ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ ಭೇದಿಸಲು 5 ಜಿಲ್ಲೆಗಳ 26 ಕ್ರೈಂ ಎಕ್ಸ್​​ಪರ್ಟ್​ಗಳು ಫೀಲ್ಡ್​​ಗೆ ಇಳಿದಿದ್ದರು! ವಿವರ ಇಲ್ಲಿದೆ

ಸದರಿ ದುಷ್ಕೃತ್ಯದ ಕುರಿತಾದ ತ್ವರಿತ ತನಿಖೆಗೆ ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳ ಪೊಲೀಸರ ಸಹಾಯವನ್ನು ಪಡೆಯಲಾಗಿದ್ದು, ಈ ಹಿಂದೆ ದೊಡ್ಡ ದೊಡ್ಡ ಅಪರಾಧ ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರನ್ನೇ ಆರಿಸಿ ತಂಡ ರಚಿಸಲಾಗಿದೆ.

ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ ಭೇದಿಸಲು 5 ಜಿಲ್ಲೆಗಳ 26 ಕ್ರೈಂ ಎಕ್ಸ್​​ಪರ್ಟ್​ಗಳು ಫೀಲ್ಡ್​​ಗೆ ಇಳಿದಿದ್ದರು! ವಿವರ ಇಲ್ಲಿದೆ
ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್​​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 28, 2021 | 12:12 PM

ಮೈಸೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಹತ್ವದ ತನಿಖೆಗಾಗಿ ಪೊಲೀಸ್​ ಇಲಾಖೆ ರಾಜ್ಯದ 5 ಜಿಲ್ಲೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಪೊಲೀಸರನ್ನು ಆರಿಸಿಕೊಂಡಿದ್ದು, 26 ಪರಿಣಿತ ಆರಕ್ಷಕರನ್ನು ಒಳಗೊಂಡ ಒಂದು ತಂಡವನ್ನು ರಚಿಸಿ ರಹಸ್ಯ ಭೇದಿಸುತ್ತಿರುವುದು ತಿಳಿದುಬಂದಿದೆ.

ಸದರಿ ದುಷ್ಕೃತ್ಯದ ಕುರಿತಾದ ತ್ವರಿತ ತನಿಖೆಗೆ ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳ ಪೊಲೀಸರ ಸಹಾಯವನ್ನು ಪಡೆಯಲಾಗಿದ್ದು, ಈ ಹಿಂದೆ ದೊಡ್ಡ ದೊಡ್ಡ ಅಪರಾಧ ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರನ್ನೇ ಆರಿಸಿ ತಂಡ ರಚಿಸಲಾಗಿದೆ. ಇದಕ್ಕಾಗಿ ಮೈಸೂರು ಜಿಲ್ಲೆಯ 7 ಪೊಲೀಸರು, ಚಾಮರಾಜನಗರ ಜಿಲ್ಲೆಯ 5 ಪೊಲೀಸರು, ಕೊಡಗು ಜಿಲ್ಲೆಯ 4 ಪೊಲೀಸರು, ಹಾಸನ ಜಿಲ್ಲೆಯ 5 ಪೊಲೀಸರು, ಮಂಡ್ಯ ಜಿಲ್ಲೆಯ 5 ಪೊಲೀಸರು ನಿಯೋಜನೆಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ಪತ್ತೆಗೆಂದೇ ಒಟ್ಟು 26 ಪರಿಣಿತ ಆರಕ್ಷಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿದ್ದು, ತಂಡದಲ್ಲಿ ಇನ್ಸ್ಪೆಕ್ಟರ್, ‌ಸಬ್ ಇನ್ಸ್ಪೆಕ್ಟರ್, ಪೋಲಿಸ್ ಕಾನ್ಸ್‌ಟೇಬಲ್​ ಇದ್ದಾರೆ ಎಂದು ಗೊತ್ತಾಗಿದೆ. ದಕ್ಷಿಣ ವಲಯದಲ್ಲಿನ ಪರಿಣಿತ ಪೊಲೀಸರ ಪಟ್ಟಿ ಮಾಡಿಕೊಂಡು ತಂಡ ರಚಿಸಿದ ಇಲಾಖೆ ಈಗ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಆರೋಪಿಗಳು ತಮಿಳುನಾಡಿನ ಸತ್ಯಮಂಗಲ ಮೂಲದವರು. ವಶಕ್ಕೆ ಪಡೆದಿರುವ ಐವರು ಆರೋಪಿಗಳು ಕೂಲಿಕಾರ್ಮಿಕರು. ಪ್ರಕರಣದಲ್ಲಿ ಇನ್ನೂ ಯಾರಾದರೂ ಇದ್ದಾರಾ ಎಂದೂ ತನಿಖೆ ನಡೆಯುತ್ತಿದೆ. ಏತನ್ಮಧ್ಯೆ, ಮೈಸೂರಿಗೆ ಪೊಲೀಸ್ ಮಹಾ ನಿರ್ದೇಶಕ (ಡಿಜಿ, ಐಜಿಪಿ) ಪ್ರವೀಣ್ ಸೂದ್​ ಆಗಮಿಸಿದ್ದು, ದಕ್ಷಿಣ ವಲಯ ಐಜಿಪಿ ಕಚೇರಿಗೆ ತಲುಪಿದ್ದಾರೆ. ಎಡಿಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್​ಪಿ ಆರ್.ಚೇತನ್ ಜತೆ ಸಭೆ ನಡೆಸಲಿರುವ ಡಿಜಿ, ಐಜಿಪಿ ಪ್ರವೀಣ್ ಸೂದ್ ಕೆಲವೇ ಹೊತ್ತಿನಲ್ಲಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಂತಹ ಘಟನೆ ಮುಂದೆಂದೂ ನಡೆಯಬಾರದು: ಎಡಿಜಿಪಿ ಪ್ರತಾಪ್ ರೆಡ್ಡಿ 

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮುಂಬೈಗೆ ತೆರಳಿದ ಸಂತ್ರಸ್ತೆ; ಮೈಸೂರಿನತ್ತ ಹೊರಟ ಡಿಜಿ-ಐಜಿ ಪ್ರವೀಣ್ ಸೂದ್

(Mysuru Gang Rape case Police department formed squad of 26 crime experts from 5 districts)

Published On - 12:03 pm, Sat, 28 August 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್