ಮೈಸೂರು: ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹಬಂಧನಕ್ಕೆ ಅಟ್ಟಿದ ಪತಿ

ಮೈಸೂರು ಜಿಲ್ಲೆ ಹೆಚ್.ಡಿ‌.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಸಣ್ಣಾಲಯ್ಯ ಎಂಬ ವ್ಯಕ್ತಿ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು 12 ವರ್ಷ ಗೃಹಬಂಧನದಲ್ಲಿಟ್ಟಿದ್ದ. ಸದ್ಯ ಪೊಲೀಸರು ಮಹಿಳೆಯನ್ನು ಗೃಹಬಂಧನದಿಂದ ಮುಕ್ತಗೊಳಿಸಿದ್ದಾರೆ. ಹಾಗೂ ಪತಿಯನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರು: ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹಬಂಧನಕ್ಕೆ ಅಟ್ಟಿದ ಪತಿ
ಕಿಟಕಿಯಿಂದ ಮಹಿಳೆಯನ್ನು ಮಾತನಾಡಿಸಿದ ಪೊಲೀಸ್
Updated By: ಆಯೇಷಾ ಬಾನು

Updated on: Feb 01, 2024 | 9:30 AM

ಮೈಸೂರು, ಫೆ.01: ಶೀಲ ಶಂಕಿಸಿ ಪತ್ನಿಯನ್ನು (Wife) 12 ವರ್ಷ ಗೃಹಬಂಧನದಲ್ಲಿರಿಸಿದ್ದ ಪತಿಯನ್ನು (Husband) ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆ ಹೆಚ್.ಡಿ‌.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಸಣ್ಣಾಲಯ್ಯ ಎಂಬ ವ್ಯಕ್ತಿ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು 12 ವರ್ಷ ಗೃಹಬಂಧನದಲ್ಲಿಟ್ಟು ಅಮಾನವೀಯ ಕೃತ್ಯ ಎಸಗಿದ್ದ. ಸದ್ಯ ವಿಷಯ ತಿಳಿಯುತ್ತಿದ್ದಂತೆ 12 ವರ್ಷದಿಂದ ಗೃಹಬಂಧನದಲ್ಲಿದ್ದ ಸುಮಾ ಅವರನ್ನು ಬಿಡುಗಡೆಗೊಳಿಸಿ ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

12 ವರ್ಷದ ಹಿಂದೆ ಸುಮಾಳನ್ನು ಸಣ್ಣಾಲಯ್ಯ 3ನೇ ಮದುವೆಯಾಗಿದ್ದ. ಮದುವೆಯಾದ ದಿನದಿಂದಲೇ ಸಣ್ಣಾಲಯ್ಯನಿಗೆ ತನ್ನ ಪತ್ನಿ ಮೇಲೆ ಅನುಮಾನ ಶುರುವಾಗಿತ್ತು. ಅನುಮಾನದ ಭೂತಕ್ಕೆ ದಾಸನಾಗಿದ್ದ ಸಣ್ಣಾಲಯ್ಯ ಮದುವೆಯಾಗಿ ಒಂದು ವಾರವೂ ಪತ್ನಿ ಜೊತೆ ಸುಖವಾಗಿ ಸಂಸಾರ ಮಾಡಲಿಲ್ಲ. ತನ್ನ ಪತ್ನಿಯ ಶೀಲಶಂಕಿಸಿ ಆಕೆಯನ್ನು ಗೃಹಬಂಧನದಲ್ಲಿಟ್ಟಿದ್ದ. ಸದ್ಯ 12 ವರ್ಷಗಳ ಬಳಿಕ ಈಗ ಸುಮಾ ಬಂಧನ ಮುಕ್ತರಾಗಿದ್ದಾರೆ. ಘಟನೆ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತಿ ಸಣ್ಣಾಲಯ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಂಟಮೂರಿ ಮಹಿಳೆ‌‌ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಘಟನೆಗೆ ಕಾರಣವಾಗಿದ್ದ ಪ್ರೇಮಿಗಳ ಮದುವೆ ಮಾಡಿಸಿದ ಪೊಲೀಸ್

ಇಬ್ಬರು ಡ್ರಗ್ ಪೆಡ್ಲರ್​ಗಳ ಬಂಧನ

ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ಒಡಿಶಾ ಮೂಲದ ರಾಜಿಕ್ ಮಲ್ಲಿಕ್​​, ಆಂಧ್ರ ಮೂಲದ ಜಾಫರ್ ಬಂಧಿತರು. ಸಿಸಿಬಿ ಪೊಲೀಸರು ಬಂಧಿತರಿಂದ 40 ಲಕ್ಷ ಮೌಲ್ಯದ 85 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸಾತಗಳ್ಳಿ ಬಳಿ ಬೊಲೆರೋ ವಾಹನದಲ್ಲಿ ಗಾಂಜಾ ಸಾಗಿಸುವಾಗ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೈಸೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ

ತಾಯಿ ಚಿರತೆ, ಮರಿಗಳು ಕಾಡು ಬಿಟ್ಟು ನಾಡಿಗೆ ಎಂಟ್ರಿಕೊಟ್ಟಿದ್ವು. ಮೈಸೂರು ತಾಲ್ಲೂಕು ಮಾರಶೆಟ್ಟಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ಕಬ್ಬು ಕಟಾವು ವೇಳೆ ಕೆಲಸಗಾರರಿಗೆ ಮೂರು ಚಿರತೆ ಮರಿಗಳು ಸಿಕ್ಕಿದ್ವು. ಮರಿಗಳು ಪತ್ತೆಯಾದ ಸ್ಥಳದಲ್ಲೇ ಅರಣ್ಯ ಸಿಬ್ಬಂದಿ ಬೋನು ಇಡಲಾಗಿತ್ತು. ಆ ಬೋನಿನಲ್ಲಿ ತಾಯಿ ಚಿರತೆಯೂ ಸೆರೆಯಾಗಿತ್ತು. ನಂತ್ರ ತಾಯಿ ಮತ್ತು ಮರಿಗಳನ್ನು ಸೇರಿಸಿ ಕಾಡಿಗೆ ಬಿಡಲಾಯ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ