
ಮೈಸೂರು, ಜೂನ್ 08: ಮಹಿಳೆಯ ದೇಹದಿಂದ 861 ಕಲ್ಲುಗಳನ್ನು (stones) ವೈದ್ಯರು ಹೊರ ತೆಗೆದಿರುವಂತಹ ಘಟನೆಯೊಂದು ನಗರದಲ್ಲಿ ನಡೆದಿದೆ. ಮೈಸೂರಿನ ಕಾವೇರಿ ಆಸ್ಪತ್ರೆಯ ವೈದ್ಯರಿಂದ ನಡೆದ ಅಪರೂಪದ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದೆ. ವೈದ್ಯರ ತಪಾಸಣೆ ವೇಳೆ ಮಹಿಳೆಯ ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್ನಲ್ಲಿ ಕಲ್ಲುಗಳು ಇರುವುದು ಪತ್ತೆ ಆಗಿದೆ. ಕೂಡಲೇ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ಕೊಲೆಂಜಿಯೊಪ್ಯಾಂಕ್ರಿಯಾಟೋಗ್ರಫಿ (ERCP) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಕಲ್ಲುಗಳನ್ನು ಹೊರ ತೆಗೆದಿದ್ದಾರೆ.
55 ವರ್ಷದ ಮಹಿಳೆಯೋರ್ವರು ಹೊಟ್ಟೆನೋವು ಮತ್ತು ಜಾಂಡೀಸ್‌ನಿಂದ ಬಳಲುತ್ತಿದ್ದರು. ಹೀಗಾಗಿ ತಪಾಸಣೆ ಮಾಡಿದ ವೈದ್ಯರು, ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್ನಲ್ಲಿದ್ದ ಕಲ್ಲುಗಳ ರಾಶಿಯನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ರಜೆ ದಿನ ಸಮಾಜ ಸೇವೆಗೆ ಮೀಸಲಿಟ್ಟ ವಿದ್ಯಾರ್ಥಿಗಳು: ಸ್ವಂತ ಹಣದಲ್ಲಿ ರಸ್ತೆ ದುರಸ್ಥಿ, ರಾಜಕಾರಣಿಗಳಿಗೆ ಮಾದರಿ
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೊಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್ಎಂ ಅರವಿಂದ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, 861 ಕಲ್ಲುಗಳನ್ನನು ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಗ್ರಾಮದ ಸ್ನೇಹ ಬಳಗದಿಂದ ಗ್ರಾಮದ ಪಕ್ಕದ ಗುಡ್ಡದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಯಿತು. ಸಾರಥಿ ಗ್ರಾಮದ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಹಾಲಿ ವಿದ್ಯಾರ್ಥಿಗಳಿಂದ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಇದನ್ನೂ ಓದಿ: Bengaluru stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ಮಹತ್ವದ ತೀರ್ಮಾನ ಕೈಗೊಂಡ ಬಿಸಿಸಿಐ
ಈ ಹಿಂದೆ ಕೂಡ ಗ್ರಾಮದ ಸುತ್ತಮುತ್ತಲು ಸಸಿ ನೆಟ್ಟಿದ್ದರು. ಇದೀಗ ಗ್ರಾಮದ ಪಕ್ಕದ ಗುಡ್ಡದಲ್ಲಿ ನೀರಿನ ವ್ಯವಸ್ಥೆ ಮಾಡಿ ಸಾವಿರಾರು ಸಸಿಗಳನ್ನು ನೆಡುವ ಮೂಲಕ ಸಾರಥಿ ಗ್ರಾಮದ ಸ್ನೇಹ ಬಳಗ ಇತರರಿಗೆ ಮಾದರಿ ಆಗಿದ್ದಾರೆ.
ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.