Mysuru Mayor Election: ಮೈಸೂರು ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್, ಆಗಸ್ಟ್ 25ರಂದು ಚುನಾವಣೆ

| Updated By: ಆಯೇಷಾ ಬಾನು

Updated on: Aug 17, 2021 | 1:55 PM

ಆಗಸ್ಟ್ 25ರಂದು ಮೈಸೂರು ಮೇಯರ್ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಾಹಿತಿ ಸಿಕ್ಕಿದೆ.

Mysuru Mayor Election: ಮೈಸೂರು ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್, ಆಗಸ್ಟ್ 25ರಂದು ಚುನಾವಣೆ
ಮೈಸೂರು ಮಹಾನಗರ ಪಾಲಿಕೆ
Follow us on

ಮೈಸೂರು: ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 25ರಂದು ಮೈಸೂರು ಮೇಯರ್ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಾಹಿತಿ ಸಿಕ್ಕಿದೆ.

ಸದ್ಯ ಅಖಾಡಕ್ಕೆ ಇಳಿಯಲು ಕಾರ್ಪೋರೇಟರ್​ಗಳ  ಸಜ್ಜಾಗುತ್ತಿದ್ದು ಮೈಸೂರಿನ ನೂತನ ಮೇಯರ್ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಮತ್ತೊಂದು ಕಡೆ ಬೆಳಗಾವಿ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ನಿನ್ನೆಯಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. 25 ವರ್ಷಗಳ ಬಳಿಕ ಬಿಜೆಪಿ ತನ್ನ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ನಿರ್ಧರಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ಚುನಾವಣೆ ತಯಾರಿ ಕುರಿತು ವಿಶೇಷ ಸಭೆ ನಡೀತು. 58ಸದಸ್ಯರ ಪೈಕಿ ಕನಿಷ್ಠ 50 ಬಿಜೆಪಿ ಸದಸ್ಯರು ಗೆಲ್ಲುವ ಗುರಿ ನೀಡಿದ್ದಾರೆ. ಪ್ರತಿಯೊಂದು ವಾರ್ಡ್​ಗೆ ಒಬ್ಬ ಶಾಸಕರನ್ನ ಉಸ್ತುವಾರಿಯಾಗಿ ನೇಮಿಸಲಿದ್ದು, ಚುನಾವಣೆ ಮುಗಿಯುವವರೆಗೂ ಶಾಸಕರು ಬೇರೆಡೆ ಹೋಗುವಂತಿಲ್ಲ ಅಂತಾ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 154 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಕೇಸ್​ಗಳು ದಾಖಲು; ಚೇತರಿಕೆ ಪ್ರಮಾಣದಲ್ಲೂ ಏರಿಕೆ

Published On - 12:55 pm, Tue, 17 August 21