ಬಿಜೆಪಿ ಚಿಹ್ನೆ, ಬಿಜೆಪಿಯ ಭರವಸೆಗಳು ರಾರಾಜಿಸುತ್ತಿದ್ದ ಗೋಡೆ ಬರಹಕ್ಕೆ ಕೆಂಪು ಮಸಿ ಬಳಿದ ಮೈಸೂರು ಪಾಲಿಕೆ ಸಿಬ್ಬಂದಿ!

ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳು ನಾನಾ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ. ಅದರಂತೆ ಬಿಜೆಪಿ ಗೋಡೆ ಬರಹದ ಮೂಲಕ ಪ್ರಚಾರ ನಡೆಸುತ್ತಿತ್ತು. ಆದರೆ ಮೈಸೂರು ಪಾಲಿಕೆ ಸಿಬ್ಬಂದಿ ಬಿಜೆಪಿ ಚಿಹ್ನೆ, ನಾಯಕರ ಮುಖಕ್ಕೆ ಕೆಂಪು ಬಣ್ಣ ಬಳಿದಿದ್ದಾರೆ.

ಬಿಜೆಪಿ ಚಿಹ್ನೆ, ಬಿಜೆಪಿಯ ಭರವಸೆಗಳು ರಾರಾಜಿಸುತ್ತಿದ್ದ ಗೋಡೆ ಬರಹಕ್ಕೆ ಕೆಂಪು ಮಸಿ ಬಳಿದ ಮೈಸೂರು ಪಾಲಿಕೆ ಸಿಬ್ಬಂದಿ!
ಬಿಜೆಪಿ ಗೋಡೆ ಬರಹಗಳಿಗೆ ಬಣ್ಣ ಬಳಿಯುತ್ತಿರುವ ಮೈಸೂರು ಪಾಲಿಕೆ ಸಿಬ್ಬಂದಿ
Follow us
Rakesh Nayak Manchi
|

Updated on:Feb 20, 2023 | 3:32 PM

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ನಾನಾ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ. ಅದರಂತೆ ಬಿಜೆಪಿ (BJP Karnataka) ಗೋಡೆ ಬರಹದ ಮೂಲಕ ಪ್ರಚಾರ ಆರಂಭಿಸಿದ್ದು, ವಿವಿಧ ಕಡೆಗಳಲ್ಲಿನ ಗೋಡೆ ಮೇಲೆ ನಾಯಕಯ ಫೋಟೋ ಸಹಿತ ಭರವಸೆಯ ಬರಹಗಳನ್ನು ಹಾಕಿತ್ತು. ಈ ನಡುವೆ ಮೈಸೂರು ಪಾಲಿಕೆ ಆಯುಕ್ತ​​ ಲಕ್ಷ್ಮೀಕಾಂತ್ (Lakshmikanth) ಅವರು ಗೋಡೆ ಬರಹ ತೆಗೆದುಹಾಕುವಂತೆ ಆದೇಶಿಸಿದ್ದಾರೆ. ಆದರೆ ಪಾಲಿಕೆ (Mysuru City Corporation) ಸಿಬ್ಬಂದಿ ಮಾತ್ರ ಸಂಪೂರ್ಣವಾಗಿ ಬಣ್ಣ ಹಚ್ಚುವ ಬದಲು ಬಿಜೆಪಿ ಚಿಹ್ನೆ, ಬಿಜೆಪಿ ನಾಯಕರ ಮುಖಕ್ಕೆ ಮಾತ್ರ ಬಣ್ಣ ಬಳಿದಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರ ನಡೆಸುತ್ತಿದ್ದು, ಮೈಸೂರು ಮೇಯರ್ ಉಪ ಮೇಯರ್ ಎರಡು ಸ್ಥಾನ ಬಿಜೆಪಿಯದ್ದೇ ಆಗಿದೆ. ಮೇಯರ್ ಆಗಿ ಶಿವಕುಮಾರ್ ಉಪಮೇಯರ್ ಆಗಿ ರೂಪ ಅಧಿಕಾರ ನಡೆಸುತ್ತಿದ್ದಾರೆ. ಪಾಲಿಕೆ ಬಿಜೆಪಿ ಹಿಡಿತದಲ್ಲಿದ್ದರೂ ನಗರದ ವಿವಿಧ ಕಡೆಗಳಲ್ಲಿ ತಮ್ಮದೇ ಪಕ್ಷದ ಪ್ರಚಾರದ ಗೋಡೆ ಬರಹಗಳಿಗೆ ಮತ್ತು ತಮ್ಮ ನಾಯಕರ ಮುಖಕ್ಕೆ ಪಾಲಿಕೆಯ ಸಿಬ್ಬಂದಿ ಬಣ್ಣ ಬಳಿಯುತ್ತಿದ್ದಾರೆ. ನಗರದ ನಾರಾಯಣ ಶಾಸ್ತ್ರಿ ರಸ್ತೆ ಸೇರಿದಂತೆ ಹಲವೆಡೆ ಬಣ್ಣ ಹಚ್ಚುವ ಕಾರ್ಯಾಚರಣೆ ಆರಂಭವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Mon, 20 February 23

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು