ಮೈಸೂರು: ಜಿಲ್ಲೆಯ ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ(Mysore Central Jail). ಸನ್ನಡತೆ ಆಧಾರದ ಮೇಲೆ ಅರ್ಹ ಜೀವಾವಧಿ ಬಂಧಿಗಳ ಅವಧಿ ಪೂರ್ವ ಬಿಡುಗಡೆ ಮಾಡಲಾಗುತ್ತಿದೆ. ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 23 ಪುರುಷ, ಮಹಿಳೆ ಸೇರಿ ಒಟ್ಟು 24 ಕೈದಿಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹಾಗೂ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸುಮಾರು 14 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಸೋಮವಾರ ರಿಲೀಸ್ ಮಾಡಲಾಗಿದೆ. ಕಾರಾಗೃಹದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ದಿನೇಶ್ ಸಮ್ಮುಖದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೈದಿಗಳಿಗೆ ದಿನೇಶ್ ಅವರು, ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ರಾಜಸ್ಥಾನದ ಸಾವಲ್ ಸಿಂಗ್, ಪುತ್ತೂರಿನ ರಮೇಶ, ಉಡುಪಿಯ ಸುರೇಶ ಹರಿಜನ, ಹಾಸನದ ಪ್ರಶಾಂತ, ಮೈಸೂರಿನ ನಾಗರಾಜು, ಎಚ್.ಕೆ. ಪುಟ್ಟ, ಚಾಮರಾಜನಗರದ ರಾಮದಾಸ ನಾಯ್ಕ, ಕುಳ್ಳೇಗೌಡ, ಸುಂದ್ರಪ್ಪ, ತಿಮ್ಮ, ನಂಜನಗೂಡಿನ ಎಸ್.ಎಂ.ಸತೀಶ್ ಗೌಡ, ಶ್ರೀನಿವಾಸ, ಎಸ್.ನಟರಾಜ, ಜನಾರ್ಧನ, ನಿಂಗಪ್ಪ, ಮದ್ದೂರಿನ ಮಂಜುನಾಥ, ಸೋಮವಾರ ಪೇಟೆಯ ತಮ್ಮಯ್ಯ, ಗುರುಮೂರ್ತಿ, ಬಾಗಲಕೋಟೆಯ ರಿಯಾಜ್, ಮಳವಳ್ಳಿಯ ಸಿದ್ದೇಗೌಡ, ಹಾಸನದ ಎಂ.ಆರ್. ಸೋಮಶೇಖರ, ರಾಮೇಗೌಡ, ಮಂಡ್ಯದ ಎ.ಬಿ.ವಾಸು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಮ್ಮ ಬಿಡುಗಡೆಯಾದವರು.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ