ಬಾಲಕಿಗೆ ಲವ್ ಲೆಟರ್ ಕೊಟ್ಟ ಆರನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ
ಕಲ್ಪನಾ ಹೆಗಡೆ ಎಂಬ ಶಿಕ್ಷಕಿ ವಿದ್ಯಾರ್ಥಿಗೆ ಥಳಿಸಿದ್ದು ಬಾಸುಂಡೆ ಬಂದಿದೆ. ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಕಿಯ ನಡೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಶಿಕ್ಷಕಿ ಕಲ್ಪನಾ ಕ್ಷಮೆಯಾಚಿಸಿದ್ದಾರೆ.
ಉತ್ತರ ಕನ್ನಡ: ಸಹಪಾಠಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಶಿಕ್ಷಕಿ ಥಳಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ. ಕಲ್ಪನಾ ಹೆಗಡೆ ಎಂಬ ಶಿಕ್ಷಕಿ ವಿದ್ಯಾರ್ಥಿಗೆ ಥಳಿಸಿದ್ದು ಬಾಸುಂಡೆ ಬಂದಿದೆ. ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಕಿಯ ನಡೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಶಿಕ್ಷಕಿ ಕಲ್ಪನಾ ಕ್ಷಮೆಯಾಚಿಸಿದ್ದಾರೆ. ಪ್ರಕರಣ ಇತ್ಯರ್ಥವಾಗಿದೆ.
ಸರಿಯಾಗಿ ಓದಲಿಲ್ಲ ಎಂದು ವಿದ್ಯಾರ್ಥಿನಿ ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ ಶಿಕ್ಷಕಿಗೆ ಶಿಕ್ಷೆ ತುಮಕೂರು: ವಿದ್ಯಾರ್ಥಿನಿಗೆ ಹೊಡೆದಿದ್ದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತುಮಕೂರು ಹೆಚ್ಚುವರಿ ಸಿವಿಲ್, ಜೆಎಂಎಫ್‌ಸಿಯಿಂದ ಆದೇಶ ಹೊರಡಿಸಲಾಗಿದೆ. 2011ರ ಫೆ.17ರಂದು ಶಿಕ್ಷಕಿ ವಿದ್ಯಾರ್ಥಿನಿಗೆ ಹೊಡೆದಿದ್ದರು. ಸದ್ಯ ಈಗ ಇದರ ತೀರ್ಪು ಹೊರ ಬಿದ್ದಿದೆ.
ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲ ಎಂದು ಆಕೆ ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ ಶಿಕ್ಷಕಿಗೆ ಶಿಕ್ಷೆ ನೀಡಿ ತುಮಕೂರಿನ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. 2011 ರ ಫೆಬ್ರವರಿ 17 ರಂದು ತಿಲಕ್ ಪಾರ್ಕ್ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ತುಮಕೂರು ನಗರದ ಭಾರತ್ ಮಾತಾ ಶಾಲೆಯ ಶಿಕ್ಷಕಿ ಫರಹತ್ ಫಾತಿಮಾ ವಿದ್ಯಾರ್ಥಿನಿಗೆ ಹೊಡೆದಿದ್ದರು. ಪಿಎಸ್ಐ ದಿನೇಶ್ ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶಾರದಾ ಕೊಪ್ಪದ ವಿಚಾರಣೆ ನಡೆಸಿ ಶಿಕ್ಷಕಿಗೆ ಕಲಂ 325 ರ ಅನ್ವಯ ಶಿಕ್ಷೆ ಪ್ರಕಟ ಮಾಡಿದ್ದಾರೆ. ಸರ್ಕಾರದ ಪರ ಜಿ ಬಸವರಾಜ್ ವಾದ ಮಂಡಿಸಿದ್ದರು.
ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ ಮೈಸೂರು: ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಬೈಕ್‌ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ತಂದೆ, ಮಗನಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಮಹಿಳೆ ಪಾರಾಗಿದ್ದಾರೆ. ಹಲ್ಲೆಯಲ್ಲಿ ಶಿವಪ್ಪ(45), ಮಗ ಶರತ್(20)ಗೆ ಗಾಯಗಳಾಗಿವೆ. ಲೋಹಿತ್ ಕುಮಾರ್, ಪರಶಿವಮೂರ್ತಿ ಎಂಬುವವರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ವಿವಾಹಿತ ಮಹಿಳೆ ಜೊತೆ ಹಲ್ಲೆಗೊಳಗಾದ ಶರತ್ಗೆ ಅಕ್ರಮ ಸಂಬಂಧವಿದೆ ಎಂದು ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಶರತ್ಗೆ ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧವಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಲವು ಬಾರಿ ರಾಜಿ ಪಂಚಾಯಿತಿ ಆಗಿತ್ತು. ಆದ್ರೆ ತಂದೆ, ಮಗ, ಮಹಿಳೆ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದಾಗ ಲೋಹಿತ್ ಕುಮಾರ್, ಪರಶಿವಮೂರ್ತಿ ಎಂಬುವವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಚ್ಚಿನಿಂದ ಆರೋಪಿಗಳು ಹಲ್ಲೆ ಮಾಡಿರುವುದರಿಂದ ತಂದೆ, ಮಗನಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನಿಯಂತ್ರಣ ಕಳೆದುಕೊಂಡ ಚಾಲಕ; ಕಾರು, ಬೈಕು, ನಿಂತಿದ್ದ ಟ್ರಕ್, ಜನರಿಗೆ ಡಿಕ್ಕಿ ಹೊಡೆದ ಬಸ್, 6 ಮಂದಿ ಸಾವು
Published On - 8:35 am, Mon, 31 January 22