ಪೊಲೀಸ್ ಠಾಣೆಯನ್ನೇ ಮನೆ ಮಾಡಿಕೊಂಡರಾ ಮೈಸೂರಿನ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್!

| Updated By: ಸಾಧು ಶ್ರೀನಾಥ್​

Updated on: Dec 09, 2021 | 2:06 PM

ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ತಮ್ಮ ತಂದೆಯ ಬರ್ತ್​​ಡೆಯನ್ನು ತಾವು ಅಧಿಕಾರದಲ್ಲಿರುವ ಠಾಣೆಯಲ್ಲಿ ಆಚರಿಸಿದ್ದಾರೆ. ಬಾಲಕೃಷ್ಣ ಅವರ ತಂದೆ ನಂಜುಡೇಗೌಡ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಭರ್ಜರಿಯಾಗಿ ನಡೆದಿದೆ.

ಪೊಲೀಸ್ ಠಾಣೆಯನ್ನೇ ಮನೆ ಮಾಡಿಕೊಂಡರಾ ಮೈಸೂರಿನ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್!
ಪೊಲೀಸ್ ಠಾಣೆಯನ್ನೇ ಮನೆ ಮಾಡಿಕೊಂಡಿರಾ ಇನ್ಸ್‌ಪೆಕ್ಟರ್!
Follow us on

ಮೈಸೂರು: ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ತಂದೆಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಪೊಲೀಸ್ ಠಾಣೆಯನ್ನೇ ಮನೆ ಮಾಡಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ (Mysuru Vijayanagara Police Station) ಈ ಯಡವಟ್ಟಿನ ಘಟನೆ ನಡೆದಿದೆ. ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ತಮ್ಮ ತಂದೆಯ ಬರ್ತ್​​ಡೆಯನ್ನು ತಾವು ಅಧಿಕಾರದಲ್ಲಿರುವ ಠಾಣೆಯಲ್ಲಿ ಆಚರಿಸಿದ್ದಾರೆ. ಬಾಲಕೃಷ್ಣ ಅವರ ತಂದೆ ನಂಜುಡೇಗೌಡ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಭರ್ಜರಿಯಾಗಿ ನಡೆದಿದೆ.

ಠಾಣೆಯಲ್ಲಿ ಪತ್ನಿ ಮತ್ತು ‌ಮಕ್ಕಳ ಜೊತೆ ತಂದೆಯ ಬರ್ತ್​​ಡೆಯನ್ನು ಇನ್ಸ್‌ಪೆಕ್ಟರ್ ಬಾಲಕೃಷ್ಣ ಆಚರಿಸಿದ್ದಾರೆ. ಇನ್ಸ್‌ಪೆಕ್ಟರ್ ಬಾಲಕೃಷ್ಣ ವರ್ತನೆಗೆ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕೇಳಿಬಂದಿದೆ.

ಮಂಡ್ಯ-ಮೈಸೂರಿನ ದೇವಸ್ಥಾನಗಳ ವಿಗ್ರಹ, ವಸ್ತುಗಳ ಧ್ವಂಸ; ಆರೋಪಿಯ ಬಂಧನ
ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇವಸ್ಥಾನಗಳ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ ಆರೋಪದಲ್ಲಿ ಮೈಸೂರು ಜಿಲ್ಲಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇಗುಲಗಳ ವಸ್ತುಗಳು ಹಾಗೂ ಮತ್ತೆರಡು ದೇವಾಲಯಗಳ ವಿಗ್ರಹಗಳನ್ನು ಹಾಳು ಮಾಡಿದ ವಿಷಯ ಗೊತ್ತಾದ 24 ಗಂಟೆಗಳು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಕೆ.ಆರ್​ ನಗರ ತಾಲೂಕಿನ ಚಿಕ್ಕಬೇರ್ಯ ಗ್ರಾಮದವನಾಗಿದ್ದು, ಆತನನ್ನು ಕೆಆರ್​ ಪೇಟೆಯ ಬೀರವಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಮೈಸೂರಿನ ಸಾಲಿಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯ ಎರಡು ದೇವಸ್ಥಾನ ಹಾಗೂ ಕೆ.ಆರ್​ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ದೇವಸ್ಥಾನಗಳ ವಿಗ್ರಹಗಳು ಹಾಗೂ ದೇಗುಲಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಳು ಮಾಡಿದ್ದ. ನಂತರ ಊರಿನಿಂದ ತಲೆ ಮರೆಸಿಕೊಂಡು ಪಾರಿಯಾಗಿದ್ದ. ದೇವರ ವಿಗ್ರಹಗಳನ್ನು ಹಾಳು ಮಾಡಿದ ಬಗ್ಗೆ ದೂರು ದಾಖಲಾಗಿತ್ತು.

Published On - 2:04 pm, Thu, 9 December 21