AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಫಲಿತಾಂಶದ ನಂತರ ರಾಜ್ಯ ಸರ್ಕಾರ ಉರುಳುತ್ತೆ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ: ಅಭಯ್ ಪಾಟೀಲ್, ಬಿಜೆಪಿ ಶಾಸಕ

ಚುನಾವಣಾ ಫಲಿತಾಂಶದ ನಂತರ ರಾಜ್ಯ ಸರ್ಕಾರ ಉರುಳುತ್ತೆ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ: ಅಭಯ್ ಪಾಟೀಲ್, ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 23, 2024 | 11:54 AM

Share

018ರಲ್ಲಿ ತಾನು ಶಾಸಕನಾಗಿ ಆಯ್ಕೆಯಾದ ಮೇಲೆ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆ ಅವಧಿಯಲ್ಲಿ ತಾನು ₹ 300 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ಹೇಳಿದ ಪಾಟೀಲ್ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಕ್ಷೇತ್ರಕ್ಕೆ 11ರೂ. ಗಳ ಅನುದಾನ ಸಹ ಸಿಕ್ಕಿಲ್ಲ ಎಂದರು.

ಬೆಳಗಾವಿ: ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವ ರಾಜ್ಯದ ಎಲ್ಲ ಮುಖಂಡರು ಮತ್ತು ನಾಯಕರು ಹೇಳೋದು ಒಂದೇ ಮಾತು-ಲೋಕಸಭಾ ಚುನಾವಣೆ ಫಲಿತಾಂಶದ (Lok Sabha poll results) ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ (Siddaramaiah government) ಪತನಗೊಳ್ಳುತ್ತದೆ! ಹಾಗೆ ಹೇಳುವವರ ಬ್ರಿಗೇಡ್ ಗೆ ಬೆಳಗಾವಿ ಶಾಸಕ ಅಭಯ್ ಪಾಟೀಲ್ (Abhay Patil) ಹೊಸ ಸೇರ್ಪಡೆಯಾಗಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ 22 ಮತ್ತು ಜೆಡಿಎಸ್ ಗೆ ಎರಡು ಒಟ್ಟು 24 ಸೀಟು ಬರಲಿವೆ ಎಂದರು. ಜೂನ್ 4 ರಂದು ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಸರ್ಕಾರ  ಉರುಳುತ್ತದೆ ಅಂತ ಅವರು ಹೇಳಿದ್ದಕ್ಕೆ ಪತ್ರಕರ್ತರೊಬ್ಬರು ಹೇಗೆ ಹೇಳುತ್ತೀರಿ ಅಂತ ಕೇಳಿದಾಗ; ಅದನ್ನು ತಾನು ಹೇಳುತ್ತಿಲ್ಲ, ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರ ಅನುದಾನರಹಿತ ಮತ್ತು ಅಭಿವೃದ್ಧಿರಹಿತ ಸರ್ಕಾರವಾಗಿದೆ. 2018ರಲ್ಲಿ ತಾನು ಶಾಸಕನಾಗಿ ಆಯ್ಕೆಯಾದ ಮೇಲೆ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆ ಅವಧಿಯಲ್ಲಿ ತಾನು ₹ 300 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ಹೇಳಿದ ಪಾಟೀಲ್ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಕ್ಷೇತ್ರಕ್ಕೆ 11ರೂ. ಗಳ ಅನುದಾನ ಸಹ ಸಿಕ್ಕಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ ಸರ್ಕಾರ ಅಶಾಂತಿ ಸೃಷ್ಟಿಸುತ್ತಿದೆ, ಹನುಮನ ತಡವಿಕೊಂಡವರಿಗೆ ಉಳಿಗಾಲವಿಲ್ಲ: ಜನಾರ್ಧನ ರೆಡ್ಡಿ