
ಮೈಸೂರು, ಡಿ.11: ಮೈಸೂರಿನ (Mysore tiger rescue) ಹುಣಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಹುಲಿ ಹಾವಳಿಯಿಂದ ಜನರು ಭಯಗೊಂಡಿದ್ದಾರೆ. ಇದೀಗ ಈ ಹುಲಿಗಳ ಕಾರ್ಯಚರಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಮೈಸೂರು ಜಿಲ್ಲೆಯಲ್ಲಿ ಮತ್ತೆ ನಾಲ್ಕು ಹುಲಿಗಳು ಪ್ರತ್ಯಕ್ಷವಾಗಿದ್ದು, ನಾಗಮಂಗಲ ಗ್ರಾಮದ ಹೊರವಲಯದಲ್ಲಿ ಹಾಗೂ ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದಲ್ಲಿ ಹುಲಿಗಳು ಕಂಡು ಬಂದಿದೆ. ಹುಲಿ ಕಂಡು ಭಯಭೀತರಾದ ಸುತ್ತಮುತ್ತಲಿನ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಸಹಾಯದಿಂದ ಹುಲಿಯನ್ನು ಹಿಡಿಯಲು ಕಾರ್ಯಚರಣೆ ನಡೆಸಲಾಗಿದೆ. ಈ ಕಾರ್ಯಚರಣೆಗೆ ಭೀಮ, ಏಕಲವ್ಯ, ವರಲಕ್ಷ್ಮೀ ಸಾಕಾನೆಗಳನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಎರಡು ಥರ್ಮಲ್ ಡ್ರೋಣ್ ಕೂಡ ಬಳಸಲಾಗಿದೆ. ಇನ್ನು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳು 25 ಹುಲಿಗಳ ಕಾರ್ಯಚರಣೆ ಮಾಡಿ, ರಕ್ಷಣೆ ಮಾಡಿದ್ದಾರೆ.
ಅಕ್ಟೋಬರ್ 15 ರಿಂದ ಮೈಸೂರಿನ ಹಲವು ಭಾಗದಲ್ಲಿ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಐದು ವಯಸ್ಕ ಹುಲಿಗಳು ಮತ್ತು 19 ಮರಿಗಳು ಸೇರಿದಂತೆ 24 ಹುಲಿಗಳನ್ನು ರಕ್ಷಿಸಲಾಗಿದೆ. ಇನ್ನು ಈ ಹುಲಿಯ ದಾಳಿಯಿಂದ ಮೂರು ಜನ ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದರು. ಇನ್ನು ಈ ಕಾರ್ಯಚರಣೆ ವೇಳೆ ಸಿಕ್ಕ ನಾಲ್ಕು ಮರಿಗಳನ್ನು ಬನ್ನೇರುಘಟ್ಟ ಕೇಂದ್ರದಲ್ಲಿ ಮತ್ತು ಎರಡು ವಯಸ್ಕ ಮರಿಗಳನ್ನು ಕೂರ್ಗಳ್ಳಿಯಲ್ಲಿ ಇರಿಸಲಾಗಿದೆ. ಉಳಿದ ಮರಿಗಳನ್ನು ಕಾಡಿಗೆ ಬಿಡಲಾಗಿದೆ.
ಹುಣಸೂರು ವನ್ಯಜೀವಿ ವಿಭಾಗದ ಹುಣಸೂರು ತಾಲ್ಲೂಕಿನಲ್ಲಿ ಒಂದು ವಯಸ್ಕ ಆನೆ ಮತ್ತು ಐದು ಮರಿ ಆನೆಗಳನ್ನು ರಕ್ಷಣೆ ಮಾಡಲಾಗಿದೆ. ನಾಗರಹೊಳೆ ಹುಲಿ ಅಭಯಾರಣ್ಯದ ಹುಣಸೂರು ತಾಲ್ಲೂಕಿನಲ್ಲಿ ಒಂದು ಮರಿ ಆನೆಯ ರಕ್ಷಣೆ ಮಾಡಲಾಗಿದೆ. ಬಿಆರ್‌ಟಿಯಲ್ಲಿ ಮೂರು ಮರಿ ಆನೆ, ಬಂಡೀಪುರ ವ್ಯಾಪ್ತಿಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ವಯಸ್ಕ ಆನೆ ಮತ್ತು ಮೂರು ಮರಿ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಮೂರು ವಯಸ್ಕ ಆನೆ ಮತ್ತು ಏಳು ಮರಿಗಳನ್ನು ರಕ್ಷಿಸಲಾಗಿದೆ.
ಇನ್ನು ಈ ಬಗ್ಗೆ ಮೈಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್, ಕೆ. ಪರಮೇಶ ಅವರು ಮಾಹಿತಿ ನೀಡಿದ್ದಾರೆ. ಅನಾಥ, ವಯಸ್ಸಾದ, ಗಾಯಗೊಂಡ ಹುಲಿ ಮರಿಗಳನ್ನು ರಕ್ಷಣೆ ಮಾಡಲು ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ಆ ಮಾರ್ಗಸೂಚಿಯಂತೆ ಹುಲಿಗಳು ಹಾಗೂ ಆನೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹುಲಿ ಮರಿಗಳಿಗೆ ಎರಡು ವರ್ಷ ತುಂಬುವವರೆಗೆ ಬೇಟೆಯಾಡಲು ಮತ್ತು ಸ್ವಂತವಾಗಿ ಬದುಕಲು ಹಲ್ಲು ಇರುವುದಿಲ್ಲ. ಹಾಗಾಗಿ ಅವುಗಳ ಮೇಲೆ ಬೇರೆ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಅವುಗಳನ್ನು ರಕ್ಷಿಸಬೇಕು ಎಂದು ಕೆ. ಪರಮೇಶ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಗೋವಾ ದುರಂತ ಬೆನ್ನಲ್ಲೇ ಬೆಂಗಳೂರಿನ ಪಬ್, ಹೋಟೆಲ್, ರೆಸ್ಟೋರೆಂಟ್ಗಳಿಗೆ ಸ್ಟ್ರಿಕ್ಟ್ ರೂಲ್ಸ್
ಇನ್ನು ಈ ಹುಲಿಗಳು ಅಥವಾ ಆನೆಗಳನ್ನು ಪಳಗಿಸಲು ಹೊಸ ಮೂಸೌಕರ್ಯಗಳು ಹಾಗೂ ತರಬೇತಿ ಪಡೆದ ಸಿಬ್ಬಂದಿಗಳು ಬೇಕು. ಅದಕ್ಕಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ಅವುಗಳನ್ನು ಸಾಕುವುದು ಒಂದು ದೊಡ್ಡ ಸವಾಲು ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದ್ದಾರೆ. ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯ ಎಂದಿದ್ದಾರೆ. ಇನ್ನು ಕೆರ್ತಿ, ಉರ್ತಿ, ಬಿಸ್ಲೆ, ಮೂರ್ಕನಗುಡ್ಡ ಮತ್ತು ಇತರ ಮೀಸಲು ಅರಣ್ಯಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಘೋಷಿಸುವುದು, ಚಿಕ್ಕನಹಳ್ಳಿ ರಾಜ್ಯ ಅರಣ್ಯ ಮತ್ತು ಯೆಲ್ವಾಲ್ ಮೀಸಲು ಅರಣ್ಯದಂತಹ ಸ್ಥಳಗಳಲ್ಲಿ ಹೊಸ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ