ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂತ್ರಸ್ತ ಯುವತಿ ಮುಂಬೈಗೆ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪೋಷಕರ ಜತೆ ಸಂತ್ರಸ್ತ ಯುವತಿ ನಿನ್ನೆ ಮುಂಬೈಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾರನ್ನೂ ಭೇಟಿ ಮಾಡುವುದಿಲ್ಲವೆಂದು ಹೇಳಿದ್ದ ಸಂತ್ರಸ್ತೆ, ಇದೀಗ ಮೈಸೂರಿನಿಂದ ಮುಂಬೈಗೆ ತೆರಳುತ್ತಿದ್ದರೆ ಇತ್ತ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮೈಸೂರಿಗೆ ಕರೆತರುತ್ತಿದ್ದಾರೆ.
ಮೈಸೂರಿನಲ್ಲಿ ತನಿಖಾ ತಂಡದ ಜತೆ ಸಭೆ ನಡೆಸಲು ಬೆಂಗಳೂರಿನಿಂದ ಮೈಸೂರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕೂಡಾ ತೆರಳುತ್ತಿದ್ದು, ತನಿಖಾ ತಂಡದ ಜತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ವಶಕ್ಕೆ ಪಡೆದಿರುವ ಆರೋಪಿಗಳನ್ನೂ ಮೈಸೂರಿಗೆ ಕರೆತರಲಾಗುತ್ತಿದ್ದು, ತನಿಖೆ ತೀವ್ರಗೊಳ್ಳುತ್ತಿದೆ.
ಮೈಸೂರು ಪೊಲೀಸರು ಗ್ಯಾಂಗ್‌ರೇಪ್ ಪ್ರಕರಣದ 6 ಆರೋಪಿಗಳ ಪೈಕಿ 5 ಮಂದಿಯನ್ನು ತಮಿಳುನಾಡಲ್ಲಿ ವಶಕ್ಕೆ ತೆಗೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಈ ಕುಕೃತ್ಯ ನಡೆಸಿರಬಹುದು ಎನ್ನಲಾಗಿತ್ತು. ಆದರೆ ಬಂಧಿತ ಐವರ ಪೈಕಿ ಯಾರೂ ವಿದ್ಯಾರ್ಥಿಗಳಲ್ಲ ಎನ್ನುವ ಬಗ್ಗೆ ಮಾಹಿತಿ ಈಗ ಲಭ್ಯವಾಗಿದೆ.
ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಕಾರ್ಯಾಚರಣೆ ಸಕ್ಸಸ್ ಆಗಿದೆ ಎಂದು ಹೇಳಿದ್ದಾರೆ. ಇನ್ನೆರಡು ಗಂಟೆಯಲ್ಲಿ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡುತ್ತೇವೆ. ಪೊಲೀಸರು ಅಥವಾ ನಾನೇ ಅಧಿಕೃತ ಮಾಹಿತಿ ನೀಡುವೆ ಎಂದೂ ಹೇಳಿದ್ದಾರೆ.
ಬಂಧಿತ ಐವರ ಪೈಕಿ ಯಾರೂ ವಿದ್ಯಾರ್ಥಿಗಳಲ್ಲ ಎನ್ನುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿಂದೆ ಇಂಥದ್ದೇ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದು ಗಮನಾರ್ಹ. ಈ ಮಧ್ಯೆ, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ಚಲನವಲನದ ಮೇಲೆ ನಿಗಾವಹಿಸಿದ್ದರು. ಸಂತ್ರಸ್ತೆ ಮತ್ತು ಯುವಕ 3 ದಿನಗಳ ಕಾಲ ಒಂದೇ ಸ್ಥಳಕ್ಕೆ ಬರುತ್ತಿದ್ದರು. ಅವರಿಬ್ಬರನ್ನೂ 3 ದಿನ ಫಾಲೋ ಮಾಡಿ 4ನೇ ದಿನ ಗ್ಯಾಂಗ್ ದಾಳಿ ಮಾಡಿತ್ತು. ಆ. 24ರಂದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಇದನ್ನೂ ಓದಿ:
gang rape accused arrested: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ, 4 ಆರೋಪಿಗಳನ್ನು ಬಂಧಿಸಿದ ಮೈಸೂರು ಪೊಲೀಸರು
Mysuru gang rape : ಗ್ಯಾಂಗ್‌ರೇಪ್ ಪ್ರಕರಣ- ತಮಿಳುನಾಡಲ್ಲಿ ಐದು ಆರೋಪಿಗಳು ವಶಕ್ಕೆ, ಆರೋಪಿಗಳು ವಿದ್ಯಾರ್ಥಿಗಳಲ್ಲ
(Mysuru Gang Rape case victim girl discharged from hospital went to Mumbai with her parents)
Published On - 10:22 am, Sat, 28 August 21