ಮೈಸೂರಿನಲ್ಲಿ ಹೆಚ್ಚಿದ ಅನಾರೋಗ್ಯ: ಜಿಲ್ಲೆಯಾದ್ಯಂತ ಸಹಾಯವಾಣಿ ಆರಂಭ, ರೋಗ ಕಾಣಿಸಿಕೊಂಡರೆ ತಕ್ಷಣ ಕರೆಮಾಡಿ

| Updated By: ಗಣಪತಿ ಶರ್ಮ

Updated on: May 23, 2024 | 11:58 AM

ಮೈಸೂರು ಜಿಲ್ಲೆಯಾದ್ಯಂತ ವಾಂತಿ-ಭೇದಿ, ಜ್ವರ, ಕಾಲರ ಇನ್ನಿತರೆ ರೋಗ ಪ್ರಕರಣಗಳು ವಿಪರೀತ ಹೆಚ್ಚಾಗಿದ್ದು, ಜಿಲ್ಲಾಡಳಿತ ಸಾರ್ವಜನಿಕರ ನೆರವಿಗೆ ಧಾವಿಸಿದೆ. ಜಿಲ್ಲೆಯಾದ್ಯಂತ ಸಹಾಯವಾಣಿ ಆರಂಭಿಸಲಾಗಿದ್ದು, ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣವೇ ಕರೆ ಮಾಡಿ ನೆರವು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಸಹಾಯವಾಣಿ ಸಂಖ್ಯೆಗಳ ವಿವರ ಇಲ್ಲಿದೆ.

ಮೈಸೂರಿನಲ್ಲಿ ಹೆಚ್ಚಿದ ಅನಾರೋಗ್ಯ: ಜಿಲ್ಲೆಯಾದ್ಯಂತ ಸಹಾಯವಾಣಿ ಆರಂಭ, ರೋಗ ಕಾಣಿಸಿಕೊಂಡರೆ ತಕ್ಷಣ ಕರೆಮಾಡಿ
ಮೈಸೂರಿನಾದ್ಯಂತ ಸಹಾಯವಾಣಿ ಆರಂಭ
Follow us on

ಮೈಸೂರು, ಮೇ 23: ಮೈಸೂರು (Mysuru) ಜಿಲ್ಲೆಯ ಅನೇಕ ಕಡೆಗಳಲ್ಲಿ ಜನರಲ್ಲಿ ಅನಾರೋಗ್ಯ (Illness) ಕಾಣಿಸಿಕೊಳ್ಳುತ್ತಿದ್ದು ಜಿಲ್ಲಾಡಳಿತ ನೆರವಿಗೆ ಧಾವಿಸಿದೆ. ಮೈಸೂರು ಜಿಲ್ಲೆಯಾದ್ಯಂತ ಸಹಾಯವಾಣಿ (Helpline) ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ (Dr KV Rajendra) ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆ ಹಾಗೂ ತಾಲೂಕಿಗೆ ಪ್ರತ್ಯೇಕ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ವಾಂತಿ-ಭೇದಿ, ಜ್ವರ, ಕಾಲರ ಇನ್ನಿತರೆ ರೋಗ ಕಾಣಿಸಿದರೆ ತಕ್ಷಣವೇ ಕರೆ ಮಾಡುವಂತೆ ಸೂಚಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 114 ಮಂದಿ ಅಸ್ವಸ್ಥರಾದ ಘಟನೆಯ ಬೆನ್ನಲ್ಲೇ ಮೈಸೂರು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಇಲ್ಲಿದೆ ಸಹಾಯವಾಣಿ ವಿವರ

  • ಮೈಸೂರು ಜಿಲ್ಲೆ ಸಹಾಯವಾಣಿ – 0821-2423800
  • ಮೈಸೂರು ತಾಲೂಕು ಸಹಾಯವಾಣಿ – 0821-2414812
  • ನಂಜನಗೂಡು ತಾಲೂಕು ಸಹಾಯವಾಣಿ – 0821 -223108
  • ತಿ.ನರಸೀಪುರ ತಾಲೂಕು ಸಹಾಯವಾಣಿ – 08227 – 260210
  • ಹುಣಸೂರು ತಾಲೂಕು ಸಹಾಯವಾಣಿ – 08222-252959
  • ಕೆ.ಆರ್.ನಗರ ತಾಲೂಕು ಸಹಾಯವಾಣಿ – 08223-262371
  • ಸಾಲಿಗ್ರಾಮ ತಾಲೂಕು ಸಹಾಯವಾಣಿ – 08223-283833
  • ಪಿರಿಯಾಪಟ್ಟಣ ತಾಲೂಕು ಸಹಾಯವಾಣಿ – 08223-274175
  • ಎಚ್.ಡಿ.ಕೋಟೆ ತಾಲೂಕು ಸಹಾಯವಾಣಿ – 08228-255325
  • ಸರಗೂರು ತಾಲೂಕು ಸಹಾಯವಾಣಿ – 08228 -296110

ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚನೆಗಳಿವು

ಸಾರ್ವಜನಿಕರು ಅನುಸರಿಸಬೇಕಾದ ಆರೋಗ್ಯದ ಅರಿವಿನ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಜಾಗೃತಿ ಸಂದೇಶ ನೀಡಿದ್ದಾರೆ. ಸಾರ್ವಜನಿಕರು ಕಡ್ಡಾಯವಾಗಿ ಕುದಿಸಿ ಆರಿಸಿದ ನೀರು ಕುಡಿಯಬೇಕು. ಬೀದಿ ಬದಿ ವ್ಯಾಪಾರಿಗಳು ತಾವಿರುವ ಕಡೆ ಸ್ವಚ್ಛತೆ ಕಾಪಾಡಬೇಕು. ನೀರು ಸರಬರಾಜುದಾರರು ಕಡ್ಡಾಯ ಶುದ್ಧ ನೀರು ನೀಡಲೇಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಶುದ್ಧ ನೀರು ನೀಡದಿದ್ದವರ ವಿರುದ್ಧ ದೂರು ದಾಖಲಿಸುವ ಎಚ್ಚರಿಕೆಯನ್ನೂ ಜಿಲ್ಲಾಧಿಕಾರಿ ನೀಡಿದ್ದಾರೆ. ನಗರ, ಗ್ರಾಮೀಣ ಭಾಗದ ಹೋಟೆಲ್​​ನಲ್ಲಿ ಬಿಸಿ ನೀರು ಕೊಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಲುಷಿತ ನೀರು ಸೇವಿಸಿ 114 ಮಂದಿ ಅಸ್ವಸ್ಥ, ಮೂವರಿಗೆ ಕಾಲರ

ವಾಂತಿ-ಭೇದಿ ಕಾಣಿಸಿದಾಗ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ. ನಿರ್ಜಲೀಕರಣ ಉಂಟಾದ ಸಂದರ್ಭದಲ್ಲಿ ಒಆರ್​ಎಸ್ ಪ್ಯಾಕೇಟ್ ಬಳಸಿ. ಮಹಾನಗರ ಪಾಲಿಕೆ, ಪಟ್ಟಣ ಪಂಚಾಯತಿ ತಾಲೂಕು ಪಂಚಾಯತಿ, ಗ್ರಾ.ಪಂ. ವ್ಯಾಪ್ತಿ ನೀರು ಕಲುಷಿತಗೊಳ್ಳದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ. ಇಂಜಿನಿಯರ್​ಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ