Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮುಂಡಿಬೆಟ್ಟದ ತಪ್ಪಲಲ್ಲಿ ಮಂಗವೊಂದರ ಕಪಿಚೇಷ್ಟೆ, ಭಕ್ತೆಯ ಫೋನ್ ಕಸಿದು ಮರಹತ್ತಿದ ಕಪಿರಾಯ!

ಚಾಮುಂಡಿಬೆಟ್ಟದ ತಪ್ಪಲಲ್ಲಿ ಮಂಗವೊಂದರ ಕಪಿಚೇಷ್ಟೆ, ಭಕ್ತೆಯ ಫೋನ್ ಕಸಿದು ಮರಹತ್ತಿದ ಕಪಿರಾಯ!

ಅರುಣ್​ ಕುಮಾರ್​ ಬೆಳ್ಳಿ
|

Updated on:May 23, 2024 | 1:55 PM

ಫೋನ್ ಕೊಡು ಅಂತ ಕೇಳಿದಂತೆಲ್ಲ ಅದು ಕೊಂಬೆಯಿಂದ ಕೊಂಬೆಗೆ ನೆಗೆಯುತ್ತಾ ಸತಾಯಿಸಿದೆ. ತನ್ನ ಸಮುದಾಯದ ಮತ್ತೊಬ್ಬ ಸದಸ್ಯನ ಬಳಿ ಹೋಗಿ ಬಾ ಒಂದು ಸೆಲ್ಫೀ ತಗೊಳ್ಳೋಣ ಅಂದಿರಲೂಬಹುದು! ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅರ್ಧಗಂಟೆ ಕಾಲ ಪೀಡಿಸಿ ಮಂಗ ಚೇಷ್ಟೆಗಳನ್ನೆಲ್ಲ ಮಾಡಿದ ಬಳಿಕ ಕಪಿರಾಯ, ಫೋನಿಂದ ತನಗೇನೂ ಉಪಯೋಗವಿಲ್ಲ ಅಂದುಕೊಂಡು ಅದನ್ನು ನೆಲಕ್ಕೆ ಬಿಸಾಡಿದನಂತೆ.

ಮೈಸೂರು: ಇದನ್ನೇ ಕಪಿಚೇಷ್ಟೆ ಅನ್ನೋದು! ಕೋತಿಯೊಂದು (monkey) ಮಹಿಳಾ ಭಕ್ತರೊಬ್ಬರ (woman devotee) ಮೊಬೈಲ್ ಕಸಿದು ಮರವೇರಿದ ಘಟನೆ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದ (Chamundi hills) ತಪ್ಪಲಲ್ಲಿ ನಡೆದಿದೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಮೆಟ್ಟಿಲುಗಳನ್ನು ಹತ್ತಿ ಹೋಗುವಾಗ ಅವರನ್ನು ನೆಗೆಯುತ್ತಾ ಅಪ್ರೋಚ್ ಮಾಡಿದ ಮಂಗಣ್ಣ ಕೈಲಿದ್ದ ಪರ್ಸನ್ನು ಕಿತ್ತುಕೊಂಡು ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರುವ ಮರಹತ್ತಿದೆ. ಅದೇ ಪರ್ಸಲ್ಲಿ ಅವರು ಪೋನಿಟ್ಟಿದ್ದರು. ಆ ಭಕ್ತೆ ಮತ್ತು ಬೇರೆ ಒಂದಷ್ಟು ಜನ ಮರದ ಕೆಳಗಿಂದ ಪ್ಲೀಸ್ ಮೊಬೈಲ್ ಕೊಡಪ್ಪಾ ಅಂತ ಅನುನಯದ ಧ್ವನಿಯಲ್ಲಿ ಮನವಿ ಮಾಡಿದರೂ, ಕೋತಿ ಇವರ ಕಡೆ ನೋಡಿದೆಯೇ ಹೊರತು ಫೋನ್ ಮಾತ್ರ ಕೆಳಗೆ ಬಿಸಾಡಿಲ. ಇಲ್ಲಿಗೆ ಬರೋರೆಲ್ಲ ಫೋನನ್ನೇ ತದೇಕಚಿತ್ತವಾಗಿ ನೋಡಿರುತ್ತಾರೆ, ಅಂಥದ್ದೇನಿರಬಹುದು ಇದರಲ್ಲಿ ಅಂತ ಕೋತಿಗೂ ಕುತೂಹಲ ಉಂಟಾಗಿರಬಹುದು. ಫೋನ್ ಕೊಡು ಅಂತ ಕೇಳಿದಂತೆಲ್ಲ ಅದು ಕೊಂಬೆಯಿಂದ ಕೊಂಬೆಗೆ ನೆಗೆಯುತ್ತಾ ಸತಾಯಿಸಿದೆ. ತನ್ನ ಸಮುದಾಯದ ಮತ್ತೊಬ್ಬ ಸದಸ್ಯನ ಬಳಿ ಹೋಗಿ ಬಾ ಒಂದು ಸೆಲ್ಫೀ ತಗೊಳ್ಳೋಣ ಅಂದಿರಲೂಬಹುದು! ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅರ್ಧಗಂಟೆ ಕಾಲ ಪೀಡಿಸಿ ಮಂಗ ಚೇಷ್ಟೆಗಳನ್ನೆಲ್ಲ ಮಾಡಿದ ಬಳಿಕ ಕಪಿರಾಯ, ಫೋನಿಂದ ತನಗೇನೂ ಉಪಯೋಗವಿಲ್ಲ ಅಂದುಕೊಂಡು ಅದನ್ನು ನೆಲಕ್ಕೆ ಬಿಸಾಡಿದನಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾಮುಂಡೇಶ್ವರಿ ತಪ್ಪಲಿನಲ್ಲಿ ಮೃತ ಕೋತಿ ಮರಿ ಅಂತ್ಯಕ್ರಿಯೆ ಮಾಡಿ ಮಾನವೀಯತೆ

Published on: May 23, 2024 01:22 PM