ದೇಶದಲ್ಲಿ 154 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಕೇಸ್​ಗಳು ದಾಖಲು; ಚೇತರಿಕೆ ಪ್ರಮಾಣದಲ್ಲೂ ಏರಿಕೆ

Corona Updates: ಒಂದೇ ದಿನದಲ್ಲಿ 437 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,32,079ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 154 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಕೇಸ್​ಗಳು ದಾಖಲು; ಚೇತರಿಕೆ ಪ್ರಮಾಣದಲ್ಲೂ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 17, 2021 | 12:46 PM

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 25,166 ಹೊಸ ಕೊರೊನಾ ಪ್ರಕರಣಗಳು (Coronavirus Cases) ದಾಖಲಾಗಿದ್ದು, 437 ಮಂದಿ ಮೃತಪಟ್ಟಿದ್ದಾರೆ. ಮಾರ್ಚ್​ 16ರಿಂದ ಇಲ್ಲಿಯವರೆಗೆ, ಅಂದರೆ 154 ದಿನಗಳಲ್ಲಿ, ಒಂದು ದಿನದಲ್ಲಿ ದಾಖಲಾದ ಅತಿ ಕಡಿಮೆ ಕೊರೊನಾ ಪ್ರಕರಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ತಿಳಿಸಿದೆ. ದೇಶದಲ್ಲೀಗ ಕೊರೊನಾ ಸೋಂಕಿತರ ಒಟ್ಟು 3,22,50,679ಕ್ಕೆ ಏರಿಕೆಯಾಗಿದೆ. ದೇಶದಲ್ಲೀಗ ಕೊರೊನಾ ಚೇತರಿಕೆ ಪ್ರಮಾಣ (Corona Recovery Rate) ಶೇ.97.51ರಷ್ಟಿದೆ. ಇದು ಮಾರ್ಚ್​​ನಿಂದ ಲೆಕ್ಕ ಹಾಕಿದರೆ ಅತಿ ಹೆಚ್ಚು ಪ್ರಮಾಣದ ರಿಕವರಿ ರೇಟ್​. ಹಾಗೇ, 24ಗಂಟೆಯಲ್ಲಿ 88.13 ಲಕ್ಷ ಡೋಸ್​ಗಳಷ್ಟು ಲಸಿಕೆ ನೀಡಲಾಗಿದ್ದು, ಇದೂ ಸಹ ಒಂದು ದಾಖಲೆಯೇ ಆಗಿದೆ.

ಒಂದೇ ದಿನದಲ್ಲಿ 437 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,32,079ಕ್ಕೆ ಏರಿಕೆಯಾಗಿದೆ. 146 ದಿನಗಳಲ್ಲೇ ಅತ್ಯಂತ ಕಡಿಮೆ ಅಂದರೆ 3,69,846 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಸೋಮವಾರ ಒಂದೇ ದಿನ 15,63,985 ಮಂದಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 49,66,29,524 ಜನರಿಗೆ ಕೊರೊನಾ ತಪಾಸಣೆ ಮಾಡಿದಂತಾಗಿದೆ. ದೇಶದಲ್ಲಿ ದಿನದ ಪಾಸಿಟಿವಿ ರೇಟ್​ ಸದ್ಯ 1.61ರಷ್ಟಿದ್ದು, ಈ ಮೂಲಕ 22 ದಿನಗಳಲ್ಲಿ ಮೂರು ಪರ್ಸೆಂಟ್​ ಕಡಿಮೆಯಾದಂತಾಗಿದೆ. ವಾರದ ಪಾಸಿಟಿವಿಟಿ ದರ 1.98ರಷ್ಟು ದಾಖಲಾಗಿದೆ. ಕಳೆದ 53 ದಿನಗಳಲ್ಲಿ ಮೂರು ಪರ್ಸೆಂಟ್​ ಕಡಿಮೆ. ಇನ್ನು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3,14,48,754ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಸಾವಿನ ಪ್ರಮಾಣ ಶೇ. 1.34ರಷ್ಟಿದೆ ಎಂದೂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇರಳದಲ್ಲಿ ಅತಿ ಹೆಚ್ಚು ದೇಶದ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬಹುಪಾಲು ಕೇರಳದ್ದೇ ಆಗಿದೆ. ಕಳೆದ 24ಗಂಟೆಯಲ್ಲಿ ಕೇರಳದಲ್ಲಿ 12,295 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅದಾದ ಬಳಿಕ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದು, ಕಳೆದ 24 ಗಂಟೆಯಲ್ಲಿ 4,145 ಕೇಸ್​ಗಳು ದಾಖಲಾಗಿವೆ. ನಂತರ ತಮಿಳುನಾಡಿನಲ್ಲಿ 1,851, ಕರ್ನಾಟಕದಲ್ಲಿ 1,065 ಮತ್ತು ಆಂಧ್ರಪ್ರದೇಶದಲ್ಲಿ 909 ಕೊರೊನಾ ಕೇಸ್​ಗಳು ಕಳೆದ 24 ಗಂಟೆಯಲ್ಲಿ ದಾಖಲಾಗಿವೆ. ಕೇರಳದಲ್ಲಿ ಕೊರೊನಾ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರವೇ ಮುಂದಾಗಿದೆ. ನಿನ್ನೆ ತಿರುವನಂತಪುರಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್​ ಜತೆ ಕೊವಿಡ್​ 19 ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದ್ದರು. ಹಾಗೇ, ಕೇರಳದ ಆರೋಗ್ಯ ಕ್ಷೇತ್ರ ಬಲವರ್ಧನೆಗೆ 267.35 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಅವರಿಂದ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳ ಆರೋಗ್ಯ ಸಚಿವರೊಟ್ಟಿಗೆ ಸಭೆ ನಡೆಸಲಿದ್ದು, ಅಲ್ಲಿನ ಕೊರೊನಾ ಪರಿಸ್ಥಿತಿ ಪರಿಶೀಲನೆ ಮಾಡುವರು.

ಇದನ್ನೂ ಓದಿ: Nirmala Sitharaman: ಇನ್ನು ಕೆಲ ದಿನಗಳಲ್ಲಿ ಹೊಸ ಐಟಿ ಪೋರ್ಟಲ್ ಸಮಸ್ಯೆ ಬಗೆಹರಿಯುತ್ತದೆ ಎಂದ ನಿರ್ಮಲಾ

Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್