AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nirmala Sitharaman: ಇನ್ನು ಕೆಲ ದಿನಗಳಲ್ಲಿ ಹೊಸ ಐಟಿ ಪೋರ್ಟಲ್ ಸಮಸ್ಯೆ ಬಗೆಹರಿಯುತ್ತದೆ ಎಂದ ನಿರ್ಮಲಾ

ಆದಾಯ ತೆರಿಗೆ ಇಲಾಖೆಯ ಹೊಸ ಐ.ಟಿ. ಪೋರ್ಟಲ್​ನ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಬಗೆಹರಿಯಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Nirmala Sitharaman: ಇನ್ನು ಕೆಲ ದಿನಗಳಲ್ಲಿ ಹೊಸ ಐಟಿ ಪೋರ್ಟಲ್ ಸಮಸ್ಯೆ ಬಗೆಹರಿಯುತ್ತದೆ ಎಂದ ನಿರ್ಮಲಾ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Aug 17, 2021 | 12:24 PM

Share

ಐಟಿ ದಿಗ್ಗಜ ಕಂಪೆನಿ ಇನ್ಫೋಸಿಸ್​ನಿಂದ ಅಭಿವೃದ್ಧಿ ಹಂತದಲ್ಲಿರುವ ಹೊಸ ಆದಾಯ ತೆರಿಗೆ ಪೋರ್ಟಲ್ ಅನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರೀಸ್ಟೋರ್ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ಅವರು ಮಾತನಾಡಿ, “ಹೊಸ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ ಇನ್ಫೋಸಿಸ್​ಗೆ ನಾನು ನೆನಪಿಸುತ್ತಿದ್ದೇನೆ, ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಮುಂದಿನ ಕೆಲ ದಿನಗಳಲ್ಲಿ ಬಹುಪಾಲು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯೊಂದಿಗೆ ನನಗೆ ಸಂದೇಶ ಕಳುಹಿಸುತ್ತಿದ್ದಾರೆ,” ಎಂದು ನಿರ್ಮಲಾ ಹೇಳಿದ್ದಾರೆ.

ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪ್ಲಾಟ್‌ಫಾರ್ಮ್ ‘www.incometax.gov.in’ ಜೂನ್ 7ರಂದು ಪ್ರಾರಂಭವಾದ ದಿನದಿಂದ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಜೂನ್ 8, 2021ರಂದು, ನಂದನ್ ನಿಲೇಕಣಿ ಮಾತನಾಡಿ, “ಹೊಸ ಇ-ಫೈಲಿಂಗ್ ಪೋರ್ಟಲ್ ಫೈಲಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಮೊದಲ ದಿನ ನಾವು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ. ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಈ ಆರಂಭಿಕ ದೋಷಗಳು ಮತ್ತು ವ್ಯವಸ್ಥೆಯು ವಾರದಲ್ಲಿ ಸರಿಯಾಗುವ ನಿರೀಕ್ಷೆ ಇದೆ,” ಎಂದಿದ್ದರು.

ಆದರೆ, ನಂದನ್ ನಿಲೇಕಣಿ ಮತ್ತು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರೊಂದಿಗೆ ಖಾತ್ರಿಪಡಿಸಿಕೊಂಡು, ನಿರ್ಮಲಾ ಸೀತಾರಾಮನ್ ಅವರು ಈಗ ತಿಳಿಸಿರುವಂತೆ, ಹೊಸ ಐಟಿ ಪೋರ್ಟಲ್ ಸಮಸ್ಯೆಗಳನ್ನು ಕೆಲ ದಿನಗಳಲ್ಲಿ ಸರಿಪಡಿಸಲು ಎಲ್ಲ ರೀತಿ ಸಿದ್ಧತೆಯೂ ಆಗಿದೆ. ಜೂನ್ 8ರಂದು ನಿರ್ಮಲಾ ಸೀತಾರಾಮನ್ ಟ್ವೀಟ್​ನಲ್ಲಿ ತಿಳಿಸಿದಂತೆ, “ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಕಳೆದ ರಾತ್ರಿ 20:45ಕ್ಕೆ ಸೇವೆಗೆ ಬಿಡುಗಡೆ ಮಾಡಲಾಯಿತು. ನನ್ನ ಟಿಎಲ್ ಕುಂದುಕೊರತೆಗಳನ್ನು ಮತ್ತು ತೊಂದರೆಗಳನ್ನು ನೋಡಿದ್ದೇನೆ. ಇನ್ಫೋಸಿಸ್ ಮತ್ತು ನಂದನ್​ ನಿಲೇಕಣಿ ನಮ್ಮ ತೆರಿಗೆದಾರರನ್ನು ನಿರಾಸೆ ಮಾಡುವುದಿಲ್ಲ. ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತದೆ. ತೆರಿಗೆದಾರರಿಗೆ ನಿಯಮಾವಳಿಯಲ್ಲಿ ಸುಲಭವಾಗಬೇಕು ಎಂಬುದು ನಮ್ಮ ಆದ್ಯತೆ,” ಎಂದಿದ್ದರು.

ಅಂದಹಾಗೆ, ಜನವರಿ 2019 ಮತ್ತು ಜೂನ್ 2021ರ ಮಧ್ಯೆ ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳನ್ನು ಸರಿಪಡಿಸಲು ಕೇಂದ್ರವು ಇನ್ಫೋಸಿಸ್‌ಗೆ ಒಟ್ಟು 164.5 ಕೋಟಿ ರೂಪಾಯಿಗಳ ಮೊತ್ತವನ್ನು ನೀಡಿದೆ.

ಇನ್ನು ಮರುಪಾವತಿ ಬಯಸುವ ತೆರಿಗೆದಾರರಿಗೆ ಒಂದು ಪ್ರಮುಖ ಮಾಹಿತಿಯಾಗಿ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ತಿಳಿಸಿರುವಂತೆ, “ಸಿಬಿಡಿಟಿಯಿಂದ ರೂ. 47,318 ಕೋಟಿಗಿಂತ ಹೆಚ್ಚು ಮರುಪಾವತಿಯನ್ನು 22.61 ಲಕ್ಷ ತೆರಿಗೆದಾರರಿಗೆ 2021ರ ಏಪ್ರಿಲ್ 1ರಿಂದ 9 ಆಗಸ್ಟ್ 2021ರ ಮಧ್ಯೆ ನೀಡಿದೆ. ಆದಾಯ ತೆರಿಗೆ ಮರುಪಾವತಿ ರೂ.14,241 ಕೋಟಿಯನ್ನು 21,38,375 ಪ್ರಕರಣಗಳಲ್ಲಿ ನೀಡಲಾಗಿದೆ ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ ರೂ. 33,078 ಕೋಟಿಗಳನ್ನು 1,22,511 ಪ್ರಕರಣಗಳಲ್ಲಿ ನೀಡಲಾಗಿದೆ”.

ಇದನ್ನೂ ಓದಿ: Petrol-Diesel price: ಮನಮೋಹನ್​ ಸಿಂಗ್​ ಸರ್ಕಾರ ತಪ್ಪಿಗೆ ಪೆಟ್ರೋಲ್​ಗೆ ನಾವು ಬೆಲೆ ತೆರುತ್ತಿದ್ದೇವೆ ಎಂದ ನಿರ್ಮಲಾ

(Income Tax New Portal Problem Will Be Solved In Couple Of Days Said FM Nirmala Sitharaman)

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?