯದ ಶಾಸಕರಿಗೆ ನೀಡುವ ಚರ್ಚೆ ಶುರು ಮಾಡಿದೆ. ಇದರಿಂದ, ಎಚ್ಚೆತ್ತ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ಗೆ ಆಫರ್ ನೀಡಿದರು ಎನ್ನಲಾಗಿದೆ. ಆದ್ರೆ ಜಮೀರ್ ಅಹ್ಮದ್ ಖಾನ್ ಇದನ್ನು ನಿರಾಕರಿಸಿದ್ದಾರೆ. ಇದರಿಂದ ಮಂಗಳೂರು ಶಾಸಕ ಯು.ಟಿ. ಖಾದರ್‌ಗೆ ಉಪನಾಯಕನ ಪಟ್ಟ ಕಟ್ಟುವ ಸಾಧ್ಯತೆಯಿದೆ. ಹೈಕಮಾಂಡ್‌ಗೆ ಖಾದರ್ ಹೆಸರು ರವಾನಿಸುವ ಸಾಧ್ಯತೆಯಿದೆ. ನೇರವಾಗಿ ಹೈಕಮಾಂಡ್‌ನಿಂದಲೇ ಹೆಸರು ಘೋಷಣೆ ಮಾಡಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯುಟಿ ಖಾದರ್ ನೇಮಕ ಬೆಂಗಳೂರು: ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯು.ಟಿ.ಖಾದರ್ ಅವರನ್ನು ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಧಿಕೃತ ಘೋಷಣೆ ಮಾಡಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ಮನ ತಣಿಸಲು ಯು.ಟಿ ಖಾದರ್‌ಗೆ ಜವಾಬ್ದಾರಿ ನೀಡಲಾಗಿದ್ದು, ಸಿದ್ದರಾಮಯ್ಯ ತಂತ್ರಗಾರಿಕೆ ಭಾಗವಾಗಿ ಅವರಿಗೆ ಪಕ್ಷದ ಉಪ ನಾಯಕನ ಸ್ಥಾನ ನೀಡಲಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಯು.ಟಿ ಖಾದರ್ ಮಂಗಳೂರು ಕ್ಷೇತ್ರದ ಶಾಸಕರಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಪ್ರತಿನಿಧಿ ಖಾದರ್. ಈ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ (2018-19) ಖಾದರ್ ಅವರು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
Also Read: Bulandshahr: ವೈದ್ಯರೊಬ್ಬರ ಎಂಟು ವರ್ಷದ ಮಗನ ಅಪಹರಣ, ಹತ್ಯೆ -ಕಾರಣ?