‘ನಾನೂ ರೌಡಿ, ನಂಗೂ ಬಿಜೆಪಿ ಪಕ್ಷದಲ್ಲಿ ಸ್ಥಾನ ಕೊಡಿ’ ಎಂದು ಕೇಳಿಕೊಂಡ ರೌಡಿ ಶೀಟರ್​ ಈಗ ಪೊಲೀಸ್​ ಅತಿಥಿ

| Updated By: ರಮೇಶ್ ಬಿ. ಜವಳಗೇರಾ

Updated on: Dec 03, 2022 | 8:00 PM

'ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ' ಎಂದು ಬೋರ್ಡ್​ ಹಿಡಿದು ನಿಂತಿದ್ದ ನಿಜವಾದ ರೌಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ನಾನೂ ರೌಡಿ, ನಂಗೂ ಬಿಜೆಪಿ ಪಕ್ಷದಲ್ಲಿ ಸ್ಥಾನ ಕೊಡಿ ಎಂದು ಕೇಳಿಕೊಂಡ ರೌಡಿ ಶೀಟರ್​ ಈಗ ಪೊಲೀಸ್​ ಅತಿಥಿ
Mysuru rowdy protest
Follow us on

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರೌಡಿ ಶೀಟರ್​ ಪಾಲಿಟಿಕ್ಸ್ (Rowdy Sheeters Politics) ಜೋರಾಗಿದೆ. ಬಿಜೆಪಿಗೆ (BJP) ರೌಡಿ ಶೀಟರ್‌ಗಳು ಸೇರ್ಪಡೆಯಾಗಿದ್ದು, ಭಾರೀ ವಿವಾದವಾಗಿದೆ. ಇದರ ಬೆನ್ನಲ್ಲೇ ಇಲ್ಲೊಬ್ಬ ಭೂಪ ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ ಎಂದು ಬೋರ್ಡ್​ ಹಿಡಿದು ನಿಂತುಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.

ಇದನ್ನೂ ಓದಿ: ಮುಂದುವರೆದ ರೌಡಿಶೀಟರ್ ಜತೆಗಿನ ಬಿಜೆಪಿ ನಂಟು: ​ಪುರಸಭೆ ಸದಸ್ಯನಾಗಿ ರೌಡಿಯನ್ನು ನಾಮನಿರ್ದೇನ ಮಾಡಿದ ಸರ್ಕಾರ

ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಮಂಜು ಅಲಿಯಾಸ್ ಪಾನಿಪುರಿ ಮಂಜು ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ ಎಂದು ಬೋರ್ಡ್​ ಹಿಡಿದು ಪ್ರದರ್ಶನ ಮಾಡಿದ್ದಾನೆ, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಈತ ನಿಜ ಜೀವನದಲ್ಲಿ ರೌಡಿ ಶೀಟರ್ ಆಗಿದ್ದು,​. ಇದೀಗ ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಾನಿಪುರಿ ಮಂಜನನ್ನು ಕೆಆರ್.ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರೌಡಿಶೀಟರ್ ಮಂಜು, ಮೈಸೂರಿನ ಗಣೇಶ್ ನಗರ ನಿವಾಸಿ. ಈತ 2013ರಲ್ಲಿ ಕೊಲೆ ಯತ್ನ ಕೇಸ್‌ನಲ್ಲಿ ಜೈಲು ವಾಸ ಮಾಡಿದ್ದ. ಇದೇ ಸಂದರ್ಭದಲ್ಲಿ ಪಾನಿಪುರಿ ಮಂಜು ಬಗ್ಗೆ ಪೊಲೀಸರು ರೌಡಿ ಶೀಟರ್ ತೆರೆದಿದ್ದರು. ಇದೀಗ ಮಂಜು ಮೇಲೆ ಉದಯಗಿರಿ ಪೊಲೀಸರು ರೌಡಿ ಶೀಟರ್ ತೆರೆದಿದ್ದು ಹೆಚ್ಚಿನ‌ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!

ಕಳೆದ ಕೆಲ ದಿನಗಳಿಂದ ಬಿಜೆಪಿ ಜೊತೆ ಕುಖ್ಯಾತ ರೌಡಿ ಶೀಟರ್‌ ಸೈಲೆಂಟ್‌ ಸುನೀಲ, ವಿಲ್ಸನ್‌ ಗಾರ್ಡನ್‌ ನಾಗ, ಬೆತ್ತನಗರೆ ಶಂಕರ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಅಲ್ಲದೇ ಮಂಡ್ಯದ ರೌಡಿ ಶೀಟರ್ ಫೈಟರ್ ರವಿಯನ್ನು ಮೊನ್ನೇ ಅಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದ ರಾಜ್ಯ ರಾಜಕಾರಣದಲ್ಲಿ ರೌಡಿ ಶೀಟರ್​​ಗಳು ಕಾರುಬಾರು ಜೋರಾಗಿದೆ. ಇದೀಗ ಮಂಜು ಅಲಿಯಾಸ್ ಪಾನಿಪುರಿ ಮಂಜು ಎಂಬಾತ ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ್ದು ಸದ್ಯಕ್ಕೆ ಪೊಲೀಸರ ಅತಿಥಿ ಆಗಿದ್ದಾನೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:59 pm, Sat, 3 December 22