ಮೈಸೂರು: ಚಿರತೆ ದಾಳಿಯಿಂದ(Leopard Attack) ಕಂಗೆಟ್ಟಿದ್ದ ಮೈಸೂರು ಜಿಲ್ಲೆಯ ಜನರಿಗೆ ಇದೀಗ ಹುಲಿ ಆತಂಕ(Tiger Attack) ಎದುರಾಗಿದೆ. ಟಿ. ನರಸೀಪುರದಲ್ಲಿ ಚಿರತೆ ದಾಳಿಗೆ ನಾಲ್ಕು ತಿಂಗಳಲ್ಲಿ ನಾಲ್ಕು ಮಂದಿ ಬಲಿಯಾಗಿದ್ರೆ, ಮತ್ತೊಂದೆಡೆ ಹೆಚ್ಡಿ ಕೋಟೆ(HD Kote) ವ್ಯಾಪ್ತಿಯಲ್ಲಿಯೂ ಹುಲಿ ದಾಳಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ(Nagarahole Tiger Reserve) ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 18 ವರ್ಷದ ಯುವಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದಾರೆ.
ಡಿ.ಬಿ. ಕುಪ್ಪೆ ಅರಣ್ಯ ವಲಯದ ಬಳ್ಳೆ ಹಾಡಿಯ ಬಿ.ಕಾಳ ಎಂಬುವರ ಮಗ ಮಂಜು ಹುಲಿ ದಾಳಿಗೆ ಬಲಿಯಾಗಿದ್ದಾರೆ. ನಿನ್ನೆ ಹಾಡಿ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಮಂಜು ಸೌದೆ ಸಂಗ್ರಹಿಸಲೆಂದು ಒಬ್ಬನೇ ತೆರಳಿದ್ದರು. ಈ ವೇಳೆ ಪೊದೆಯ ಒಳಗೆ ಅವಿತು ಕುಳಿತಿದ್ದ ಹುಲಿ ದಾಳಿ ಮಾಡಿತ್ತು. ಮಿದುಳು ಹಾಗೂ ಮಾಂಸ ಕಿತ್ತು ಬರುವಂತೆ ಯುವಕನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ.
ಅರಣ್ಯ ಇಲಾಖೆ ವಸತಿಗೃಹದ ಹಿಂಭಾಗ ಹುಲಿಯ ಚೀರಾಟ ಕೇಳಿ, ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಓಡಿಹೋಗಿ ನೋಡಿದ್ದಾರೆ. ಇದೇ ವೇಳೆ ಹುಲಿ ಇವರನ್ನು ನೋಡಿ ಮೃತ ದೇಹ ಬಿಟ್ಟು ಅರಣ್ಯದ ಪೊದೆಯೊಳಗೆ ಸೇರಿಕೊಂಡಿದೆ. ತಕ್ಷಣ ಮೃತ ದೇಹವನ್ನು ಹುಲಿ ಎಳೆದುಕೊಂಡು ಹೋಗಬಹುದು ಎಂದು ಭಾವಿಸಿ ಅರಣ್ಯ ಇಲಾಖೆಯ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನಿಸಿದ್ದಾರೆ.
ಇದನ್ನೂ ಓದಿ: Mysore News: ಟಿ.ನರಸೀಪುರ ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿ, 15 ದಿನಗಳಲ್ಲಿ ಕಬ್ಬು ಕಟಾವಿಗೆ ಆದೇಶ
ಅರಣ್ಯ ಇಲಾಖೆ ಅಧಿಕಾರಿಗಳು ಹಾಡಿ ಜನರ ಗಮನಕ್ಕೆ ತರದೆ, ಬಾಲಕನ ಮೃತದೇಹವನ್ನು ಏಕಾಏಕಿ ಸ್ಥಳ ಮಹಜರು ಮಾಡದೆ ಕುಟುಂಬಸ್ಥರ ಗಮನಕ್ಕೆ ತಾರದೆ ಮೃತ ದೇಹವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಹೆಚ್.ಡಿ. ಕೋಟೆ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಮತ್ತೆ ಸೋಮವಾರ ಬೆಳಗ್ಗೆ ಯುವಕನನ್ನು ಬಲಿ ಪಡೆದ ಜಾಗದಲ್ಲೇ ಹುಲಿ ಪ್ರತ್ಯಕ್ಷವಾಗಿದ್ದು, ಬಳ್ಳೆ ಅರಣ್ಯ ಕಚೇರಿ ಪಕ್ಕದಲ್ಲೇ ಸುಮಾರು ಮೂರು ಗಂಟೆಗಳ ಕಾಲ ಪೋದೆಯಲ್ಲೇ ಹುಲಿ ಕುಳಿತಿತ್ತು. ಅದನ್ನು ಶೂಟ್ ಮಾಡುವಂತೆ ಹೇಳಿದ್ರು ಅರಣ್ಯ ಇಲಾಖೆ ಸಿಬ್ಬಂದಿ ಶೂಟ್ ಮಾಡಿಲ್ಲ
ನಿನ್ನೆ ಹುಲಿ ಕಂಡು ಹಾಡಿ ಜನ್ರು ಮತ್ತೆ ಆತಂಕಕ್ಕೆ ಒಳಗಾಗಿದ್ರು. ಇನ್ನೂ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಇದುವರೆಗೆ ನಾಲ್ವರು ಬಲಿಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಾನಿಮೂಲೆ ಹಾಡಿ ಹಾಗೂ ಸೇಬಿನ ಕೊಲ್ಲಿ ಹಾಡಿಯ ಇಬ್ಬರು ಆದಿವಾಸಿಗಳು ಹಾಗೂ ಗುಂಡ್ರೆ ಹುಲ್ ಮೆಟ್ಲು ವ್ಯಕ್ತಿ ಸೇರಿ ಮೂವರನ್ನು ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು. ನಂತರ ಅರಣ್ಯ ಇಲಾಖೆ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ಮಳ್ಳೂರು ಗೇಟ್ ಸಮೀಪ ಹುಲಿಯನ್ನು ಸೆರೆ ಹಿಡಿಯಲಾಗಿತ್ತು.
ಮೃತನ ಕುಟುಂಬಕ್ಕೆ 2.5. ಲಕ್ಷ ಪರಿಹಾರವನ್ನು ನೀಡಲಾಗಿದೆ. ಪರಿಹಾರಕ್ಕಿಂತ ನಮಗೆ ಸೂಕ್ತ ರಕ್ಷಣೆ ಕೊಡಿ ಎಂದು ಹಾಡಿ ಜನ ಒತ್ತಾಯಿಸಿದ್ದಾರೆ. ಮತ್ತೊಂದು ಕಡೆ ಟಿ ನರಸೀಪುರದಲ್ಲಿ ಇನ್ನು ಚಿರತೆ ಸೆರೆ ಸಿಕ್ಕಿಲ್ಲದಿರುವುದು ಜನರ ನಿದ್ದೆಗೆಡಿಸಿದೆ.
ಇನ್ನು ಹುಲಿ ದಾಳಿಗೆ ಯುವಕ ಸಾವು ಪ್ರಕರಣ ಹಿನ್ನೆಲೆ ಹುಲಿ ದಾಳಿ ನಡೆದ ಪ್ರದೇಶದಲ್ಲಿ ಸಫಾರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಹಾಗೂ ಅರಣ್ಯ ಸಮೀಪದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಕೂಂಬಿಂಗ್ ಮೂಲಕ ಹುಲಿಯನ್ನು ಕಾಡಿಗೆ ಕಳುಹಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:27 am, Tue, 24 January 23