ಮದುವೆ ಮಾಡಿಕೊಟ್ಟಿಲ್ಲ ಎಂದು ಹುಡುಗಿಯ ತಂದೆಯನ್ನೇ ಕೊಂದಿದ್ದ; ಮೈಸೂರು ರೇಪ್ ಕೇಸ್ ಆರೋಪಿಯ ಹಿನ್ನೆಲೆ ಬಯಲಿಗೆ
Mysuru Gangrape Case: ತಮಿಳುನಾಡಿನ ತಿರ್ಪೂರ್ ಜಿಲ್ಲೆಯಲ್ಲಿ ಕೊಲೆ ಮಾಡಿದ್ದ. ಬಳಿಕ, ತಿರ್ಪೂರ್ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಕೂಡ ಅನುಭವಿಸಿದ್ದ. ಪೊಲೀಸರ ತನಿಖೆ ವೇಳೆ ಒಂದೊಂದೇ ಪ್ರಕರಣ ಬಯಲಾಗುತ್ತಿದೆ.
ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೇ ಮಾಹಿತಿಗಳು ಹೊರಬೀಳುತ್ತಿದೆ. ಸಾಮೂಹಿಕ ಅತ್ಯಾಚಾರದ ಪ್ರಕರಣದ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇರುವುದು ಕೂಡ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿಯೊಬ್ಬ ಕೊಲೆ ಕೇಸ್ ಆರೋಪಿಯಾಗಿದ್ದ ಎಂಬ ವಿಚಾರ ತನಿಖೆಯಿಂದ ಈಗ ಹೊರಬಿದ್ದಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡದ ಹಿನ್ನೆಲೆಯಲ್ಲಿ ಹುಡುಗಿ ತಂದೆಯನ್ನೇ ಕೊಲೆ ಮಾಡಿದ್ದ. ತಮಿಳುನಾಡಿನ ತಿರ್ಪೂರ್ ಜಿಲ್ಲೆಯಲ್ಲಿ ಕೊಲೆ ಮಾಡಿದ್ದ. ಬಳಿಕ, ತಿರ್ಪೂರ್ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಕೂಡ ಅನುಭವಿಸಿದ್ದ. ಪೊಲೀಸರ ತನಿಖೆ ವೇಳೆ ಒಂದೊಂದೇ ಪ್ರಕರಣ ಬಯಲಾಗುತ್ತಿದೆ. ಉಳಿದ ಆರೋಪಿಗಳ ಕ್ರಿಮಿನಲ್ ಹಿಸ್ಟರಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆರೋಪಿಗಳು ಮೈಸೂರಿನಲ್ಲಿ ಬಳಕೆ ಮಾಡಿದ್ದು ತಮಿಳುನಾಡಿನ ಸಿಮ್. ತಮಿಳುನಾಡಿನ ಸಿಮ್ ಬಳಕೆ ಮಾಡಿದ್ದರಿಂದ ಪೊಲೀಸರಿಗೆ ಮುಖ್ಯ ಲೀಡ್ ಸಿಗುವಂತೆ ಮಾಡಿತ್ತು. ತಮಿಳುನಾಡಿನ ಸಿಮ್ ಬಳಕೆ ಮೇಲೆ ತಮಿಳುನಾಡಿನ ನಂಬರ್ ಟ್ರೇಸ್ ಮಾಡಲಾಗಿತ್ತು. ಸಿಮ್ಗಳು ಈ ಘಟನಾ ಸ್ಥಳದಲ್ಲಿ ಹೆಚ್ಚಾಗಿ ಬಳಕೆಯಾಗಿ ಮತ್ತೆ ತಮಿಳುನಾಡಿನಲ್ಲಿ ಬಳಕೆ ಆಗಿತ್ತು. ಈ ಮೂಲಕ ನಂಬರ್ ಟ್ರೇಸ್ ಮಾಡಿ ಆರೋಪಿಗಳ ಪತ್ತೆ ಮಾಡಲಾಗಿದೆ.
ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಅರೋಪಿಗಳನ್ನು ಪತ್ತೆ ಹಚ್ಚಿದ ಮೈಸೂರು ಪೊಲೀಸರಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಅಭಿನಂದನೆ ಸಲ್ಲಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಕೆ ಮಾಡಲಾಗಿದೆ. ನಮ್ಮ ಮೈಸೂರು ಸೇಫ್ ಮೈಸೂರು ಪೋಸ್ಟರ್ ಮೂಲಕ ಕೃತಜ್ಞತೆ ಸಲ್ಲಿಸಲಾಗಿದೆ.
ಮಂಗಳೂರು: ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ; ಜಾಗೃತಿ ಅಭಿಯಾನ ಮೈಸೂರು ಸಾಮೂಹಿಕ ಅತ್ಯಾಚಾರ ಘಟನೆಯ ಬಳಿಕ ಮಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇಆರ್ಎಸ್ಎಸ್ ವೆಹಿಕಲ್ ಹೆಚ್ಚಿನ ಬಳಕೆ ಮಾಡುವಂತೆ ಜಾಗೃತಿ ಕಾರ್ಯ ನಡೆಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ, ಡಿಸಿಪಿ ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಕರೆ ಬಂದ ಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಜಾಗೃತಿ ಕಾರ್ಯಕ್ಕೆ ಒಲಿಂಪಿಯನ್ ಎಂ.ಆರ್ ಪೂವಮ್ಮ ಚಾಲನೆ ನೀಡಿದ್ದಾರೆ.
100 ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. 20 ಕ್ಕೂ ಅಧಿಕ ಎಮರ್ಜೆನ್ಸಿ ಪೊಲೀಸ್ ವೆಹಿಕಲ್ ಬಳಕೆ ಮಾಡಿ ಕಾರ್ಯಕ್ರಮ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತುರ್ತು ಸಂದರ್ಭದಲ್ಲಿ 112 ನಂಬರ್ಗೆ ಕರೆ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಲಾಗಿದೆ. ಎಮರ್ಜೆನ್ಸಿ ಕರೆ ಬಂದ ಸ್ಥಳಕ್ಕೆ ಗರಿಷ್ಠ 15 ನಿಮಿಷದ ಒಳಗೆ ತಲುಪುವ ERSS ವೆಹಿಕಲ್ ಹಾಗೂ ಈ ವಾಹನ ನಗರ ವ್ಯಾಪ್ತಿಯಲ್ಲಿ 5 ನಿಮಿಷದಲ್ಲಿ ಸ್ಥಳಕ್ಕೆ ಬಂದು ಸ್ಪಂದಿಸಲಿದೆ.
ಈ ಸೌಲಭ್ಯ ಬಳಕೆ ಹಾಗೂ ಸ್ಪಂದನೆಯ ಬಗೆಗೆ ಪ್ರಾಯೋಗಿಕವಾಗಿ ಕರೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರು ತುರ್ತು ಸಂದರ್ಭದಲ್ಲಿ 112 ಬಳಕೆ ಮಾಡುವಂತೆ ಕರೆ ನೀಡಲಾಗಿದೆ.
ಇದನ್ನೂ ಓದಿ: ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ; ಸುತ್ತೋಲೆ ವಾಪಸ್ ಪಡೆಯಲು ಸಚಿವ ಅಶ್ವತ್ಥನಾರಾಯಣ ಆದೇಶ
Published On - 3:10 pm, Sat, 28 August 21