ಮೈಸೂರು: ಅತ್ತ ಅಫ್ಘಾನಿಸ್ತಾನದಲ್ಲಿ ನಾಗರಿಕರ ಬದುಕು ಮೂರಾಬಟ್ಟೆಯಾಗಿದೆ. ಆದರೆ ಅಲ್ಲಿನ ಅನೇಕ ವಿದ್ಯಾರ್ಥಿಗಳು ನಾನಾ ದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಅನೇಕ ಮಂದಿ ಕರ್ನಾಕದಲ್ಲಿಯೂ ಇದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ 92 ಅಫ್ಘಾನಿಸ್ತಾನ ವಿದ್ಯಾರ್ಥಿಗಳು ನೆಲೆಸಿದ್ದಾರೆ. ಅವರೆಲ್ಲಾ ಮೈಸೂರು ವಿಶ್ವ ವಿದ್ಯಾಲಯದಲ್ಲಿ ನಿರಾತಂಕವಾಗಿ ವ್ಯಾಸಂಗ ನಿರತರಾಗಿದ್ದಾರೆ.
ಈ ಬಗ್ಗೆ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‌ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು ವಿವಿಯಲ್ಲಿ 92 ಅಫ್ಘಾನ್ ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರೂ ನಿರ್ಭೀತಿಯಿಂದ ಇದ್ದಾರೆ. ಯಾರಿಗೂ ಯಾವುದೇ ರೀತಿಯ ಆತಂಕ ಇಲ್ಲ. ಸದ್ಯಕ್ಕೆ ವಿದ್ಯಾರ್ಥಿಗಳಿಂದ ಯಾವುದೇ ಬೇಡಿಕೆ ಬಂದಿಲ್ಲ. ಎಲ್ಲರೂ ನಿರ್ಭೀತಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವ ವಿದ್ಯಾರ್ಥಿಯೂ ತಾಯ್ನಾಡಿಗೆ ಹೋಗುತ್ತಿಲ್ಲ. ಸೆಪ್ಟೆಂಬರ್ 20ರಿಂದ ಅವರಿಗೆ ವಿವಿಧ ಕೋರ್ಸ್ ಗಳಿಗೆ ಪರೀಕ್ಷೆ ಇದೆ. ಅಕ್ಟೋಬರ್ ಮೊದಲ ವಾರದವರೆಗೂ ಪರೀಕ್ಷೆ ನಡೆಯುತ್ತದೆ ಎಂದು ಅವರು ವಿವರಿಸಿದ್ದಾರೆ.
ಅಫ್ಘಾನ್ ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಆದರೂ ಇಂಟರ್ ನ್ಯಾಷನಲ್ ಡೈರೆಕ್ಟರ್ ಬಗೆಹರಿಸುತ್ತಾರೆ. ಅವರಿಂದ ಸಮಸ್ಯೆ ಬಗೆಹರಿಯದ ಸಮಯದಲ್ಲಿ ನಾವು ಮುಂದೆ ಬರುತ್ತವೆ. ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಬೇಡಿಕೆಗೆ ವಿವಿ ಸ್ಪಂದಿಸುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಹಿನ್ನೆಲೆ ಆಫ್ಘನ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ನಾವಿದ್ದೇವೆ. ವೀಸಾ ಅವಧಿ ವಿಸ್ತರಣೆ ಮಾಡಿದರೆ ಸಹಾಯ ಮಾಡ್ತೇವೆ. ವಿದ್ಯಾರ್ಥಿಗಳು ಮೈಸೂರಿನಲ್ಲಿಯೇ ಇರಲು ವ್ಯವಸ್ಥೆ ಮಾಡುತ್ತೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‌ಕುಮಾರ್ ಭರವಸೆಯ ಮಾತುಗಳನ್ನಾಡಿದ್ದಾರೆ.
ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು
(ninety two afghanistan students are in mysore university they are calm mysore university chancellor)
Published On - 11:08 am, Tue, 17 August 21