AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ ಆರೋಪಿ ಸೇರಿ ಐವರ ಬಂಧನವಾಗಿದೆ; ಡಿಜಿ ಐಜಿಪಿ ಪ್ರವೀಣ್​ ಸೂದ್ ನೀಡಿದ ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ

ಈ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ. ಎಲ್ಲರೂ ತಿರುಪುರ ಮೂಲದವರು. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7ನೇ ತರಗತಿ 8 ತರಗತಿ ಓದಿದ ಇವರೆಲ್ಲರೂ ಕಾರ್ಮಿಕರಾಗಿದ್ದಾರೆ. ಡ್ರೈವರ್​, ಕಾರ್ಪೆಂಟರ್​ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಾಲ ಆರೋಪಿ ಸೇರಿ ಐವರ ಬಂಧನವಾಗಿದೆ; ಡಿಜಿ ಐಜಿಪಿ ಪ್ರವೀಣ್​ ಸೂದ್ ನೀಡಿದ ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ
ಅತ್ಯಾಚಾರ ಪ್ರಕರಣದ ಓರ್ವ ಆರೋಪಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 28, 2021 | 1:25 PM

ಮೈಸೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ & ಐಜಿಪಿ ಪ್ರವೀಣ್​ ಸೂದ್ ಸುದ್ದಿಗೋಷ್ಠಿ ನಡೆಸಿದ್ದು, ವಿದ್ಯಾರ್ಥಿನಿ ಹೆದರಿಸಿ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ದರೋಡೆಗೆ ಪ್ರಯತ್ನಿಸಿ ನಂತರ ಅತ್ಯಾಚಾರ ನಡೆಸಿದ್ದರು, ಇದಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದು, ಕಾರ್ಮಿಕರಾಗಿರುವ ಇವರು ತಮಿಳುನಾಡಿನ ಮೂಲದವರು ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಒಬ್ಬ ಬಾಲ ಆರೋಪಿ (juvenile) ಇರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ. ಆದರೆ, ಅದು ಹೆಚ್ಚಿನ ತನಿಖೆಯಿಂದಲೇ ಗೊತ್ತಾಗಬೇಕು ಎಂದಿದ್ದಾರೆ.

ಈ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ. ಎಲ್ಲರೂ ತಿರುಪುರ ಮೂಲದವರು. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7ನೇ ತರಗತಿ 8 ತರಗತಿ ಓದಿದ ಇವರೆಲ್ಲರೂ ಕಾರ್ಮಿಕರಾಗಿದ್ದಾರೆ. ಡ್ರೈವರ್​, ಕಾರ್ಪೆಂಟರ್​ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ ಒಬ್ಬ ಬಾಲಕ 17 ವರ್ಷದವನಿದ್ದಾನೆ ಎನ್ನುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ. ಆದರೆ, ಅದು ಇನ್ನೂ ಖಚಿತವಾಗಬೇಕಿದೆ ಎಂದು ಹೇಳಿದ್ದಾರೆ.

ಇದರಲ್ಲಿ ಓರ್ವ ಬಾಲ ಆರೋಪಿ ಇದ್ದರೂ ಈ ಹಿಂದಿನ ಪ್ರಕರಣಗಳಂತೆ ಆಗುವುದಿಲ್ಲ. ಏಕೆಂದರೆ, ಬಾಲಾಪರಾಧ ಕಾಯ್ದೆಯಲ್ಲೂ ಬದಲಾವಣೆ ಆಗಿದೆ. ಗಂಭೀರ ಪ್ರಕರಣದಲ್ಲಿ 16 ವರ್ಷ ಆಗಿದ್ದರೆ ಪ್ರಧಾನ ನ್ಯಾಯಾಲಯದಲ್ಲಿಯೇ ವಿಚಾರಣೆ ಆಗಲಿದೆ. 6 ಆರೋಪಿಗಳ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ.

ಟಿವಿ9 ಈ ಸುದ್ದಿಯನ್ನು ಬೆಳಗ್ಗೆಯೇ ಬ್ರೇಕ್ ಮಾಡಿತ್ತು, ಓದಿ:

Mysuru gang rape : ಗ್ಯಾಂಗ್‌ರೇಪ್ ಪ್ರಕರಣ- ತಮಿಳುನಾಡಲ್ಲಿ ಐದು ಆರೋಪಿಗಳು ವಶಕ್ಕೆ, ಆರೋಪಿಗಳು ವಿದ್ಯಾರ್ಥಿಗಳಲ್ಲ

ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ: ಇವರೆಲ್ಲರೂ ಕೆಲಸಕ್ಕೆ ಮೈಸೂರಿಗೆ ಬಂದಿದ್ದು, ವಾಪಸ್ಸು ಹೋಗುವಾಗ ಕುಡಿದು ಪಾರ್ಟಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸುವೆ. ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ಕಡೆಯಿಂದ ನಮಗೆ ಈ ತನಕ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾರೇ ಆಗಲಿ ಆ ಸಮಯದಲ್ಲಿ ಮಾಹಿತಿ ನೀಡುವುದು ಕಷ್ಟ. ಯುವತಿಯ ಸ್ನೇಹಿತ ಕೂಡಾ ಪೂರ್ಣ ಮಾಹಿತಿ ನೀಡುವ ಸ್ಥಿತಿಯಲ್ಲಿಲ್ಲ. ಸಂತ್ರಸ್ತೆ ಸ್ನೇಹಿತನ ಕಡೆಯಿಂದ ಸ್ವಲ್ಪ ಮಾಹಿತಿ ಮಾತ್ರ ಸಿಕ್ಕಿದೆ. ಬ್ಲ್ಯಾಕ್​ ಮೇಲ್ ಮಾಡಿದ ಬಗ್ಗೆ ನಮಗೆ ಮಾಹಿತಿ ಇಲ್ಲ. ಪೊಲೀಸರ ಈ ವರೆಗಿನ ತನಿಖೆಯಲ್ಲಿ ಮಾಹಿತಿ ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಚಾರ್ಜ್​ಶೀಟ್​​ ಸಲ್ಲಿಸಲಾಗುತ್ತದೆ. ಆದರೆ, ನ್ಯಾಯಾಲಯದಲ್ಲಿ ಹೆಚ್ಚಿನ ವಿವರ ನೀಡಬೇಕಾಗಿರುವುದರಿಂದ ಈಗಲೇ ಎಲ್ಲವನ್ನೂ ಹೇಳಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

TAMILNADU GANG

ಅತ್ಯಾಚಾರ ಆರೋಪಿಗಳು ತಮಿಳುನಾಡಿನವರು

ಒಟ್ಟಾರೆಯಾಗಿ, ಆರೋಪಿಗಳು ತಮಿಳುನಾಡಿನಿಂದ ಮೈಸೂರಿಗೆ ಬಂದು ಹೋಗುತ್ತಿದ್ದರು. ಮೈಸೂರಿನ ಬಂಡೀಪಾಳ್ಯ ಮಾರುಕಟ್ಟೆಗೆ ಬಂದು ಹೋಗ್ತಿದ್ದರು. ಚಾಲಕನಾಗಿದ್ದ ಆರೋಪಿ ಆಗಾಗ ಮೈಸೂರಿಗೆ ಬಂದುಹೋಗ್ತಿದ್ದ. ಅವರೆಲ್ಲಾ ಎಲೆಕ್ಟ್ರಿಕಲ್, ಕಾರ್ಪೆಂಟಿಗ್, ಡ್ರೈವರ್​ ಕೆಲಸ ಮಾಡುತ್ತಿದ್ದರು. ಮೈಸೂರಿನಿಂದ ವಾಪಸ್ ಹೋಗುವಾಗ ಪಾರ್ಟಿ ಮಾಡ್ತಿದ್ದರು. ಮೈಸೂರಿನ ಹೊರವಲಯದಲ್ಲಿ ಮದ್ಯ ಸೇವಿಸಿ ಹೋಗ್ತಿದ್ದರು.

ಅದೇ ರೀತಿ ಆಗಸ್ಟ್ 24ರಂದು ನಿರ್ಜನ ಪ್ರದೇಶದಲ್ಲಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಯುವಕ, ಯುವತಿ ಹೋಗಿದ್ರು. ಜೋಡಿಯನ್ನು ದರೋಡೆ ಉದ್ದೇಶದಿಂದ ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಇದೇ ಅಂತಿಮವಲ್ಲ. ಇನ್ನೂ ಹೆಚ್ಚಿನ ತನಿಖೆ ನಂತರವಷ್ಟೇ ನಿಖರವಾಗಿ ಹೇಳಬಹುದು ಎಂಬ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಲಭ್ಯವಾಗಿದೆ. ಜತೆಗೆ, ಈ ಆರೋಪಿಗಳು ಈ ಹಿಂದೆ ತಮಿಳುನಾಡಿನಲ್ಲಿ ಇನ್ನಿತರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಇದನ್ನೂ ಓದಿ: ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ ಭೇದಿಸಲು 5 ಜಿಲ್ಲೆಗಳ 26 ಕ್ರೈಂ ಎಕ್ಸ್​​ಪರ್ಟ್​ಗಳು ಫೀಲ್ಡ್​​ಗೆ ಇಳಿದಿದ್ದರು! ವಿವರ ಇಲ್ಲಿದೆ 

gang rape accused arrested: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ, 4 ಆರೋಪಿಗಳನ್ನು ಬಂಧಿಸಿದ ಮೈಸೂರು ಪೊಲೀಸರು

(DG IGP Press Conference on Mysuru Gang Rape)

Published On - 12:32 pm, Sat, 28 August 21

ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?